ಹೈದರಾಬಾದ್: ಇಂದು ವಿಶ್ವಾದ್ಯಂತ ಕ್ರಿಸ್ಮಸ್ ಸಂಭ್ರಮ. ಡಿಸೆಂಬರ್ 25 ರಂದು ಕ್ರಿಶ್ಚಿಯನ್ರಿಗೆ ಎಲ್ಲಿಲ್ಲದ ಸಡಗರ. ಕ್ರಿಸ್‌ಮಸ್ ಮಹತ್ವದ ಧಾರ್ಮಿಕ ಹಬ್ಬವಾಗಿದ್ದು, ಅದು ಜಾಗತಿಕ ಸಾಂಸ್ಕೃತಿಕ ಮತ್ತು ವಾಣಿಜ್ಯ ವಿದ್ಯಮಾನವಾಗಿ ಬೆಳೆದಿದೆ.
ಕ್ರಿಸ್ಮಸ್ ಇತಿಹಾಸ : "ಕ್ರಿಸ್ಮಸ್" ಎಂಬ ಪದವು ಹಳೆಯ ಇಂಗ್ಲಿಷ್ ಪದವಾಗಿದೆ. ಇದನ್ನು "ಕ್ರಿಸ್ತನ ಮಾಸ್" ಎಂದು ಕರೆಯಲಾಗುತ್ತದೆ. ಐತಿಹಾಸಿಕವಾಗಿ, ಮೊದಲ ದಾಖಲಿತ ಕ್ರಿಸ್ಮಸ್ ಆಚರಣೆ ರೋಮನ್ ಚಕ್ರವರ್ತಿ ಕಾನ್ಸ್ಟಂಟೈನ್ ಆಳ್ವಿಕೆಯಲ್ಲಿ ಆಚರಣೆ ಮಾಡಲಾಯಿತು, ಕ್ರಿ.ಶ 336 ರಕ್ಕೂ ಹಿಂದಿನಿಂದ ಈ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದು ಶ್ರೀಮಂತ ಇತಿಹಾಸದೊಂದಿಗೆ ದೀರ್ಘಕಾಲದ ಸಂಪ್ರದಾಯವಾಗಿ ಆಚರಣೆಗೆ ಬಂದಿದೆ.
ಕ್ರಿಸ್ಮಸ್‌ನ ಮೂಲವು ವೈವಿಧ್ಯಮಯ ಸಾಂಸ್ಕೃತಿಕ ಆಚರಣೆಗಳೊಂದಿಗೆ ಹೆಣೆದುಕೊಂಡಿದೆ. ಯುರೋಪಿಯನ್ನರು, ಯೇಸುವಿನ ಜನನಕ್ಕೂ ಮುನ್ನವೇ ದೀರ್ಘ ಚಳಿಗಾಲದ ದಿನಗಳಲ್ಲಿ ಬೆಳಕು ಮತ್ತು ಜನನದ ಸಂಕೇತಗಳನ್ನು ತಿಳಿದು ಆಚರಣೆ ಮಾಡುತ್ತಿದ್ದರು. ಸ್ಕ್ಯಾಂಡಿನೇವಿಯಾದಲ್ಲಿ ನಾರ್ಸ್ ಚಳಿಗಾಲದಲ್ಲಿ ಯೂಲ್ ಆಚರಿಸುತ್ತಿದ್ದರು. ಆದರೆ, ರೋಮನ್ನರು ಸ್ಯಾಟರ್ನಾಲಿಯಾವನ್ನು ಆಚರಿಸುತ್ತಿದ್ದರು. ಡಿಸೆಂಬರ್ 17 ರಂದೇ ಈ ಆಚರಣೆ ಪ್ರಾರಂಭವಾಗುತ್ತದೆ.
ಮಧ್ಯಕಾಲೀನ ಹಬ್ಬಗಳು ಹನ್ನೆರಡು ದಿನಗಳಷ್ಟು ವ್ಯಾಪಿಸಿದ್ದು, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಇದು ಜನವರಿ 6ರ ವರೆಗೂ ಮುಂದುವರೆಯುತ್ತಿತ್ತು. 'ಹನ್ನೆರಡನೇ ರಾತ್ರಿ' ಆಚರಣೆಗಳು ಮುಕ್ತಾಯವಾಗುತ್ತಿತ್ತು. ವಿಕ್ಟೋರಿಯನ್ ಯುಗದಲ್ಲಿ ಕ್ರಿಸ್ಮಸ್ ಹೆಚ್ಚು ಕುಟುಂಬ ಆಧಾರಿತ ಹಬ್ಬವಾಗಿ ಅಭಿವೃದ್ಧಿ ಹೊಂದಲು ಸಾಕ್ಷಿಯಾಯಿತು. ಹಬ್ಬದ ಜನಪ್ರೀಯತೆ ಹಾಗೂ ಜನಮಾನಸದ ಆಚರಣೆ ಆಗುತ್ತಿದ್ದಂತೆ ರಾಣಿ ವಿಕ್ಟೋರಿಯಾ ಮತ್ತು ಪ್ರಿನ್ಸ್ ಆಲ್ಬರ್ಟ್ ರಜಾದಿನವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಕ್ರಿಸ್ಮಸ್ ಮರಗಳನ್ನು ಜನಪ್ರಿಯಗೊಳಿಸಿದರು ಮತ್ತು ಕುಟುಂಬ ಸಮೇತ ಹಬ್ಬವನ್ನು ಆಚರಣೆ ಮಾಡುವಂತೆ ಒತ್ತು ನೀಡಿದರು.
