ETV Bharat / bharat

ಕಾಸರಗೋಡಿನಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಶ.. ಒಬ್ಬ ಆರೋಪಿ ಬಂಧನ - kerala news

ಮಂಗಳವಾರ ಕಾಸರಗೋಡಿನಲ್ಲಿ ಅಬಕಾರಿ ಅಧಿಕಾರಿಗಳು ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.

massive-explosives-seizure-in-kasaragod
ಕಾಸರಗೋಡಿನಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಶ.. ಓರ್ವ ಆರೋಪಿ ಬಂಧನ
author img

By

Published : May 30, 2023, 10:36 PM IST

ಕಾಸರಗೋಡು (ಕೇರಳ): ಕಾಸರಗೋಡು ಅಬಕಾರಿ ತಂಡವು ಮಂಗಳವಾರ ಬೆಳಗ್ಗೆ ಕಾಸರಗೋಡಿನ ಕೆಟ್ಟುಂಕಲ್​​ ಎಂಬಲ್ಲಿ ದಾಳಿ ನಡೆಸಿದ್ದು ಸುಮಾರು 2,150 ಡಿಟೋನೇಟರ್‌ಗಳು ಮತ್ತು 13 ಬಾಕ್ಸ್​​​​ ಜಿಲೆಟಿನ್​ ಕಡ್ಡಿಗಳನ್ನು ವಶಪಡಿಸಿಕೊಂಡಿದೆ. ಪ್ರಕರಣ ಸಂಬಂಧ ಕೆಟ್ಟುಂಕಲ್​​ ಮೂಲದ ಮುಸ್ತಫಾ ಎಂಬಾತನ ಬಂಧಿಸಲಾಗಿದೆ.

ವಿಶೇಷ ಅಬಕಾರಿ ತಂಡವು ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಸೈಕೋಟ್ರೋಪಿಕ್​​ ಡ್ರಗ್ಸ್​​​​ ಖರೀದಿಗೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಮೇರೆಗೆ ದಾಳಿ ನಡೆಸಿದೆ. ಆದರೆ ದಾಳಿಯಲ್ಲಿ ಮಾದಕವಸ್ತುಗಳ ಬದಲು ಅಪಾರ ಪ್ರಮಾಣದ ಸ್ಫೋಟಕಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಚಾರಣೆ ಆರಂಭಿಸಿದ ಅಧಿಕಾರಿಗಳಿಗೆ ಆರೋಪಿ ಮುಸ್ತಫಾ ನನ್ನ ಬಳಿ ಕಲ್ಲು ಕ್ವಾರಿಯಿದ್ದು ಅದಕ್ಕಾಗಿ ಇಷ್ಟೊಂದು ಪ್ರಮಾಣದ ಸ್ಫೋಟಕಗಳನ್ನು ಇಟ್ಟುಕೊಂಡಿದ್ದೆ ಎಂದು ತಿಳಿಸಿದ್ದ.

ಆದರೆ , ನಂತರ ಅಧಿಕಾರಿಗಳು ಈತ ಸುಳ್ಳು ಹೇಳುತ್ತಿದ್ದಾನೆ ಎಂದು ತಿಳಿದ ತಕ್ಷಣ ಆತನನ್ನು ಬಂಧಿಸಲು ಹೋದಾಗ ಮುಸ್ತಫಾ ತನ್ನ ಚಾಕುವಿನಿಂದ ಕೈ ನರವನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ತಕ್ಷಣವೇ ಪೊಲೀಸರು ಆರೋಪಿ ಮುಸ್ತಾಫಾನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಬಂಧಿಸಿದ್ದಾರೆ.

