ಕತಿಹಾರ್( ಬಿಹಾರ): ಇಂದಿನ ಯುಗದಲ್ಲಿ ಎಲ್ಲರೂ ಬೊಜ್ಜು ಅಥವಾ ಸ್ಥೂಲಕಾಯತೆಯಿಂದ ದೂರವಿರಲು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಫಿಟ್ ಆಗಿ ಕಾಣಬೇಕೆಂದು ಬಯಸುತ್ತಾರೆ. ನಿಸ್ಸಂಶಯವಾಗಿ ಸ್ಥೂಲಕಾಯ ಹೆಚ್ಚಿನ ರೋಗಗಳ ಮೂಲವಾಗಿದೆ. ನೀವು ಆರೋಗ್ಯವಾಗಿರಲು ಬಯಸಿದರೆ ಕೊಬ್ಬು ಕಡಿಮೆ ಮಾಡಲೇಬೇಕು. ಆದರೆ ಇಂದು ನಾವು ನಿಮಗೆ ಕತಿಹಾರ್‌ನ ವ್ಯಕ್ತಿಯೊಬ್ಬರ ಬಗ್ಗೆ ಪರಿಚಯಿಸುತ್ತಿದ್ದೇವೆ.
200 ಕಿಲೋ ವ್ಯಕ್ತಿ: ಜಿಲ್ಲೆಯ ಮಾನಸಾಹಿ ಬ್ಲಾಕ್‌ನ ಜಯನಗರ ನಿವಾಸಿ ಕತಿಹಾರ್‌ನ ರಫೀಕ್ ಅದ್ನಾನ್ ಅವರ ತೂಕ ಸುಮಾರು 2 ಕ್ವಿಂಟಾಲ್‌ಗಿಂತ ಹೆಚ್ಚು. ಅಂದರೆ 200 ಕೆ.ಜಿ.ಗೂ ಅಧಿಕ. ರಫೀಕ್ ಎಷ್ಟು ದಪ್ಪವಾಗಿದ್ದಾರೆ ಎಂದರೆ ಬುಲೆಟ್ ಬೈಕ್ ಮೇಲೆ ಬರುತ್ತಿದ್ದರೆ ಲೂನಾ ವಾಹನದ ಮೇಲೆ ಬರುತ್ತಿದ್ದಂತೆ ಕಾಣುತ್ತಾರೆ. ಇವರಿಗೆ ನಡೆಯುವುದೇ ಸಮಸ್ಯೆ. ಹಾಗಾಗಿಯೇ ಜನ ಅವರನ್ನು ‘ಬುಲೆಟ್ ವಾಲಾ ಜೀಜಾ’ ಎಂದೂ ಕರೆಯುತ್ತಾರೆ. ತಮ್ಮ ಆಹಾರ ಕ್ರಮ ಮತ್ತು ಸ್ಥೂಲಕಾಯದಿಂದಾಗಿ ಅವರು ಕತಿಹಾರ್‌ನಾದ್ಯಂತ ಪ್ರಸಿದ್ಧರಾಗಿದ್ದಾರೆ.
ಇವರ ಆಹಾರ ಪದ್ಧತಿ ಕೇಳಿದ್ರೆ ಶಾಕ್ ಆಗ್ತಿರಾ!: 30 ವರ್ಷದ ರಫೀಕ್ ಅದ್ನಾನ್ ಸಾರ್ವಜನಿಕ ಪ್ರತಿನಿಧಿಯೂ ಅಲ್ಲ, ದೊಡ್ಡ ಸರ್ಕಾರಿ ಅಧಿಕಾರಿಯೂ ಅಲ್ಲ, ಆದರೆ, ಈ ಪ್ರದೇಶದ ಎಲ್ಲರಿಗೂ ವಿಶೇಷ ಕಾರಣಕ್ಕಾಗಿ ತಿಳಿದಿದ್ದಾರೆ. ಇದರ ಹಿಂದಿನ ಕಾರಣ ಅವರ ದಪ್ಪನೇ ಮೈಕಟ್ಟು. 200 ಕಿಲೋ ತೂಕದ ರಫೀಕ್ ಅದ್ನಾನ್ ದಿನದ ಊಟದಲ್ಲಿ ಮೂರು ಕಿಲೋ ಅನ್ನ ತಿನ್ನುತ್ತಾರೆ. ಬೇಳೆಕಾಳುಗಳು ಮತ್ತು ತರಕಾರಿಗಳ ಬಗ್ಗೆ ಕೇಳಬೇಡಿ. ರಫೀಕ್ ಹೇಳುವಂತೆ ರೊಟ್ಟಿ ತಿನ್ನುವುದು ಅಪರೂಪ. ದಿನಕ್ಕೆ 4 ರಿಂದ 5 ಕೆಜಿ ರೊಟ್ಟಿ ಮಾಡಬೇಕಾಗುತ್ತದೆ. ಆದರೆ ಒಂದು ದಿನದಲ್ಲಿ ಮೂರ್ನಾಲ್ಕು ಕೆಜಿ ಹಾಲಿನ ಜೊತೆಗೆ 2 ಕೆಜಿ ಚಿಕನ್ - ಮಟನ್, ಒಂದೂವರೆ ಕೆಜಿ ಮೀನು ಕೂಡ ಸವಿಯುತ್ತಾರೆ ಈ ರಫೀಕ್.
ಎರಡು ಮದುವೆ, ಆದರೆ ಮಕ್ಕಳಿಲ್ಲ: ರಫೀಕ್ ಒಬ್ಬರು ಧಾನ್ಯ ವ್ಯಾಪಾರಿ. ಇವರು ಎರಡು ಮದುವೆ ಮಾಡಿಕೊಂಡಿದ್ದರೂ ಇನ್ನು ಮಕ್ಕಳಾಗಿಲ್ಲ. ಇದಕ್ಕೆ ಕಾರಣ ತಮ್ಮ ಸ್ಥೂಲಕಾಯ ಎನ್ನುತ್ತಾರೆ ಅವರು. ರಫೀಕ್ ಅದ್ನಾನ್ ಅವರ ಊಟದ ನಂತರ ಅವರ ಇಬ್ಬರು ಹೆಂಡತಿಯರಿಗೂ ಉಳಿಯುವುದಿಲ್ಲ. ರಫೀಕ್ ಆಹಾರ ಪದ್ಧತಿಯಿಂದ ವಿಚಲಿತರಾದ ನೆರೆಹೊರೆಯವರು ಮತ್ತು ಸಂಬಂಧಿಕರು ಸಹ ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ. ಏಕೆಂದರೆ ಅವರು ಎಲ್ಲಿಗೆ ಹೋದರೂ ಅನೇಕ ಜನರು ತಿನ್ನುವಷ್ಟು ಆಹಾರವನ್ನು ಅವರು ಒಬ್ಬರೇ ಸವಿಯುತ್ತಾರಂತೆ.
ಓದಿ: ಮಹಿಳೆಯರು ಬೆಳಗ್ಗೆ, ಪುರುಷರು ಸಂಜೆ ವ್ಯಾಯಾಮ ಮಾಡಬೇಕು: ಯಾಕೆ ಅಂತೀರಾ?
ಬಾಲ್ಯದಿಂದಲೂ ರಫೀಕ್ ದಪ್ಪ: ಬಾಲ್ಯದಿಂದಲೂ ನಾನು ದಪ್ಪವಾಗಿಯೇ ಬೆಳೆದಿದ್ದೇನೆ. ಆದರೆ, ಈಗ ನನ್ನ ತೂಕ ಜಾಸ್ತಿಯಾಗಿದೆ. 2 ಕ್ವಿಂಟಲ್ ತೂಕವಿದ್ದು, ನಡೆದಾಡಲು ತೊಂದರೆಯಾಗಿದೆ. ಈಗಾಗಲೇ ನನಗೆ 30 ವರ್ಷ ದಾಟಿದೆ. ಎರಡು ಮದುವೆಯಾದರೂ ತೂಕದ ಕಾರಣ ಮಕ್ಕಳಾಗಿಲ್ಲ. ದಿನಕ್ಕೆ ಮೂರು ಕೆಜಿ ಅಕ್ಕಿ, 4-5 ಕೆಜಿ ಹಿಟ್ಟು ರೊಟ್ಟಿ ಮತ್ತು 3 ಕೆಜಿ ಹಾಲು ಸೇವಿಸುತ್ತೇನೆ. ಊಟಕ್ಕೆ 2 ಕೆಜಿ ಮಾಂಸ ಮತ್ತು ಒಂದೂವರೆ ಮೀನು ಕೆಜಿ ಬೇಕು. ಒಂದೇ ಸಮಯದಲ್ಲಿ ಎರಡು ಲೋಟ ನೀರು ಕುಡಿಯುತ್ತೇನೆ. ಚಿಕಿತ್ಸೆ ತೆಗೆದುಕೊಳ್ಳಿ, ಎಲ್ಲ ಸರಿಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಎಲ್ಲಿ ಸಾಧ್ಯವಾಗುತ್ತೆ ಎಂದು ರಫೀಕ್ ಅದ್ನಾನ್ ಮಾತಾಗಿದೆ.