ಆರಂಭಿಕ ಕ್ರಿಶ್ಚಿಯನ್ ದಿನಗಳಲ್ಲಿ ಈಸ್ಟರ್ ಯೇಸುವಿನ ಜನ್ಮಕ್ಕಿಂತ ಹೆಚ್ಚಿನ ಆದ್ಯತೆ ಹೊಂದಿತ್ತು. ನಿಖರವಾದ ಜನ್ಮ ದಿನಾಂಕದ ಬಗ್ಗೆ ಬೈಬಲ್ ಮೌನವಾಗಿದ್ದರೂ, ಕ್ರಿಸ್ಮಸ್ ಅನ್ನು ರಜಾದಿನವಾಗಿ ಸ್ಥಾಪಿಸುವ ನಿರ್ಧಾರವು ನಾಲ್ಕನೇ ಶತಮಾನದಲ್ಲಿ ಆರಂಭವಾಯಿತು. ಪೋಪ್ ಜೂಲಿಯಸ್ I ಡಿಸೆಂಬರ್ 25 ಅನ್ನು ರಜಾ ದಿನವನ್ನಾಗಿ ಆಯ್ಕೆ ಮಾಡಿದರು, ಈ ದಿನಾಂಕವು ಪೇಗನ್ ಸ್ಯಾಟರ್ನಾಲಿಯಾ ಹಬ್ಬದೊಂದಿಗೆ ಹೊಂದಿಕೆಯಾಗುತ್ತದೆ ಎಂದು ನಂಬಲಾಗಿದೆ. ಇದು ಸಂಪ್ರದಾಯಗಳ ಸಮೀಕರಣಕ್ಕೆ ಸಹಾಯ ಮಾಡುತ್ತದೆ.
ಪ್ರಾಚೀನ ಕ್ರಿಶ್ಚಿಯನ್ ದಂತಕಥೆ ಪ್ರಕಾರ ಯೇಸುವಿನ ಪರಿಕಲ್ಪನೆಯನ್ನು ಮಾರ್ಚ್ 25ರ ಘೋಷಣೆಯೊಂದಿಗೆ ಸಂಬಂಧ ಕಲ್ಪಿಸುತ್ತದೆ, ಡಿಸೆಂಬರ್ 25 ರಂದು ಏಸು ಜನ್ಮ ದಿನವಾಗಿದೆ. ಐತಿಹಾಸಿಕ ಪುರಾವೆಗಳು ವಸಂತಕಾಲದ ಜನ್ಮವನ್ನು ಸೂಚಿಸುತ್ತವೆಯಾದರೂ, ಡಿಸೆಂಬರ್ 25 ಎಂದು ಚರ್ಚೆ ಆಯ್ಕೆ ಮಾಡಿಕೊಂಡ ದಿನಾಂಕವೇ ಈಗ ಅಸ್ಥಿತ್ವದಲ್ಲಿದೆ. ಸಂಪ್ರದಾಯಗಳು ಮತ್ತು ನಂಬಿಕೆಗಳ ಸಂಕೀರ್ಣವಾದ ಹೆಣೆಯುವಿಕೆ ಈ ನಂಬಿಕೆಯನ್ನು ಬಲವಾಗಿಸಿದೆ.
