ETV Bharat / bharat

ಫೋನ್​ ಬಳಸುತ್ತಿದ್ದಕ್ಕೆ ಪೋಷಕರು ಬೈದರೆಂದು ಮೆಟ್ರೋ ನಿಲ್ದಾಣದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ.. ವಿಡಿಯೋ - ಹೈದರಾಬಾದ್​ನ ಇಎಸ್​ಐ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ

ವಿದ್ಯಾರ್ಥಿನಿ ಮಂಗಳವಾರ ಸಂಜೆ 5.30ಕ್ಕೆ ಇಎಸ್‌ಐ ಮೆಟ್ರೋ ನಿಲ್ದಾಣವನ್ನು ತಲುಪಿ, ಮೆಟ್ರೋ ನಿಲ್ದಾಣದ ಮೊದಲ ಮಹಡಿಯಿಂದ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ನೀಡುತ್ತಿರುವಾಗ ಆಕೆ ಸಾವನ್ನಪ್ಪಿದ್ದಾಳೆ..

mba-student-jumps-to-death-from-metro-station-in-hyderabad
ಪೋನ್​ ಬಳಸುತ್ತಿದ್ದಕ್ಕೆ ಪೋಷಕರು ಬೈದರೆಂದು ಮೆಟ್ರೋ ನಿಲ್ದಾಣದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ.. ವಿಡಿಯೋ
author img

By

Published : Apr 6, 2022, 12:21 PM IST

ಹೈದರಾಬಾದ್‌, ತೆಲಂಗಾಣ : ಎಂಬಿಎ ವಿದ್ಯಾರ್ಥಿಯೋರ್ವಳು ಹೈದರಾಬಾದ್‌ನ ಮೆಟ್ರೋ ನಿಲ್ದಾಣವೊಂದರ ಮೊದಲ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಇಎಸ್‌ಐ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಆಕೆ ಚಿಕಿತ್ಸೆ ವೇಳೆಯೇ ಮೃತಪಟ್ಟಿದ್ದಾಳೆ.

ಮೆಟ್ರೋ ನಿಲ್ದಾಣದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..

ಬೋರಬಂಡ ಸಮೀಪದ ಸಂಜಯ್ ನಗರದಲ್ಲಿ ವಾಸವಿದ್ದ ವಿದ್ಯಾರ್ಥಿನಿ ಎಂಬಿಎ ಪ್ರಥಮ ವರ್ಷ ಓದುತ್ತಿದ್ದಳು. ಆಕೆಯ ತಂದೆ ಆಟೋಮೊಬೈಲ್ ಅಂಗಡಿಯನ್ನು ಹೊಂದಿದ್ದರು. ಮೃತಳಿಗೆ ಮೂವರು ಸಹೋದರರಿದ್ದು, ಯಾವಾಗಲೂ ಫೋನ್ ಬಳಸುತ್ತಿದ್ದ ಕಾರಣದಿಂದ ಪೋಷಕರು ಆಕೆಯನ್ನು ಗದರಿಸಿದ್ದರು.

ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಮಂಗಳವಾರ ಸಂಜೆ 5.30ಕ್ಕೆ ಇಎಸ್‌ಐ ಮೆಟ್ರೋ ನಿಲ್ದಾಣವನ್ನು ತಲುಪಿ, ಮೆಟ್ರೋ ನಿಲ್ದಾಣದ ಮೊದಲ ಮಹಡಿಯಿಂದ ಜಿಗಿದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ನೀಡುತ್ತಿರುವಾಗ ಆಕೆ ಸಾವನ್ನಪ್ಪಿದ್ದಾಳೆ.

ಈ ಕುರಿತು ಮೆಟ್ರೋ ಎಂಡಿ ಎನ್‌ವಿಎಸ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಇತ್ತೀಚೆಗೆ ಮೆಟ್ರೋ ನಿಲ್ದಾಣಗಳಲ್ಲಿ ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಿವೆ. ಎಲ್‌ ಅಂಡ್ ಟಿ ಹೈದರಾಬಾದ್ ಕಂಪನಿಯೊಂದಿಗೆ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಇಂತಹ ಘಟನೆ ತಪ್ಪಿಸಲು ಮೆಟ್ರೋ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಇಬ್ಬರು ಉಗ್ರರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.