ETV Bharat / bharat

ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿಗಳಿಗೆ 29 ದೇಶಗಳಲ್ಲಿಅವಕಾಶ: ಯಾವವು ಆ ದೇಶಗಳು? - ಸ್ಟೂಡೆಂಟ್ ಮೊಬಿಲಿಟಿ ಕಾರ್ಯಕ್ರಮ

ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧದಿಂದ ಅತಂತ್ರ ಸ್ಥಿತಿಗೆ ಸಿಲುಕಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು 29 ದೇಶಗಳಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ.

medicos-studying-in-ukrainian-universities-can-continue-studies-in-29-countries
ಉಕ್ರೇನ್​ನಿಂದ ಮರಳಿದ ಭಾರತೀಯ ವಿದ್ಯಾರ್ಥಿಗಳಿಗೆ 29 ದೇಶಗಳಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ: ಯಾವ ಆ ದೇಶಗಳು?
author img

By

Published : Sep 16, 2022, 8:50 PM IST

ನವದೆಹಲಿ/ಕೋಟಾ: ಯುದ್ಧ ಪೀಡಿತ ಉಕ್ರೇನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ವಿವಿಧ ದೇಶಗಳಲ್ಲಿ ಮುಂದುವರಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿಸೂಚನೆ ಹೊರಡಿಸಿದ್ದು, ಆ 29 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ರಷ್ಯಾ ಮತ್ತು ಉಕ್ರೇನ್​ ನಡುವೆ ಯುದ್ಧ ಆರಂಭವಾದ ಬಳಿಕ ಭಾರತೀಯ ವಿದ್ಯಾರ್ಥಿಗಳು ಆ ದೇಶವನ್ನು ತೊರೆದು ತವರಿಗೆ ಮರಳಿದ್ದಾರೆ. ಆದರೆ, ಭಾರತಕ್ಕೆ ಹಿಂದಿರುಗಿದ ನಂತರ ವಿದ್ಯಾರ್ಥಿಗಳ ಭವಿಷ್ಯವು ಅತಂತ್ರ ಸ್ಥಿತಿಗೆ ಸಿಲುಕಿದೆ. ಇದೀಗ ಈಗ ಸ್ಟೂಡೆಂಟ್ ಮೊಬಿಲಿಟಿ ಕಾರ್ಯಕ್ರಮದಡಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಅಮೆರಿಕ, ಫ್ರಾನ್ಸ್ ಮತ್ತು ಸ್ವೀಡನ್ ಸೇರಿದಂತೆ 29 ದೇಶಗಳಲ್ಲಿ ತಮ್ಮ ಅಧ್ಯಯನ ಮುಂದುವರೆಸಲು ಅನುವು ಮಾಡಿಕೊಡಲಾಗಿದೆ.

ಯಾವ 29 ದೇಶಗಳು?: ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಈಗ ಪೋಲೆಂಡ್, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜಾರ್ಜಿಯಾ, ಕಜಕಿಸ್ತಾನ್, ಲಿಥುವೇನಿಯಾ, ಮೊಲ್ಡೊವಾ, ಸ್ಲೊವೇನಿ, ಸ್ಪೇನ್, ಉಜ್ಬೇಕಿಸ್ತಾನ್, ಯುನೈಟೆಡ್ ಸ್ಟೇಟ್ಸ್, ಇಟಲಿ, ಬೆಲ್ಜಿಯಂ, ಈಜಿಪ್ಟ್, ಬೆಲಾರಸ್, ಲಾಟ್ವಿಯಾ, ಕಿರ್ಗಿಸ್ತಾನ್, ಗ್ರೀಸ್, ರೊಮೇನಿಯಾ, ಸ್ವೀಡನ್, ಇಸ್ರೇಲ್, ಇರಾನ್, ಅಜೆರ್​​ಬೈಜಾನ್, ಬಲ್ಗೇರಿಯಾ, ಜರ್ಮನಿ, ಟರ್ಕಿ, ಕ್ರೊಯೇಷಿಯಾ ಮತ್ತು ಹಂಗೇರಿಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್ 6ರಂದು ಸ್ಟೂಡೆಂಟ್ ಮೊಬಿಲಿಟಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಲಾಗಿತ್ತು. ಆದರೆ, ದೇಶಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ.