ಈ ಸಾಂತಾ ಕ್ಲಾಸ್ ಯಾರು?: ಪರೋಪಕಾರಿ ಸೇಂಟ್ ನಿಕೋಲಸ್ನೊಂದಿಗೆ ಈ ಸಂಪ್ರದಾಯ ಬೇರೂರಿದೆ. ಉದಾರತೆ ಮತ್ತು ರಕ್ಷಣೆಯ ವ್ಯಕ್ತಿಯಾಗಿ ಸಾಂತಾ ಕ್ಲಾಸ್ ಹೊರಹೊಮ್ಮಿದ್ದಾರೆ. ಸೇಂಟ್ ನಿಕೋಲಸ್ ಕ್ರಿ.ಶ. 280 ರ ಸುಮಾರಿಗೆ ಟರ್ಕಿಯಲ್ಲಿ ಜನಿಸಿದರು. ಅವರು ಆರಂಭದಲ್ಲಿ ಕ್ರಿಶ್ಚಿಯನ್ ಚರ್ಚ್‌ನಲ್ಲಿ ಬಿಷಪ್ ಆಗಿದ್ದರು, ಅವರು ತಮ್ಮ ನಂಬಿಕೆಗಳಿಗಾಗಿ ಕಿರುಕುಳಕ್ಕೊಳಗಾದವರು ಮತ್ತು ಸೆರೆವಾಸ ಕೂಡಾ ಅನುಭವಿಸಿದರು. ಅವರು ತಮ್ಮ ಪಿತ್ರಾರ್ಜಿತ ಸಂಪತ್ತನ್ನು ಬಿಟ್ಟುಕೊಟ್ಟು ಹಳ್ಳಿಗಾಡಿನಲ್ಲಿ ಸುತ್ತಾಡಿದರು, ಬಡವರಿಗೆ ಮತ್ತು ರೋಗಿಗಳಿಗೆ ಸಹಾಯ ಮಾಡಿದರು, "ಮಕ್ಕಳ ಮತ್ತು ನಾವಿಕರ ರಕ್ಷಕ" ಎಂಬ ಬಿರುದನ್ನು ಸಹ ಪಡೆದುಕೊಂಡರು.
ಅವರ ಗೌರವಾರ್ಥವಾಗಿ, ಡಿಸೆಂಬರ್ 6 ಅನ್ನು ಸೇಂಟ್ ನಿಕೋಲಸ್ ಡೇ ಎಂದು ಗೊತ್ತುಪಡಿಸಲಾಗಿದೆ. ಸಮಯ ಕಳೆದಂತೆ, ಪ್ರತಿ ಯುರೋಪಿಯನ್ ಸಮಾಜವು ಸೇಂಟ್ ನಿಕೋಲಸ್ ತಮ್ಮ ಆರಾಧ್ಯದೈವ ಎಂಬಂತೆ ಆಚರಣೆಗೆ ತಂದರು. ಕ್ರೈಸ್ಟ್‌ಕೈಂಡ್ ಅಥವಾ ಕ್ರಿಸ್ ಕ್ರಿಂಗಲ್ ಸ್ವಿಸ್ ಮತ್ತು ಜರ್ಮನ್ ಸಂಸ್ಕೃತಿಗಳಲ್ಲಿ ಉತ್ತಮ ನಡತೆಯ ಯುವಕರಿಗೆ ಉಡುಗೊರೆಗಳನ್ನು ತರಲು ಸೇಂಟ್ ನಿಕೋಲಸ್ ಜೊತೆಗೂಡಿದರು. ಜುಲ್ಟೋಮ್ಟೆನ್ ಒಬ್ಬ ಹರ್ಷಚಿತ್ತದ ಯಕ್ಷಿಣಿಯಾಗಿದ್ದು, ಅವರು ಮೇಕೆಗಳನ್ನು ಸಾಗಿಸುವ ಜಾರುಬಂಡಿ ಮೂಲಕ ಸ್ವೀಡನ್‌ನಲ್ಲಿ ಉಡುಗೊರೆಗಳನ್ನು ವಿತರಿಸಿ ಮನೆ ಮಾತಾದರು.
ಕ್ರಿಸ್ಮಸ್ ಟ್ರೀ: ಕ್ರಿಸ್‌ಮಸ್ ಟ್ರೀ ಸಂಪ್ರದಾಯವು ಪ್ರಾಚೀನ ನಂಬಿಕೆಗಳಿಗೆ ಸಂಬಂಧಿಸಿದ್ದಾಗಿದೆ. ಇದು ಸುಮಾರು 400 ವರ್ಷಗಳ ಹಿಂದೆ ಜರ್ಮನಿಯಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಡಿಸೆಂಬರ್ 24 ರಂದು ಮಧ್ಯಯುಗದಲ್ಲಿ ಆಡಮ್ ಮತ್ತು ಈವ್ ಹಬ್ಬವನ್ನು ಆಚರಿಸಲಾಯಿತು, ಇದು ಪ್ಯಾರಡೈಸ್ ಟ್ರೀ, ಕೆಂಪು ಸೇಬುಗಳಿಂದ ಆವೃತವಾದ ಫರ್ ಮರದೊಂದಿಗೆ ಬೆರತುಕೊಂಡಿದೆ.
