ETV Bharat / bharat

ಮತ ಎಣಿಕೆ ಆರಂಭ.. ಯಾರ ಪಾಲಿಗೆ ದೆಹಲಿ ಮಹಾನಗರ ಪಾಲಿಕೆ?

ದೆಹಲಿ ಬೃಹನ್ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಆಮ್​ ಆದ್ಮಿ ಪಕ್ಷ, 15 ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವ ತವಕದಲ್ಲಿದೆ.

mcd-polls-counting-of-votes
ಯಾರ ಪಾಲಿಗೆ ದೆಹಲಿ ಪಾಲಿಕೆ
author img

By

Published : Dec 7, 2022, 7:10 AM IST

Updated : Dec 7, 2022, 8:17 AM IST

ನವದೆಹಲಿ: ಗುಜರಾತ್​, ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯ ಜೊತೆಗೆ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಬಿಜೆಪಿ, ಆಡಳಿತಾರೂಢ ಆಮ್​ ಆದ್ಮಿ ಪಕ್ಷದ ಮಧ್ಯೆ ಜಿದ್ದಾಜಿದ್ದಿ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಯಾರ ಪಾಲಿಗೆ ಪಾಲಿಕೆ ಗದ್ದುಗೆ ಸಿಗಲಿದೆ ಎಂಬುದು ಮಧ್ಯಾಹ್ನದ ವೇಳೆಗೆ ಬಹಿರಂಗವಾಗಲಿದೆ.

ರಾಷ್ಟ್ರ ರಾಜಧಾನಿಯ 250 ವಾರ್ಡ್‌ಗಳಿಗೆ ಡಿಸೆಂಬರ್ 4 ರಂದು ಮತದಾನ ನಡೆದಿತ್ತು. ಇದರಲ್ಲಿ ಶೇ.50ರಷ್ಟು ಮತದಾನವಾಗಿದ್ದು, ಒಟ್ಟು 1,349 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಪಾಲಿಕೆ ಕದನದಲ್ಲಿ ಬಿಜೆಪಿ, ಆಪ್​ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಯಿದ್ದರೂ, ಕೇಸರಿ ಪಡೆ ಮತ್ತು ಕೇಜ್ರಿವಾಲ್​ ಪಕ್ಷದ ನಡುವೆ ಹೆಚ್ಚಿನ ಹಣಾಹಣಿ ಇದೆ.

ಚುನಾವಣೆ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಈ ಬಾರಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿವೆ. 2007 ರಿಂದ ಪಾಲಿಕೆ ಅಧಿಕಾರ ನಡೆಸುತ್ತಿರುವ ಬಿಜೆಪಿ 2 ನೇ ಸ್ಥಾನಕ್ಕೆ ಕುಸಿದು, ಕಾಂಗ್ರೆಸ್​ ಅತ್ಯಲ್ಪ ವಾರ್ಡ್​ಗಳಲ್ಲಿ ಗೆಲುವು ಕಾಣಲಿದೆ ಎಂದು ಅಂದಾಜಿಸಲಾಗಿದೆ.

ಮತ ಎಣಿಕೆಗಾಗಿ ಆಯೋಗವು 42 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 68 ಚುನಾವಣಾ ವೀಕ್ಷಕರನ್ನು ನಿಯೋಜಿಸಿದ್ದು, ಅವರ ಮೇಲ್ವಿಚಾರಣೆಯಲ್ಲಿ ಚುನಾವಣಾಧಿಕಾರಿಗಳು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಗಳ ಎಣಿಕೆಯನ್ನು ನಡೆಯುತ್ತಿದೆ. ಈ ವೇಳೆ 42 ಎಣಿಕೆ ಕೇಂದ್ರ ಮತ್ತು ಚುನಾವಣಾ ಆಯೋಗದ ವೆಬ್ ಪೋರ್ಟಲ್‌ನಲ್ಲಿ ನೇರ ಫಲಿತಾಂಶಗಳನ್ನು ಭಿತ್ತರಿಸಲಾಗುತ್ತಿದೆ.

ಓದಿ: ಇಂದಿನಿಂದ 17 ದಿನ ಚಳಿಗಾಲದ ಅಧಿವೇಶನ.. ಹಳೆಯ ಸಂಸತ್​ನಲ್ಲಿ ಕೊನೆಯ ಕಲಾಪ?

Last Updated : Dec 7, 2022, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.