ಮೀರತ್/ಉತ್ತರಪ್ರದೇಶ: ಬಹದಾರ್‌ಪುರ ಗ್ರಾಮದ ನಿವಾಸಿ ಅನ್ನೂ ರಾಣಿ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾಗವಹಿಸಲು ಸ್ಥಾನ ಸಿಕ್ಕಿದೆ. ಪಟಿಯಾಲದಲ್ಲಿ ನಡೆಯುತ್ತಿರುವ 60 ನೇ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2021 ರಲ್ಲಿ ಅನ್ನೂ ರಾಣಿ ಸೋಮವಾರ ಒಲಿಂಪಿಕ್ ಕೋಟಾವನ್ನು ತಪ್ಪಿಸಿಕೊಂಡಿದ್ದರು, ಆದರೆ ವಿಶ್ವ ಶ್ರೇಯಾಂಕದಲ್ಲಿ 13ನೇ ಸ್ಥಾನ ಪಡೆದಿದ್ದರಿಂದ ಒಲಿಂಪಿಕ್ ಕೋಟಾ ಪಡೆದಿದ್ದಾರೆ.
![meerut](https://etvbharatimages.akamaized.net/etvbharat/prod-images/up-mrt-02-annu-got-quota-olympic-photo-7203472_29062021145247_2906f_1624958567_186.jpg)
ಜಾವೆಲಿನ್ ಥ್ರೋ ನಂತಹ ಕ್ರೀಡೆಗಳಲ್ಲಿ, 32 ನೇ ಶ್ರೇಯಾಂಕದ ಆಟಗಾರರನ್ನು ಒಲಿಂಪಿಕ್ ಕೋಟಾದಲ್ಲಿ ಸೇರಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದ ನಂತರ, ಅನ್ನೂ ಅವರ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇದೆ. ಪಂಜಾಬ್‌ನ ಪಟಿಯಾಲದಲ್ಲಿ ನಡೆಯುತ್ತಿರುವ 60 ನೇ ಅಂತಾರಾಜ್ಯ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮೀರತ್‌ನ ಅನ್ನೂ ರಾಣಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
![meerut](https://etvbharatimages.akamaized.net/etvbharat/prod-images/up-mrt-02-annu-got-quota-olympic-photo-7203472_29062021145247_2906f_1624958567_512.jpg)
ಮಾಹಿತಿಯ ಪ್ರಕಾರ, 2016ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಅನ್ನೂ ರಾಣಿ 59.87 ಮೀಟರ್ ಜಾವೆಲಿನ್ ಎಸೆದು ದಾಖಲೆ ಮಾಡಿದ್ದಾರೆ. ಟೋಕಿಯೋ ಒಲಂಪಿಕ್ಸ್ನಲ್ಲಿ ಭಾಗವಹಿಸಲಿರೋ ಅನ್ನೂ ರಾಣಿ ಮೇಲೆ ಈ ಬಾರಿ ಎಲ್ಲರಿಗೂ ನಿರೀಕ್ಷೆ ಇದೆ. ಇದಕ್ಕಾಗಿ ಅನ್ನೂ ರಾಣಿ ಇನ್ನಷ್ಟು ಕಷ್ಟಪಟ್ಟು ಅಭ್ಯಾಸ ಮಾಡುವ ಅವಶ್ಯಕತೆ ಇದೆ.