ಮಥುರಾ: ಇಲ್ಲಿನ ಪ್ರಸಿದ್ಧ ಬರ್ಸನಾ ಲಾಥ್ಮಾರ್ ಹೋಳಿ ಆಚರಣೆ ಇಂದು ಸಂಜೆ 4 ಗಂಟೆಗೆ ನಡೆಯಲಿದೆ. ಇದು ಮಥುರಾದ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಸ್ಥಳಕ್ಕೆ ಹೋಳಿ ಆಚರಿಸಲು ಸಾವಿರಾರು ಮಂದಿ ಆಗಮಿಸುತ್ತಾರೆ. ಇನ್ನು ಈ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳನ್ನು ಪೊಲೀಸರು ಅಳವಡಿಸಿದ್ದಾರೆ.
ನಂದಗಾಂವ್‌ನ ಹುರಿಯಾರಿನ್ ಲಾಥ್ಮಾರ್ ಮತ್ತು ಬುರ್ಸಾನಾ ಗ್ರಾಮಸ್ಥರು ಈ ಹೋಳಿ ಆಡಲಿದ್ದಾರೆ. ಈ ಸ್ಥಳ ರಾಧೆ - ಕೃಷ್ಣನ ಸಮ್ಮಿಲನದ ಬಗ್ಗೆ ತಿಳಿಸುತ್ತದೆ. ಈ ಹೋಳಿ ಆಚರಣೆ ವೇಳೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬರ್ಸನಾದ ವೇದಿಕೆಗಳಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ, ಗೋಡೆಗಳ ಮೇಲೆ ರಾಧಾ ಕೃಷ್ಣ ವರ್ಣಚಿತ್ರಗಳನ್ನು ಮಾಡಲಾಗಿದೆ.
ಇದನ್ನು ಓದಿ: ಎಂಪಿ, ಯುಪಿ ಬಳಿಕ ಆಂಧ್ರದಲ್ಲಿ ರಸ್ತೆ ದುರಂತ: ಐವರು ಬಲಿ
ಬರ್ಸಾನದಲ್ಲಿನ ಲಾಥ್ಮಾರ್ ಹೋಳಿ ಹಬ್ಬಕ್ಕೆ ಜಿಲ್ಲಾಡಳಿತ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ. ಬರ್ಸಾನಾ ಪ್ರದೇಶವನ್ನು 12 ವಲಯಗಳಾಗಿ ವಿಂಗಡಿಸಲಾಗಿದೆ. 150 ಸಿಸಿಟಿವಿ ಕ್ಯಾಮೆರಾಗಳು, 10 ವಾಚ್ ಟವರ್‌ಗಳು, 4 ಡ್ರೋನ್ ಕ್ಯಾಮೆರಾಗಳನ್ನು ಸಹ ಆವರಣದಲ್ಲಿ ನಿಯೋಜಿಸಲಾಗಿದೆ. ಐದು ಎಎಸ್‌ಪಿಗಳು, ಹನ್ನೆರಡು ಸಿಒಗಳು, ಹನ್ನೆರಡು ಪೊಲೀಸ್ ಠಾಣೆ ಉಸ್ತುವಾರಿ, ಐವತ್ತು ಸಬ್ ಇನ್ಸ್‌ಪೆಕ್ಟರ್‌ಗಳು, ಏಳು ಮಹಿಳಾ ಸಬ್ಇನ್ಸ್ಪೆಕ್ಟರ್ಗಳು, 650 ಕಾನ್‌ಸ್ಟೆಬಲ್‌ಗಳು, ಐವತ್ತು ಮಹಿಳಾ ಕಾನ್‌ಸ್ಟೆಬಲ್‌ಗಳು, ನಾಲ್ಕು ಪಿಎಸಿ ಕಂಪನಿ ಮತ್ತು ನಾಲ್ಕು ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ.