ನವದೆಹಲಿ: ಎಂಸಿಡಿಯ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ವೇಳೆ ಬಿಜೆಪಿ ಕೌನ್ಸಿಲರ್, ಮತ ಪೆಟ್ಟಿಗೆಯನ್ನು ಕಳವು ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಎಂಸಿಡಿಯ ನೂತನ ಮೇಯರ್ ಎಎಪಿಯ ಶೆಲ್ಲಿ ಒಬೆರಾಯ್ ಅಧ್ಯಕ್ಷತೆಯಲ್ಲಿ ನಡೆದ ಸದನದಲ್ಲಿ ಇಡೀ ರಾತ್ರಿ ಗದ್ದಲ ನಡೆದಿದೆ. ಬಿಜೆಪಿ ಕೌನ್ಸಿಲರ್ ಮತಪೆಟ್ಟಿಗೆಯನ್ನು ತೆಗೆದುಕೊಂಡು ತಮ್ಮ ಪಕ್ಷದವರ ಮೇಲೆ ಎಸೆದು ಸದನದ ಬಾವಿಗಿಳಿದು ಪ್ರತಿಭಟಿಸಿರುವ ವಿಡಿಯೋವನ್ನು ಎಎಪಿ ಹಂಚಿಕೊಂಡಿದೆ.
ಬಿಜೆಪಿಯ ಗೂಂಡಾಗಿರಿ ವರ್ತನೆ: ಕಳೆದ 17 ವರ್ಷದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರದ ಹಿಡಿತ ಸಾಧಿಸಿದ್ದ ಬಿಜೆಪಿಯನ್ನು ಜನರು ಸೋಲಿಸಿದ್ದಾರೆ. ಸ್ಥಾಯಿ ಸಮಿತಿ ಸದಸ್ಯರ ಚುನಾವಣಾ ಮತಪೆಟ್ಟಿಗೆಯನ್ನು ಅವರು ಕಳವು ಮಾಡುತ್ತಿದ್ದಾರೆ. ಬಿಜೆಪಿ ಸದಸ್ಯರು ಗೂಂಡಾಗಿರಿ ವರ್ತನೆ ತೋರುತ್ತಿದ್ದಾರ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
-
▪️BJP वालों ने Ballot Box चुरा लिया।
— AAP (@AamAadmiParty) February 23, 2023 " class="align-text-top noRightClick twitterSection" data="
▪️BJP की Mayor प्रत्याशी ख़ुद तोड़-फोड़ कर रही है।
ये है भाजपा के गुंडों की हक़ीक़त जो आज पूरे देश के सामने हैं! pic.twitter.com/hbIYkEYbCG
">▪️BJP वालों ने Ballot Box चुरा लिया।
— AAP (@AamAadmiParty) February 23, 2023
▪️BJP की Mayor प्रत्याशी ख़ुद तोड़-फोड़ कर रही है।
ये है भाजपा के गुंडों की हक़ीक़त जो आज पूरे देश के सामने हैं! pic.twitter.com/hbIYkEYbCG▪️BJP वालों ने Ballot Box चुरा लिया।
— AAP (@AamAadmiParty) February 23, 2023
▪️BJP की Mayor प्रत्याशी ख़ुद तोड़-फोड़ कर रही है।
ये है भाजपा के गुंडों की हक़ीक़त जो आज पूरे देश के सामने हैं! pic.twitter.com/hbIYkEYbCG
ಬಿಜೆಪಿ ಚುನಾವಣೆ ಅಂದರೆ ಏಕೆ ಹೆದರುತ್ತದೆ: ಬಿಜೆಪಿ ಕೌನ್ಸಿಲರ್ ಚುನಾವಣೆ ಮತಪೆಟ್ಟಿಗೆಯನ್ನು ಕಿತ್ತುಕೊಂಡಿದ್ದಾರೆ. ಬಿಜೆಪಿ ಚುನಾವಣೆ ಎಂದರೆ ಏಕೆ ಹೆದುರುತ್ತದೆ ಎಂದು ಎಎಪಿ ನಾಯಕ, ಶಾಸಕರಾಗಿರುವ ಅತಿಶ್ ಸಿಂಗ್ ಸದನದ ವಿಡಿಯೋವನ್ನು ಹಂಚಿಕೊಂಡು ಪ್ರಶ್ನಿಸಿದ್ದಾರೆ. ಬಿಜೆಪಿ ಮೇಯರ್ ಅಭ್ಯರ್ಥಿ ರೇಖಾ ಗುಪ್ತಾ ಜೊತೆ ಕೆಲವು ಮಹಿಳಾ ಕೌನ್ಸಿಲರ್ಗಳು ಮೇಯರ್ ಮೈಕ್ ಕಿತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದಾಗಿದೆ. ಸದನದೊಳಗೆ ಬಿಜೆಪಿ ನಡೆಯನ್ನು ಅನೇಕ ಮಂದಿ ಟ್ವೀಟ್ ಮೂಲಕ ಖಂಡಿಸಿದ್ದಾರೆ.
