ಹರಿದ್ವಾರ (ಉತ್ತರಾಖಂಡ): ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್‌ನ (ಬಿಎಚ್‌ಇಎಲ್) ಫೌಂಡ್ರಿ ಗೇಟ್ ಬಳಿ ಇರುವ 132 ಕೆವಿ ಸಬ್‌ಸ್ಟೇಷನ್‌ನಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬಿಎಚ್‌ಇಎಲ್‌ನ 132ಕೆವಿ ಉಪ - ಕೇಂದ್ರವು ಬಿಎಚ್‌ಇಎಲ್‌ನ 24 ಗಂಟೆ ವಿದ್ಯುತ್ ಪೂರೈಕೆ ಮಾಡುವ ಫೌಂಡ್ರಿ ಗೇಟ್ ಬಳಿ ಇದೆ. ಈ ಉಪ-ಕೇಂದ್ರದಿಂದ ಬಿಎಚ್‌ಇಎಲ್ ಕಾರ್ಖಾನೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಪವರ್‌ಹೌಸ್‌ನಲ್ಲಿದ್ದ ಕಾರ್ಮಿಕರಿಗೆ ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುವಷ್ಟರಲ್ಲಿ ಬೆಂಕಿ ಹರಡಿಕೊಂಡಿದೆ. ಬೆಂಕಿಯಗೆ 18 ದೊಡ್ಡ ವಿದ್ಯುತ್ ಫಲಕಗಳು ಸುಟ್ಟು ಬೂದಿಯಾಗಿದ್ದು, ಕಾರ್ಖಾನೆಯ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಬಿಎಚ್‌ಇಎಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಕೇಶ್ ಮಾಣಿಕ್ತಾಲ್ ಮಾತನಾಡಿ, 'ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹತೋಟಿಗೆ ಬಂದಿದೆ. ಒಟ್ಟು 18 ಪ್ಯಾನೆಲ್‌ಗಳಿಗೆ ಬೆಂಕಿ ತಗುಲಿದ್ದು, ಕಾರ್ಖಾನೆಯ ಒಳಗಿನ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ. ಆದರೆ, ವಿದ್ಯುತ್ ಕಾರ್ಖಾನೆಯೊಳಗೆ ಕಾರ್ಯಗಳನ್ನು ಮತ್ತೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ಇಬ್ಬರಿಗೆ ಗಾಯ