ಶಿಮ್ಲಾ: ಹವಾಮಾನ ಬದಲಾವಣೆ ಮತ್ತು ಹಿಮನದಿಗಳು ಕರುಗುವಿಕೆಯಿಂದ ಹಿಮಾಲಯದಲ್ಲಿ ಕೆರೆಗಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದ್ದು, ಇದು ಅಪಾಯದ ಸೂಚನೆಯಾಗಿದೆ. ಹಿಮನದಿಗಳು ಕರಗುವಿಕೆಯಿಂದ ಕೆರೆಗಳು ಸರೋವರಗಳಂತೆ ಆಗುತ್ತಿದೆ. ಈ ಕೆರೆಗಳು ಒಡೆದರೆ ಭಾರೀ ಅನಾಹುತಕ್ಕೆ ಕಾರಣವಾಗುತ್ತದೆ. ಈ ರೀತಿ, ಸರೋವರಗಳ ಸಂಖ್ಯೆ ಸಟ್ಲೆಜ್ ನದಿ ತೀರದ ಪ್ರದೇಶದಲ್ಲಿ ಹೆಚ್ಚಾಗುತ್ತಿದೆ ಎಂದು ಇತ್ತೀಚಿನ ವರದಿ ತಿಳಿಸಿದೆ.
ಈ ಕೆರೆಗಳ ಸಂಖ್ಯೆ ಹೆಚ್ಚಾದರೆ, ಇದು 2013ರಲ್ಲಿ ಕೇದರಾನಾಥ್ನಲ್ಲಿ ಸಂಭವಿಸಿದಂತೆ ದೊಡ್ಡ ಪ್ರವಾಹಕ್ಕೆ ಕೂಡ ಕಾರಣವಾಗಬಹುದು. ಸಟ್ಲೆಜ್ ತೀರದಲ್ಲಿ ಈಗಾಗಲೇ ಈ ಕೆರೆಗಳ ಸಂಖ್ಯೆ 995ಕ್ಕೆ ಏರಿದೆ. 2019ರಲ್ಲಿ ಚಂದ್ರ, ಭಾಗಾ ಮತ್ತು ಮಿಯಾರ್ ಉಪ ಜಲಾನಯನ ಸೇರಿದಂತೆ ಚೆನಬ್ ಕಣಿವೆಯಲ್ಲಿ 242 ಕೆರೆಗಳಿದ್ದವು. ಇದರಲ್ಲಿ ಇದೀಗ ಚಂದ್ರದಲ್ಲಿ 52 ಕೆರೆ ಇದ್ದರೆ, ಭಾಗಾದಲ್ಲಿ 84 ಕೆರೆ ಮತ್ತು ಮಿಯಾರ್ ಉಪ ಜಲಾನಯನ ಪ್ರದೇಶದಲ್ಲಿ 139 ಕೆರೆಗಳಿವೆ. ಇದೀಗ ಈ ಪ್ರದೇಶಗಳಲ್ಲಿ ಕೆರೆಗಳ ಸಂಖ್ಯೆ ಏರಿಕೆ ಕಾಣುತ್ತಿದೆ.
ಏರಿಕೆಯಾದ ಕೆರೆಗಳ ಸಂಖ್ಯೆ: ಬಿಯಾಸ್ ಕಣಿವೆಯಲ್ಲಿ ಜೀವ, ಬೀಯಾಸ್ ಮೇಲ್ದಂಡೆ ಮತ್ತ ಪಾವರ್ತಿ ಕಣಿವೆ ಇದೆ. 2019ರಲ್ಲಿ ಇಲ್ಲಿ 93 ಕೆರೆಗಳಿದ್ದವು. ಬಿಯಾಸ್ ಮೇಲ್ದಂಡೆಯಲ್ಲಿ 12 ಕೆರೆ, ಜೀವನದಲ್ಲಿ 41 ಮತ್ತು ಪಾರ್ವತಿ ಉಪ ಜಲಾಯನದಲ್ಲಿ 37 ಕೆರೆ ಇದ್ದವು. 2018ಕ್ಕೆ ಹೋಲಿಕೆ ಮಾಡಿದರೆ, 2019ರಲ್ಲಿ ಈ ಕೆರೆಗಳ ಸಂಖ್ಯೆ ಶೇ 43ರಷ್ಟು ಏರಿಕೆ ಕಂಡಿದೆ.
