ವಾರಾಣಸಿ: ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಬಳಿಕ ಮಾರಿಷಸ್ ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನಾಥ್ ನೇರವಾಗಿ ವಾರಾಣಸಿಗೆ ಭೇಟಿ ನೀಡಿದ್ದಾರೆ. ಸೋಮವಾರ ವಾರಾಣಸಿಗೆ ಬಂದಿಳಿದ ಇವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಲಾಲ್ ಬಹದ್ದೂರು ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ಅನುಸಾರ ಅವರಿಗೆ ಸ್ವಾಗತ ನೀಡಲಾಗಿದ್ದು, ಮಂಗಳವಾರ ಮಧ್ಯಾಹ್ನ ಅವರು ಮಾರಿಷಸ್ ಮರಳಲಿದ್ದಾರೆ
ವಾರಾಣಸಿ ಆಡಳಿತದ ಪರವಾಗಿ ವಾರಾಣಸಿ ವಿಭಾಗದ ಕೌಶಲ್ ರಾಜ್ ಶರ್ಮಾ ಮಾರಿಷಿಯಸ್ ಪ್ರಧಾನಿ ಅವರನ್ನು ಹೊಟೇಲ್ ತಾಜ್ನಲ್ಲಿ ಹೂ ಗುಚ್ಛ ನೀಡುವ ಮೂಲಕ ಬರ ಮಾಡಿಕೊಂಡರು. ಕೆಲ ಹೊತ್ತಿನ ವಿಶ್ರಾಂತಿ ಬಳಿಕ ಪ್ರಧಾನಿ ಅವರು ದಶಾ ಸುಮೇದ್ ಘಾಟ್ಗೆ ಭೇಟಿ ನೀಡಿದರು. ಇಲ್ಲಿ ಇದೆ ವೇಳೆ ಅವರ ಮಾವನ ಅವರ ಚಿತಾ ಭಸ್ಮಾವನ್ನು ಗಂಗೆಯಲ್ಲಿ ಬಿಟ್ಟರು. ಮಾರಿಷಸ್ ಪ್ರಧಾನಿ ಆಗಮನದ ಹಿನ್ನಲೆ ಸುತ್ತಮುತ್ತ ಪ್ರದೇಶದಲ್ಲಿ ರಕ್ಷಣೆಯನ್ನು ಬಿಗಿ ಮಾಡಲಾಗಿತ್ತು. ವಾರಾಣಸಿಯಲ್ಲಿ ಎರಡು ದಿನಗಳ ಕಾಲ ಪ್ರವಾಸ ನಡೆಸಲಿರುವ ಹಿನ್ನೆಲೆ ನಗರದಲ್ಲಿ ಅನೇಕ ಬಿಗಿ ಬಂದೋಬಸ್ತ್ ನಡೆಸಿದ್ದು, ಪ್ರಮುಖ ಮಾರ್ಗದಲ್ಲಿ ಸಂಚಾರ ಬದಲಾಯಿಸಲಾಗಿತ್ತು.
ಮಾರಿಷಸ್ ಪ್ರಧಾನ ಮಂತ್ರಿ ಈ ಪ್ರವಾಸದ ವೇಳೆ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದರು. ಇಲ್ಲಿ ವಿಶೇಷ ಪೂಜೆ ನೆರವೇರಿಸಿದ ಅವರು, ಬಳಿಕ ನೇರವಾಗಿ ದಶಶ್ವಮೇಧ ಘಾಟ್ಗೆ ತೆರಳಿ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ, ಅವರ ಕುಟುಂಬ ಸದಸ್ಯರ ಉಪಸ್ಥಿತಿ ಇರಲಿದೆ. ಈಗಾಗಲೇ ದಶಶ್ವಮೇಧ ಘಾಟ್ನಲ್ಲಿ ಭದ್ರತೆ ವ್ಯವಸ್ಥೆಯನ್ನು ನಡೆಸಲಾಗಿದೆ.
ವಾರಾಣಸಿಯೊಂದಿಗೆ ಇದೆ ವಿಶೇಷ ಸಂಬಂಧ: ಮಾರಿಷಿಯಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರಿಗೆ ವಾರಾಣಸಿಯೊಂದಿಗೆ ವಿಶೇಷ ಬಾಂಧವ್ಯ ಇದೆ. ಅವರು ವಾರಾಣಸಿಯ ಸಮೀಪದ ಬಲ್ಲಿಯ ನಿವಾಸಿಗಳಂತೆ ಅವರ ಪೂರ್ವಿಕರು ಇಲ್ಲಿಯೇ ನೆಲೆಸಿದ್ದರು. ಈ ಹಿನ್ನೆಲೆ ಈ ನೆಲದೊಂದಿಗೆ ಅವರ ನಂಟು ಹೆಚ್ಚಿದೆ. 2019ರಲ್ಲೂ ಕೂಡ ಅವರು ವಾರಾಣಸಿಗೆ ಭೇಟಿ ನೀಡಿ, ಕಾಶಿಯಲ್ಲಿನ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ 2021ರಲ್ಲಿ ಮತ್ತೆ ಅವರು ಆಗಮಿಸಿದ್ದರು. ಈ ವೇಳೆ ಕೂಡ ಅವರು ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಭಾರತಕ್ಕೆ ಅವರು ಯಾವಾಗಲೇ ಆಗಮಿಸಿದರೂ, ಅವರು ವಾರಾಣಸಿಗೆ ತಪ್ಪದೇ ಭೇಟಿ ನೀಡುವ ಅಭ್ಯಾಸ ನಡೆಸಿದ್ದಾರೆ.
ಇದನ್ನೂ ಓದಿ: ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