ಕೇರಳದ ಮತ್ತೊಂದೆಡೆ, ಪಾಲಕ್ಕಾಡ್‌ನ ವಳಯಾರ್‌ ಎಂಬ ಪ್ರದೇಶದಲ್ಲಿ ಭಾರೀ ಸ್ಫೋಟಕ ವಶಪಡಿಸಿಕೊಂಡ ವರದಿಯಾಗಿದೆ. ವಾಳಯಾರ್ ಗಡಿ ಭಾಗದದಲ್ಲಿ ಅಕ್ರಮವಾಗಿ ಸ್ಫೋಟಕ ಸಾಗಿಸುತ್ತಿದ್ದ ಟೆಂಪೋ ವ್ಯಾನ್​ವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಾಳಯಾರ್ ಟೋಲ್ ಪ್ಲಾಜಾ ಮೂಲಕ ತ್ರಿಶೂರ್ ಪೂಂಕುನ್ನಂಗೆ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ತಲಾ 200 ಜಿಲೆಟಿನ್ ಸ್ಟಿಕ್‌ಗಳನ್ನು ಒಳಗೊಂಡ 100 ರಟ್ಟಿನ ಪೆಟ್ಟಿಗೆಗಳನ್ನು ವಶಪಡಿಸಿಕೊಂಡು ವಾಹನದಲ್ಲಿ ಸ್ಫೋಟಕಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ದೊರಕಿದೆ.

ಉದ್ಯಮಿಯ ಹತ್ಯೆ: ಇತ್ತೀಚಿಗೆ ಕೇರಳದಲ್ಲಿ ಉದ್ಯಮಿಯೊಬ್ಬರನ್ನು ಕೊಂದು ಶವವನ್ನು ತುಂಡು ತುಂಡಾಗಿ ಕತ್ತರಿಸಿ ಟ್ರಾಲಿ ಬ್ಯಾಗ್‌ನಲ್ಲಿ ಹಾಕಿ ಅಟ್ಟಪಾಡಿ ಘಾಟ್ ರಸ್ತೆಯಲ್ಲಿ ಪಾಸ್‌ನಲ್ಲಿ ಎಸೆದ ಭೀಕರ ಘಟನೆ ನಡೆದಿತ್ತು. ತಿರೂರು ಮೂಲದ ಸಿದ್ದಿಕ್ (58) ಕೊಲೆಯಾದವರು. ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಇಬ್ಬರು ಯುವತಿಯರನ್ನು ಚೆನ್ನೈನಲ್ಲಿ ಬಂಧಿಸಿದ್ದಾರೆ. ಸಿದ್ದಿಕ್ ಅವರ ಹೋಟೆಲ್ ಉದ್ಯೋಗಿ ಶಿಬಿಲಿ (22) ಮತ್ತು ಆಕೆಯ ಗೆಳತಿ ಫರ್ಹಾನಾ (18) ಬಂಧಿತರು.

ಸಿದ್ದಿಕ್ ಕೋಹಿಕ್ಕೋಡ್​ನಲ್ಲಿ ಹೋಟೆಲ್ ನಡೆಸುತ್ತಿದ್ದರು. ದೂರವಾಣಿ ಸಂಪರ್ಕಕ್ಕೆ ಸಿಗದಿದ್ದಾಗ ಸಿದ್ದಿಕ್ ಅವರ ಮಗ ತಿರೂರ್ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಆತನ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿರುವುದು ಪತ್ತೆಯಾಗಿದೆ. ಬಳಿಕ ಅವರ ಒಡೆತನದ ಹೋಟೆಲ್ ಉದ್ಯೋಗಿಗಳು ನಾಪತ್ತೆಯಾಗಿದ್ದು ಅನುಮಾನ ಹೆಚ್ಚಿಸಿತ್ತು. ನಂತರ ನಡೆದ ವಿಸ್ತೃತ ತನಿಖೆಯಲ್ಲಿ ಕೊಲೆ ಪ್ರಕರಣ ಬಯಲಾಗಿದ್ದು, ಮೇ 22ರಂದು ಕೋಹಿಕ್ಕೋಡ್‌ನ ಎರನ್ಹಿಪಾಲಂನ ಹೋಟೆಲ್‌ನಲ್ಲಿ ಸಿದ್ದಿಕ್‌ನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಾರು ವೇಷದಲ್ಲಿ ಬಂದು ಅತ್ತೆ ಕೊಂದ ಸೊಸೆ: ಅಪರಾಧಿ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.