ಮುಂಬೈ (ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿ, ಮಹಾರಾಷ್ಟ್ರರದ ರಾಜಧಾನಿ ಮುಂಬೈನಲ್ಲಿ ಆಘಾತಕಾರಿ ಮತ್ತು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮೂವರು ಅಪ್ರಾಪ್ತ ಬಾಲಕರು ಓರ್ವ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ. ಅಲ್ಲದೇ, ಬಾಲಕಿಯ ಮೇಲಿನ ಹೀನ ಕೃತ್ಯವನ್ನು ಚಿತ್ರೀಕರಣ ಮಾಡಿ, ಅದನ್ನು ಹರಿಬಿಡಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಜನವರಿ 13 ರಂದು ಈ ಲೈಂಗಿಕ ದೌರ್ಜನ್ಯದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿರುವುದರಿಂದ ಸಂತ್ರಸ್ತ ಕುಟುಂಬ ಮತ್ತು ಸುತ್ತ-ಮುತ್ತಲಿನ ನಾಗರಿಕರು ಸಹ ಬೆಚ್ಚಿಬೀಳಿಸುವಂತೆ ಆಗಿದೆ. ಸದ್ಯ ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಈ ದೂರಿನ ಆಧಾರದ ಮೇಲೆ ಈಗಾಗಲೇ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದು ಡೋಂಗ್ರಿಯಲ್ಲಿರುವ ಬಾಲ ನ್ಯಾಯ ಕೇಂದ್ರಕ್ಕೆ ಕಳುಹಿಸಿದ್ದಾರೆ.
17 ವರ್ಷ ವಯಸ್ಸಿನೊಳಗಿನ ಆರೋಪಿಗಳು: ಸಂತ್ರಸ್ತ ಬಾಲಕಿಯ ತಂದೆ ರಿಕ್ಷಾ ಓಡಿಸುತ್ತಿದ್ದು, ಅದರಿಂದ ಬರುವ ಆದಾಯದಿಂದ ನನ್ನ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಬಾಲಕಿ ಮಾನಸಿಕ ಅಸ್ವಸ್ಥೆಯಾಗಿದ್ದು, ಅವಳಿಗೆ ಮಾತನಾಡಲೂ ಬರುವುದಿಲ್ಲ. ಮನೆಯಲ್ಲೇ ಈ ಬಾಲಕಿ ಇರುತ್ತಿದ್ದಳು. ಸಂತ್ರಸ್ತ ಬಾಲಕಿಯ ಮನೆಯ ನೆರೆಹೊರೆಯವರಾಗಿರುವ ಅಪ್ತಾಪ ಬಾಲಕರೇ ಈ ಕೃತ್ಯ ಎಸಗಿದ್ದಾರೆ. ಎಲ್ಲ ಆರೋಪಿಗಳು 17 ವರ್ಷ ವಯಸ್ಸಿನೊಳಗಿನರಾಗಿದ್ದು, ಒಬ್ಬನಿಗೆ 14 ವರ್ಷ, ಮತ್ತೊಬ್ಬನಿಗೆ 15 ವರ್ಷ ಮತ್ತು ಇನ್ನೋರ್ವ 17 ವರ್ಷದವಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೃತ್ಯದ ಬಗ್ಗೆ ಅಂದೇ ಮಾಹಿತಿ ನೀಡಿದ್ದ ಸಂತ್ರಸ್ತೆ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ಜನವರಿ 13ರಂದು ರಾತ್ರಿ ಕೆಲಸದ ಮೇಲೆ ತೆರಳಿದ್ದ ಸಂತ್ರಸ್ತೆಯ ತಂದೆಗೆ ಸ್ನೇಹಿತರೊಬ್ಬರು ಕರೆ ಮಾಡಿ ಮಾಹಿತಿ ನೀಡಿದ್ದರು. ಇದರಿಂದ ತಕ್ಷಣವೇ ಮನೆಗೆ ತಂದೆ ದೌಡಾಯಿಸಿದ್ದರು. ಈ ವೇಳೆ ಬಾಲಕಿ ತಾನು ಮನೆಯ ಸಮೀಪದ ಸಾರ್ವಜನಿಕ ಶೌಚಾಲಯಕ್ಕೆ ಮಲವಿಸರ್ಜನೆಗೆ ಹೋದಾಗ ಮೂವರು ಬಾಲಕರು ಕೈಗಳನ್ನು ಹಿಡಿದು ಸ್ನಾನದ ಕೋಣೆಗೆ ಎಳೆದೊಯ್ದಿದ್ದರು ಎಂದು ಸನ್ನೆ ಮಾಡಿ ಹೇಳಿದ್ದಳು.
