ETV Bharat / bharat

ನಮ್ಮೂರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಿ: ಪಿಎಂಗೆ ಪತ್ರ ಬರೆದ 13ರ ಪೋರ!

author img

By

Published : Jun 15, 2021, 7:31 PM IST

Updated : Jun 15, 2021, 7:54 PM IST

ಹೇಗಾದರೂ ಲ್ಯಾಪ್​ಟಾಪ್​, ಸ್ಮಾರ್ಟ್​ಫೋನ್ ಹೊಂದಿಸಿಕೊಂಡು ಆನ್ಲೈನ್ ಕ್ಲಾಸ್​ ಕೇಳುವುದಕ್ಕೂ ಈ ಪ್ರದೇಶದಲ್ಲಿ ನೆಟ್ವರ್ಕ್ ಇಲ್ಲ. ಹಾಗಾಗಿ ತುಷಾರ್​ ತಮ್ಮ ಗ್ರಾಮಕ್ಕೆ ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ನಮ್ಮೂರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಿ: ಪಿಎಂಗೆ ಪತ್ರ 13 ರ ಪೋರ..!

ಅಹಮದ್​ನಗರ (ಮಹಾರಾಷ್ಟ್ರ): ನಮ್ಮೂರು ಪೋಪ್ಸೊಂಡಿ ಗ್ರಾಮ. ಇಲ್ಲಿ ಸಂಚರಿಸಲು ರಸ್ತೆಯಿಲ್ಲ, ನೀರಿನ ವ್ಯವಸ್ಥೆಯೂ ಇಲ್ಲ, ಆನ್ಲೈನ್ ಪಾಠ ಕೇಳಲು ನೆಟ್ವರ್ಕ್​​ ಸೇರಿದಂತೆ ಕನಿಷ್ಠ ಮೂಲ ಸೌಕರ್ಯವೂ ಇಲ್ಲ. ದಯವಿಟ್ಟು ಇವೆಲ್ಲವನ್ನೂ ಒದಗಿಸಿ ಕೊಡಿ ಎಂದು ಮನವಿ ಮಾಡಿ 13 ವರ್ಷದ ಬಾಲಕ ತುಷಾರ್​ ಮುಥೆ ಎಂಬಾತ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾನೆ.

ನಮ್ಮೂರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಿ: ಪಿಎಂಗೆ ಪತ್ರ ಬರೆದ 13ರ ಪೋರ!

ಪೋಪ್ಸೊಂಡಿ ಗ್ರಾಮದ ತುಷಾರ್​ ಮುಥೆ ಬುಡಕಟ್ಟು ಅಭಿವೃದ್ಧಿ ಇಲಾಖೆಯ ಬೆಂಬಲದೊಂದಿಗೆ ವೀರಗಾಂವ್​​ನ ಧರ್ಮವೀರ್​ ಆನಂದ್ ದಿಘೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ.

ಕೋವಿಡ್​​ ಬರುವುದಕ್ಕೂ ಮೊದಲು ಎಲ್ಲರೂ ಶಾಲೆಗೆ ಹೋಗಿ ಕಲಿಯುತ್ತಿದ್ದರು. ಆದರೆ, ಕೊರೊನಾ ಬಂದ ಮೇಲೆ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಮರ್ಪಕ ರಸ್ತೆಯಿಲ್ಲದ ಕಾರಣ, ಮಳೆಗಾಲದಲ್ಲಿ ಈ ಭಾಗಕ್ಕೆ ಒಂದೂ ಬಸ್​ ಬರಲ್ಲ. ಹೇಗಾದರೂ ಮಾಡಿ ಲ್ಯಾಪ್​ಟಾಪ್​, ಸ್ಮಾರ್ಟ್​ಫೋನ್ ಹೊಂದಿಸಿಕೊಂಡು ಆನ್ಲೈನ್ ಕ್ಲಾಸ್​ ಕೇಳುವುದಕ್ಕೂ ಈ ಪ್ರದೇಶದಲ್ಲಿ ನೆಟ್ವರ್ಕ್ ಇಲ್ಲ ಎಂದು ಬಾಲಕ ತಮ್ಮೂರಿನ ಸಮಸ್ಯೆಯನ್ನು ಎಳೆಎಳೆಯಾಗಿ ಪ್ರಧಾನಿಗೆ ವಿವರಿಸಿದ್ದಾನೆ.

ಅಲ್ಲದೆ ವಿದ್ಯಾರ್ಥಿ ತುಷಾರ್​ ತಮ್ಮ ಗ್ರಾಮಕ್ಕೆ ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾನೆ.

ಇದನ್ನೂ ಓದಿ:ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಪ್ರತಿಮೆ ಅನಾವರಣ

Last Updated : Jun 15, 2021, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.