ಅರಾಜಕತೆಯ ಎಎಪಿ: ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಟ್ವಿಟರ್, ಎಎಪಿ ಕೌನ್ಸಿಲರ್ಗಳು ಬಿಜೆಪಿ ಸದಸ್ಯರ ಮೇಲೆ ನಡೆಸಿರುವ ದಾಳಿ, ಜಗಳ ಕುರಿತು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆದ್ಮಿ ಪಕ್ಷವು ಅರಾಜಕತಾವಾದಿಯಾಗಿದೆ. ಗೂಂಡಾಗಿರಿ ಮಾಡುವ ಮೂಲಕ ಎಂಸಿಡಿ ಚುನಾವಣೆಗೆ ಅಡ್ಡಿಪಡಿಸಿ, ನಂತರ ಇದಕ್ಕೆ ಬಿಜೆಪಿಯನ್ನು ದೂಷಿಸಿದ್ದರು. ಮೇಯರ್ ಚುನಾವಣೆಯಲ್ಲೂ ಗೂಂಡಾಗಿರಿ ನಡೆಸಿದ ಅವರು ಇದೀಗ ಸ್ಥಾಯಿ ಸಮಿತಿ ಚುನಾವಣೆಗೆ ಅಡ್ಡಿಪಡಿಸಿದರು ಎಂದು ಆರೋಪಿಸಿದೆ.
-
17 साल से भाजपा MCD मैं बैठकर दिल्लीवालों को लूटती रही और अब जब जनता ने उन्हें हरा दिया तो स्टैंडिंग कमेटी के चुनाव का बैलेट बॉक्स ही लूट लिया.
— Manish Sisodia (@msisodia) February 23, 2023 " class="align-text-top noRightClick twitterSection" data="
गुंडागर्दी की हद है भाजपा वालों की …. https://t.co/YX6kXqdQuQ
">17 साल से भाजपा MCD मैं बैठकर दिल्लीवालों को लूटती रही और अब जब जनता ने उन्हें हरा दिया तो स्टैंडिंग कमेटी के चुनाव का बैलेट बॉक्स ही लूट लिया.
— Manish Sisodia (@msisodia) February 23, 2023
गुंडागर्दी की हद है भाजपा वालों की …. https://t.co/YX6kXqdQuQ17 साल से भाजपा MCD मैं बैठकर दिल्लीवालों को लूटती रही और अब जब जनता ने उन्हें हरा दिया तो स्टैंडिंग कमेटी के चुनाव का बैलेट बॉक्स ही लूट लिया.
— Manish Sisodia (@msisodia) February 23, 2023
गुंडागर्दी की हद है भाजपा वालों की …. https://t.co/YX6kXqdQuQ
ಸ್ಥಾಯಿ ಸಮಿತಿ ಸದಸ್ಯರ ಗೌಪ್ಯ ಮತದಾನ ನಡೆಯುತ್ತಿತ್ತು. ಈ ವೇಳೆ ನಿಯಮವನ್ನು ಉಲ್ಲಂಘಿಸಿ, ಮೊಬೈಲ್ ಫೋನ್ನಲ್ಲಿ ಸೆರೆಹಿಡಿಯಲು ಮುಂದಾಗಿದ್ದಾರೆ. ಎಎಪಿ ನಾಚಿಕೇಡಿನ ಮೂಲಕ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಬಯಸುತ್ತದೆ. ಎಎಪಿಯ ಮೇಯರ್ ಮತದಾನದ ಪ್ರಕ್ರಿಯೆಯಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಸಹ ಅನುಮತಿಸಿದರು ಎಂದು ಬಿಜೆಪಿ ಎಂಎಲ್ಎ ವಿಜೇಂದ್ರ ಗುಪ್ತಾ ಟ್ವೀಟ್ ಮಾಡಿದ್ದಾರೆ.
ಕಳೆದ ರಾತ್ರಿ ಸದನದಲ್ಲಿ ಬಿಜೆಪಿ ಮತ್ತು ಎಎಪಿ ನಾಯಕರು ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಜೊತೆಗೆ ಬಾಟೆಲ್ ಹಾಗೂ ಅರ್ಥ ತಿಂದು ಉಳಿದಿದ್ದ ಹಣ್ಣುಗಳನ್ನು ಪರಸ್ಪರ ಎರಚಾಡಿಕೊಂಡಿದ್ದಾರೆ. ಎರಡು ಕಡೆಯವರು ಪರಸ್ಪರನ್ನು ದೂಷಿಸುವ ಕೆಲಸ ಮಾಡಿದರು. ಇದರಿಂದ ಕಲಾಪವನ್ನು ಪದೇ ಪದೇ ಮುಂದೂಡಲಾಯಿತು. ಘಟನೆ ಕುರಿತು ಮಾತನಾಡಿರುವ ಮೇಯರ್, ಸ್ಥಾಯಿ ಸಮಿತಿ ಆರು ಜನ ಸದಸ್ಯರ ಚುನಾವಣೆ ಸಂದರ್ಭದಲ್ಲಿ ಕೆಲವು ಬಿಜೆಪಿ ಕೌನ್ಸಿಲರ್ಗಳು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ರ್ಯಾಗಿಂಗ್ಗೆ ಬೇಸತ್ತು ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