ಅಂತೆಯೇ, ಬಾಲಕಿಯ ತಂದೆ ಆರೋಪಿಗಳಾದ ಬಾಲಕರನ್ನು ವಿಚಾರಿಸಲು ಅವರ ಮನೆಗೆ ತೆರಳಿದ್ದರು. ಈ ವೇಳೆ ಬಾಲಕರ ಪೋಷಕರು ಮಕ್ಕಳನ್ನು ಥಳಿಸಲು ಪ್ರಾರಂಭಿಸಿದ್ದರು. ಅಲ್ಲದೇ, ನಮ್ಮ ಮಕ್ಕಳನ್ನು ಕ್ಷಮಿಸಿ, ಅವರು ತಪ್ಪು ಮಾಡಿದ್ದಾರೆ. ಇನ್ನೂ ಓದುವ ಹುಡುಗರಾಗಿದ್ದಾರೆ ಎಂದು ತಾವು ಸಹ ಕ್ಷಮೆ ಕೋರಿದ್ದರು. ಮತ್ತೊಂದೆಡೆ ಬಾಲಕಿ ಅರ್ಥವಾಗದ ಭಾಷೆಯಲ್ಲಿ ಸನ್ನೆ ಮಾಡಿ ಹೇಳಿದ್ದರಿಂದ ಇಂತಹದ್ದೇನು ನಡೆದಿಲ್ಲ ಎಂದು ತಿಳಿದುಕೊಂಡು ಆಕೆಯ ತಂದೆಯು ಆ ದಿನ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿರಲಿಲ್ಲವಂತೆ.
ವಿಡಿಯೋ ವೈರಲ್: ಇಷ್ಟೆಲ್ಲ ನಡೆದ ಬಳಿಕ ಜನವರಿ 19ರಂದು ಬಾಲಕಿ ಮೇಲಿನ ದೌರ್ಜನ್ಯದ ವಿಡಿಯೋ ಬೆಳಕಿಗೆ ಬಂದಿದೆ. ಈ ವಿಡಿಯೋ ಬಾಲಕಿಯ ಸಹೋದರನ ಗಮನಕ್ಕೂ ಬಂದಿದ್ದು, ಅಂದು ರಾತ್ರಿ 10 ಗಂಟೆಯ ಸುಮಾರಿಗೆ ತಂದೆ ಮನೆಗೆ ಬಂದಾಗ ವಿಷಯ ತಿಳಿಸಿದ್ದಾರೆ. ಇದರಿಂದ ವಿಡಿಯೋ ವೈರಲ್ ಆಗಿರುವುದು ಮನವರಿಕೆಯಾಗಿದೆ. ಅಲ್ಲದೇ, ಮೂವರು ಹುಡುಗರಲ್ಲಿ ಓರ್ವ ಬಾಲಕನು ಬಾಲಕಿ ಜೊತೆಗೆ ಬಾತ್ ರೂಮ್ನಲ್ಲಿ ಅನುಚಿತವಾಗಿ ವರ್ತಿಸಿರುವುದು ಸಹ ಗೊತ್ತಾಗಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಈ ಘಟನೆ ಬಗ್ಗೆ ಪೊಲೀಸರು ಪೋಕ್ಸೋ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಮತ್ತು 67ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: 3 ಬಾರಿ ಗರ್ಭಿಣಿ ಮಾಡಿ, ಮತಾಂತರಕ್ಕೆ ಒತ್ತಡ: ಗೆಳೆಯನ ಮೇಲೆ ಲಿವ್ಇನ್ ಗೆಳತಿಯಿಂದ ರೇಪ್ ಕೇಸ್