ಈ ಬಗ್ಗೆ ರಾಜಸ್ಥಾನ ಕೋಟಾದ ಶಿಕ್ಷಣ ತಜ್ಞ ದೇವ್ ಶರ್ಮಾ ಮಾತನಾಡಿ, ಸಾಗರೋತ್ತರ ದೇಶಗಳಲ್ಲಿ ಎಂಬಿಬಿಎಸ್ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ನಮ್ಮ ದೇಶದ ನಿಯಮಗಳು ಕಟ್ಟುನಿಟ್ಟಾಗಿವೆ. ಈ ನಿಯಮಗಳು ಅನ್ವಯ ಸಾಮಾನ್ಯ ಸಂದರ್ಭವಾಗಲಿ ಅಥವಾ ತುರ್ತು ಪರಿಸ್ಥಿತಿಯಲ್ಲೂ ಸಹ ವಿದ್ಯಾರ್ಥಿಗಳಿಗೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಆದ್ದರಿಂದ, ರಷ್ಯಾ - ಉಕ್ರೇನ್ ಯುದ್ಧದಿಂದ ಸಂತ್ರಸ್ತರಾಗಿರುವ ವಿದ್ಯಾರ್ಥಿಗಳು ಇತರ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಅಧ್ಯಯನ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಅವರ ಕೋರ್ಸ್‌ಗಳು ಪೂರ್ಣಗೊಂಡ ನಂತರ ಈ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿರುವ ತಮ್ಮ ಮೂಲ ವಿಶ್ವವಿದ್ಯಾಲಯಗಳಿಂದಲೇ ವೈದ್ಯಕೀಯ ಪದವಿಗಳನ್ನು ಪಡೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ವೆಬ್​ ಪೋರ್ಟಲ್​ ಸ್ಥಾಪಿಸಿ- ಸುಪ್ರೀಂ: ಇತ್ತ, ಉಕ್ರೇನ್​ನಿಂದ ಬಂದ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ವಿಚಾರವಾಗಿ ಇಂದು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ, ಉಕ್ರೇನ್‌ನಿಂದ ದೇಶಕ್ಕೆ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳ ವಿವರಗಳನ್ನು ನೀಡುವ ವೆಬ್ ಪೋರ್ಟಲ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತು.

ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು, ಇದರಲ್ಲಿ ಪಾರದರ್ಶಕ ವ್ಯವಸ್ಥೆ ಇರಬೇಕು. ವೆಬ್ ಪೋರ್ಟಲ್​ನಲ್ಲಿ ತಮ್ಮ ಕೋರ್ಸ್‌ಗಳನ್ನು ಪೂರ್ಣಗೊಳಿಸಬಹುದಾದ ಪರ್ಯಾಯ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಶುಲ್ಕ ಮತ್ತು ಸೀಟುಗಳ ಸಂಪೂರ್ಣ ವಿವರಗಳನ್ನು ಒದಗಿಸಬೇಕೆಂದು ಸಲಹೆ ನೀಡಿತು.

ಆಗ ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಬಗ್ಗೆ ನಮ್ಮ ಯಾವುದೇ ಅಭ್ಯಂತರಿವಿಲ್ಲ. ಆದರೆ, ನ್ಯಾಯ ಪೀಠದ ಸಲಹೆಗಳ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆಯಲು ಸಮಯಾವಕಾಶ ಕೊಡಿ ಎಂದು ಕೋರಿದರು. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ನ್ಯಾಯ ಪೀಠವು ಮುಂದೂಡಿತು.

ಇನ್ನು, ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ ನೀಡಲು ಬರುವುದಿಲ್ಲ ಎಂದು ಕೇಂದ್ರವು ಗುರುವಾರ ಸುಪ್ರೀಂಕೋರ್ಟ್​ಗೆ ಅಫಿಡವಿಟ್‌ ಸಲ್ಲಿಸಿತ್ತು. ಕಾನೂನಿನ ನಿಬಂಧನೆಗಳಿಂದಾಗಿ ಆ ವಿದ್ಯಾರ್ಥಿಗಳಿಗೆ ಇಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ವಸತಿ ಕಲ್ಪಿಸಲು ಸಾಧ್ಯವಿಲ್ಲ. ಇದುವರೆಗೆ ಯಾವುದೇ ಭಾರತೀಯ ವೈದ್ಯಕೀಯ ಸಂಸ್ಥೆ, ವಿಶ್ವವಿದ್ಯಾಲಯದಲ್ಲಿ ಯಾವುದೇ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ವರ್ಗಾವಣೆ ಮಾಡಲು ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿತ್ತು.

ಇದನ್ನೂ ಓದಿ: ಅಪಘಾತಕ್ಕೀಡಾದ ಉಕ್ರೇನ್ ಅಧ್ಯಕ್ಷರ ಕಾರು: ಪ್ರಾಣಾಪಾಯದಿಂದ ಝೆಲೆನ್ಸ್ಕಿ ಪಾರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.