ಹಸಿರು ಬಣ್ಣವು ಸಮೃದ್ಧಿಯ ಭರವಸೆ ಮತ್ತು ವಸಂತಕಾಲದ ಆಗಮನವನ್ನು ಪ್ರತಿನಿಧಿಸಿದರೆ, ಈ ಕ್ರಿಸ್ಮಸ್ ಅಲಂಕಾರಗಳಲ್ಲಿ, ನಿತ್ಯಹರಿದ್ವರ್ಣ ಫರ್ ಮರಗಳು ವಿಶೇಷ ಸ್ಥಾನವನ್ನು ನಿರ್ವಹಿಸುತ್ತವೆ. ಏಕೆಂದರೆ ಅವುಗಳು ವಿಶೇಷ ಸಾಮರ್ಥ್ಯಗಳನ್ನು ಹೊಂದಿವೆ ಎಂದು ಅಲ್ಲಿನ ಜನರು ಭಾವಿಸಿದ್ದಾರೆ. ಸ್ಯಾಟರ್ನಾಲಿಯಾ ಆಚರಣೆಯ ಸಮಯದಲ್ಲಿ ರೋಮನ್ನರು ಈ ಸಂಪ್ರದಾಯವನ್ನು ಅಳವಡಿಸಿಕೊಂಡರು. ತಮ್ಮ ಮನೆಗಳನ್ನು ಫರ್ ಮರಗಳಿಂದ ಅಲಂಕರಿಸಿದರು. ಗ್ರೀಕರು ಇದೇ ರೀತಿಯ ಸಂಪ್ರದಾಯವನ್ನು ಹೊಂದಿದ್ದಾರೆ, ತಮ್ಮ ದೇವರುಗಳ ಗೌರವಾರ್ಥವಾಗಿ ಮರಗಳನ್ನು ಅಲಂಕರಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ.
ಇನ್ನಿತರ ಕ್ರಿಸ್ಮಸ್ ಆಚರಣೆಗಳು: ಕ್ರಿಸ್‌ಮಸ್ ಆಚರಣೆಗಳು ಪ್ರಪಂಚದಾದ್ಯಂತ ವಿವಿಧ ಪದ್ಧತಿಗಳನ್ನು ಒಳಗೊಂಡಿವೆ. ಚರ್ಚ್ ಸೇವೆಗಳಿಗೆ ಹಾಜರಾಗುವುದರಿಂದ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಹಿಡಿದು ಮನೆಗಳನ್ನು ಅಲಂಕರಿಸುವುದು ಮತ್ತು ಹಬ್ಬದವರೆಗೆ ಪ್ರತಿಯೊಬ್ಬನ್ನು ಸಂತಸದಲ್ಲಿಡುತ್ತೆ ಕ್ರಿಸ್ಮಸ್.
ಪ್ರಪಂಚದಾದ್ಯಂತ, ಕ್ರಿಸ್ಮಸ್ ವಿವಿಧ ರೂಪಗಳಲ್ಲಿ ಆಚರಿಸಲಾಗುತ್ತಿದೆ. ಇಸ್ರೇಲ್‌ನ ಬೆಥ್‌ಲೆಹೆಮ್‌ನಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ಒಂದೇ ರೀತಿಯ ಸಂಪ್ರದಾಯಗಳು ಆಚರಣೆಯಲ್ಲಿವೆ. ರಷ್ಯಾದಲ್ಲಿ 39 -ದಿನದ ಉಪವಾಸದ ನಂತರ ಚಳಿಗಾಲದಲ್ಲಿ ಆಚರಿಸುವ ಹಬ್ಬವೇ ಈ ಕ್ರಿಸ್ಮಸ್ ಆಗಿದೆ. ಗ್ರೀಸ್, ಜೂಲಿಯನ್ ಕ್ಯಾಲೆಂಡರ್ ಅನ್ನು ಅನುಸರಿಸಿ, ಜನವರಿ 7 ರಂದು ಈ ಹಬ್ಬವನ್ನು ಆಚರಿಸುತ್ತದೆ. ಈಜಿಪ್ಟಿನ ಕ್ರಿಶ್ಚಿಯನ್ನರು 43 ದಿನಗಳ ಉಪವಾಸವನ್ನು ಆಚರಿಸುತ್ತಾರೆ.
ಇದನ್ನು ಓದಿ: ದೇಶದೆಲ್ಲೆಡೆ ಯೇಸುಕ್ರಿಸ್ತನ ಆರಾಧನೆ: ಮಧ್ಯರಾತ್ರಿಯಿಂದಲೇ ಸಂಭ್ರಮ; ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