ಗೆಳೆಯನ ಮಾತು: ಇತ್ತಿಚೇಗೆ ಅವರು ತೂಕ ಜಾಸ್ತಿಯಾಗಿದೆ. ಮೊನ್ನೆ ತನಕ ಕಾಲ್ನಡಿಗೆಯಲ್ಲೇ ನಡೆಯುತ್ತಿದ್ದ. ಆದರೆ ಈಗ ಬುಲೆಟ್ ಇಲ್ಲದೇ ಹೊರಗೇ ಬರೋದಿಲ್ಲ ಅಂತಾನೆ. ಬುಲೆಟ್ ಕೂಡ ಕೆಲವೊಮ್ಮೆ ಆತನಿಗೆ ಕೈ ಕೊಡುತ್ತೆ. ನಿತ್ಯ ಮನೆಯವರಿಗೂ ಊಟ ಇಲ್ಲದಂತೆ ಖಾಲಿ ಮಾಡ್ತಾನೆ. ಮೂರ್ನಾಲ್ಕು ದಿನಗಳಲ್ಲಿ ಒಂದು ಮೂಟೆ ಅಕ್ಕಿ ಖಾಲಿಯಾಗುತ್ತೆ. ಸಂಬಂಧಿಕರ ಮದುವೆಗೆ ಹೋದರೆ ಎಲ್ಲರೂ ರಫೀಕ್ ತಿನ್ನುವುದನ್ನೇ ಕಣ್ ಕಣ್ ಬಿಟ್ಕೊಂಡು ನೋಡ್ತಾರೆ ಎಂದು ಆತನ ಗೆಳೆಯ ಸಲ್ಮಾನ್ ಹೇಳುತ್ತಾರೆ.
ವೈದ್ಯರು ಹೇಳುವುದೇನು: ರಫೀಕ್ ಬುಲಿಮಿಯಾ ನರ್ವೋಸಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಅವರು ಅತಿಯಾಗಿ ಆಹಾರ ಸೇವಿಸುತ್ತಾರೆ ಎಂದು ಹೇಳಿದ್ದಾರೆ. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬಹಳಷ್ಟು ತಿನ್ನುವ ಬಯಕೆ ಇರುತ್ತೆ. ಇದರಿಂದಾಗಿ ಅವರ ತೂಕ ಹೆಚ್ಚಾಗುತ್ತದೆ. ಇಲ್ಲವಾದಲ್ಲಿ ರಫೀಕ್ಗೆ ಹಾರ್ಮೋನ್ ಕಾಯಿಲೆಯಿಂದಲೂ ಬಳಲುತ್ತಿರಬಹುದು. ಕೂಲಂಕಷವಾಗಿ ಅವರನ್ನು ಪರೀಕ್ಷೆ ಮಾಡಿದ ನಂತರವೇ ತೂಕ ಹೆಚ್ಚಾಗಲು ಕಾರಣವೇನು ಎಂಬುದು ತಿಳಿಯುತ್ತದೆ ಅಂತಾ ಸ್ಥಳೀಯ ವೈದ್ಯೆ ಮೃಣಾಲ್ ರಂಜನ್ ಹೇಳುತ್ತಾರೆ.
ಬುಲಿಮಿಯಾ ನರ್ವೋಸಾ ಕಾಯಿಲೆ ಎಂದರೇನು?: ಬುಲಿಮಿಯಾ ನರ್ವೋಸಾ ಕಾಯಿಲೆ ಹೆಚ್ಚಿನ ರೋಗವು ಆನುವಂಶಿಕವಾಗಿದೆ. ಆದರೆ ಕೆಲವೊಮ್ಮೆ ವ್ಯಕ್ತಿಯ ಸುತ್ತಲಿನ ಪರಿಸರವೂ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿ, ಕೆಲವೊಮ್ಮೆ ವ್ಯಕ್ತಿಯ ನಡವಳಿಕೆ ಬದಲಾಗುತ್ತದೆ. ತೂಕದಲ್ಲಿ ಹಠಾತ್ ಹೆಚ್ಚಳ ಅಥವಾ ಇಳಿಕೆ ಕಂಡುಬರುತ್ತದೆ. ಬುಲಿಮಿಯಾ ನರ್ವೋಸಾವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ನಿಮ್ಮ ಸುತ್ತಲಿರುವ ಯಾರಿಗಾದರೂ ಇಂತಹ ಲಕ್ಷಣಗಳು ಕಂಡುಬಂದರೆ, ಖಂಡಿತವಾಗಿಯೂ ಅದನ್ನು ವೈದ್ಯರಿಗೆ ತೋರಿಸಿ. ಔಷಧ, ಚಿಕಿತ್ಸೆ ಮತ್ತು ಉತ್ತಮ ಆಹಾರ ಯೋಜನೆ ಮೂಲಕ ಈ ಕಾಯಿಲೆಯಿಂದ ಮುಕ್ತಿ ಹೊಂದಬಹುದಾಗಿದೆ.