ETV Bharat / bharat

ರೈಲು ನಿಲ್ದಾಣದಲ್ಲಿ ಏಕಾಏಕಿ ಕುಸಿದು ಬಿದ್ದ ಪಾದಚಾರಿ ಸೇತುವೆ.. 20 ಮಂದಿಗೆ ಗಾಯ, 8 ಜನರ ಸ್ಥಿತಿ ಗಂಭೀರ - ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಲಾರ್‌ಪುರ ರೈಲು ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದು ಬಿದ್ದಿದೆ.

mh-ballarpur-railway-station-bridge-collapses-ten-people-critical
ರೈಲು ನಿಲ್ದಾಣದಲ್ಲಿ ಏಕಾಏಕಿ ಕುಸಿದು ಬಿದ್ದ ಪಾದಚಾರಿ ಸೇತುವೆ
author img

By

Published : Nov 27, 2022, 6:42 PM IST

Updated : Nov 27, 2022, 8:14 PM IST

ಚಂದ್ರಾಪುರ (ಮಹಾರಾಷ್ಟ್ರ): ಪಾದಚಾರಿ ಸೇತುವೆ ಹಠಾತ್ ಆಗಿ ಕುಸಿದಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಲಾರ್‌ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಪರಿಣಾಮ ಸೇತುವೆ ಮೇಲಿದ್ದ ಅನೇಕ ಜನರು ಕೆಳಗೆ ಬಿದ್ದು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೆ, 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ರೈಲು ನಿಲ್ದಾಣದ ಹಳೆ ಸೇತುವೆ ಇದಾಗಿದ್ದು, ರೈಲೊಂದು ಬರುತ್ತಿದ್ದಾಗ ಈ ಸೇತುವೆ ಮೇಲೆ ಸಾಕಷ್ಟು ಪ್ರಯಾಣಿಕರು ಜಮಾಯಿಸಿದ್ದರು. ಈ ವೇಳೆ ಏಕಾಏಕಿ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಚಂದ್ರಾಪುರಕ್ಕೆ ರವಾನಿಸಲಾಗಿದೆ.

ರೈಲು ನಿಲ್ದಾಣದಲ್ಲಿ ಏಕಾಏಕಿ ಕುಸಿದು ಬಿದ್ದ ಪಾದಚಾರಿ ಸೇತುವೆ

ಭಾನುವಾರ ಸಂಜೆ ಸಂಜೆ 5.10ರ ಸುಮಾರಿಗೆ ಈ ದುರಂತಕ್ಕೆ ನಡೆದಿದೆ. ರೈಲಿನ ನಿಲ್ದಾಣದ 1 ಮತ್ತು 2 ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ಈ ಪಾದಚಾರಿ ಸೇತುವೆ ಸಂಪರ್ಕಿಸುತ್ತಿತ್ತು. ಹಳೆ ಸೇತುವೆಯಾದ ಇದ ಶಿಥಿಲವಾಗಿತ್ತು. ಆದ್ದರಿಂದ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ, ಅದರ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರಯಾಣಿಕರು ಇದೇ ಸೇತುವೆಯನ್ನು ಬಳಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕೇಂದ್ರ ರೈಲ್ವೇ ಮುಖ್ಯ ವಕ್ತಾರ ಶಿವಾಜಿ ಸುತಾರ್ ತಿಳಿಸಿದ್ದಾರೆ. ಅಲ್ಲದೇ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ರೈಲ್ವೆ ಇಲಾಖೆ ಘೋಷಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು - ಹೌರಾ ದುರಂತೋ ಎಕ್ಸ್​ಪ್ರೆಸ್​ ರೈಲಿನಲ್ಲಿ ದಟ್ಟ ಹೊಗೆ.. ವಿಡಿಯೋ

Last Updated : Nov 27, 2022, 8:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.