ಹಿಮಾಲಯ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಸಟ್ಲೆಜ್ ಜನಲಾಯನ ಪ್ರದೇಶದಲ್ಲಿ 10 ಹೆಕ್ಟೇರ್ಕ್ಕಿಂತಲೂ ಹೆಚ್ಚು ಕೆರೆಗಳ ಸಂಖ್ಯೆ ಇದ್ದು, ಇದು ಆತಂಕಕಾರಿಯಾಗಿದೆ. ಐದು ವರ್ಷದಲ್ಲಿ ಈ ಕೆರೆಗಳ ಸಂಖ್ಯೆ 49ರಿಂದ 62ಕ್ಕೆ ಏರಿಕೆ ಕಂಡಿದೆ. ಹಿಮಾಕಾಸ್ಟ್ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಎಸ್ಎಸ್ ರಾಂಧಾವ್ ಪ್ರಕಾರ, ಸಟ್ಲೇಜ್ ಜಲಾಯನ ಪ್ರದೆಶದಲ್ಲಿ ಕೆರೆಗಳ ಸಂಖ್ಯೆ 995ಕ್ಕೆ ಏರಿಕೆ ಆಗಿದೆ. ಇದು ಎಚ್ಚರಿಕೆ ಸೂಚನೆ. ಹಿಮಾಲಯ ಪ್ರದೇಶದಲ್ಲಿ ಹವಾಮಾನ ಏರಿಕೆ ಆಗುತ್ತಿರುವುದರಿಂದ ಹಿಮನದಿಗಳು ಕರುತ್ತಿದೆ.
ಹೆಚ್ಚಿದ ಆತಂಕ: ಈ ನಡುವೆಯೂ 2019ರಲ್ಲಿ ಉತ್ತಮ ಹಿಮಮಳೆ ಆಗಿದೆ. ಹಿಮಾಲಯ ಪ್ರದೇಶವನ್ನು ಈ ಹಿಮ ಸಂಪೂರ್ಣ ಆವರಿಸಿತು. ಸಟ್ಲೆಜ್, ಚೆನಾನ್, ಬಿಯಾಸ್ ಮತ್ತು ರಾವಿ ನದಿಗಳು ಜಲಾನಯನ ಪ್ರದೇಶಗಳು ಶೇ 26ರಷ್ಟು ಏರಿಕೆ ಕಂಡಿತು. ಈ ಹಿಮ ಆವೃತ್ತದಿಂದ ಹಿಮನದಿಗಳು ಕೊಂಚ ಉಸಿರಾಡುವಂತೆ ಆಯಿತು. ಹಿಮಾಲಯದ ನಾಲ್ಕು ಪ್ರಮುಖ ನದಿಗಳಾದ ಚೆನಾಬ್, ಬಿಯಾಸ್ಮ, ಸಟ್ಲೇಜ್ ಮತ್ತು ರಾವಿ ನದಿಗಳ ಜಲಾನಯನ ಪ್ರದೇಶದಲ್ಲಿ ಈ ಹಿಮ ಆವೃತ್ತದ ಬಗ್ಗೆ ಸಮೀಕ್ಷೆ ನಡೆಸಲಾಯಿತು.
ಹಿಮನದಿಗಳು ಕರಗುವಿಕೆಯಿಂದ ಪ್ರವಾಹಗಳು ಭಾರೀ ದುರಂತ ಉಂಟು ಮಾಡುತ್ತದೆ. ಕೇದಾರ್ನಾಥ್ನಲ್ಲೂ ಕೂಡ ಚೊರಾಬರಿ ಹಿಮನದಿ ಕರಗಿ ಸಣ್ಣ ಸಣ್ಣ ಕೆರೆಗಳು ಉಕ್ಕಿ ಹರಿದ ಪರಿಣಾಮ ಪ್ರವಾಹ ದುರಂತ ಸಂಭವಿಸಿತು. ಈ ಅನಾಹುತು ಇಂದಿಗೂ ಸಹ ಕಣ್ಮುಂದೆಯೇ ಇದೆ. ಇದೇ ವೇಳೆ ಹಿಮಾಚಲ ಪ್ರದೆಶ ಕೂಡ ಪರ್ಚು ಪ್ರವಾಹವನ್ನು ಕಂಡಿತು. ಈ ಪ್ರವಾಹದಿಂದ 800 ಕೋಟಿ ನಷ್ಟ ಸಂಭವಿಸಿತು.
ಇದನ್ನೂ ಓದಿ: ಅಮೆರಿಕದಲ್ಲಿ ಮೂವರಲ್ಲಿ ಒಬ್ಬರು ಓಝೋನ್ ಮಾಲಿನ್ಯಕ್ಕೆ ತುತ್ತು