ದಾಂತೇವಾಡ (ಛತ್ತೀಸ್ಗಢ): ಛತ್ತೀಸ್ಗಢದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಯುವಕರು ಮತ್ತು 22 ವರ್ಷದ ಓರ್ವ ಯುವತಿ ಒಟ್ಟಿಗೆ ಮದ್ಯ ಸೇವಿಸಿದ ನಂತರ, ಪ್ರಜ್ಞೆ ತಪ್ಪಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಇದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.
ದಾಂತೇವಾಡ ಜಿಲ್ಲೆಯ ಬಚೇಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ವರದಿಯಾಗಿದೆ. ಇಲ್ಲಿನ ಕಡಂಪಲ್ ನಿವಾಸಿಗಳಾದ ಬುಧ್ರು ಒಯಾಮಿ (22) ಮತ್ತು ಬಿಜು ರಾಮ್ ಒಯಾಮಿ (20) ಎಂಬುವವರನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಹೀಗಿದೆ..: ಡಿಸೆಂಬರ್ 24ರ ಮಧ್ಯಾಹ್ನ 12 ಗಂಟೆಯಿಂದ ಯುವತಿ ಕಾಣೆಯಾಗಿದ್ದಳು. ಇದರಿಂದ ಆತಂಕಗೊಂಡಿದ್ದ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದರ ನಡುವೆ ಡಿ.25ರಂದು ಬೆಳಗ್ಗೆ 6.30ರ ಸುಮಾರಿಗೆ ಸಮೀಪದ ಪಾದಾಪುರದ ಮೊಬೈಲ್ ಟವರ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆ ಯುವತಿ ಪತ್ತೆಯಾಗಿದ್ದಳು. ನಂತರ ಆಕೆಯನ್ನು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸಂತ್ರಸ್ತೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.
ಇದನ್ನೂ ಓದಿ: ದಂತ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ: 6 ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಕೇಸ್
ಇದಾದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆಗ ಈ ವರದಿಯಲ್ಲಿ ಯುವತಿ ಬಲಾತ್ಕಾರಕ್ಕೆ ಒಳಗಾಗಿದ್ದು ದೃಢಪಟ್ಟಿದೆ. ಜೊತೆಗೆ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ಬಯಲಾಗಿದೆ. ಆದ್ದರಿಂದ ಇದು ಗಂಭೀರ ಪ್ರಕರಣ ಎಂದು ಪರಿಗಣಿಸಿದ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.
ನಡೆದಿದ್ದೇನು ಏನು?: ಈ ತನಿಖೆಯ ಭಾಗವಾಗಿ ಆರೋಪಿಗಳಾದ ಬುಧ್ರು ಮತ್ತು ಬಿಜು ರಾಮ್ನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ನಂತರ ವಿಚಾರಣೆ ಒಳಪಡಿಸಲಾಗಿದ್ದು, ಆರಂಭದಲ್ಲಿ ಕೃತ್ಯದಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ವಿಚಾರಣೆ ತೀವ್ರಗೊಂಡ ನಂತರ ಇಬ್ಬರೂ ಕಾಮುಕರು ಇಡೀ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಹದಿಹರೆಯದ ಬಾಲಕಿ ಕತ್ತು ಸೀಳಿ ಕೊಲೆ: ಪ್ರಿಯಕರ ಪೊಲೀಸ್ ವಶಕ್ಕೆ
ಆರೋಪಿ ಬುಧ್ರುವಿಗೆ ಈಗಾಗಲೇ ಮದುವೆಯಾಗಿದೆ. ಆದರೆ, ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದ 22 ವರ್ಷದ ಯುವತಿಯೊಂದಿಗೆ ಹಲವು ದಿನಗಳಿಂದ ಆತ ಸಂಬಂಧ ಹೊಂದಿದ್ದ. ಅಂತೆಯೇ, 24ರಂದು ಸ್ನೇಹಿತ ಬಿಜು ರಾಮ್ ಒಯಾಮಿ ಜೊತೆ ಬೈಕ್‌ನಲ್ಲಿ ಯುವತಿಯನ್ನು ಕಾಡಿನ ಕಡೆಗೆ ಕರೆದುಕೊಂಡು ಹೋಗಿದ್ದ ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಬಚೇಲಿ ಪೊಲೀಸ್ ಸ್ಟೇಷನ್ ಇನ್‌ಚಾರ್ಜ್ ಗೋವಿಂದ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿವಾಹೇತರ ಸಂಬಂಧ.. ಬೇರೊಬ್ಬನ ಜೊತೆಗೂ ಸಲುಗೆ, ಮಹಿಳೆ ಕೊಂದು ಹೂತಾಕಿದ ಆರೋಪಿ ಅರೆಸ್ಟ್
ಕಾಡಿನ ಕಡೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಮೂವರೂ ಸಹ ಒಟ್ಟಿಗೆ ಕುಳಿತು ಮದ್ಯ ಸೇವಿಸಿದ್ದಾರೆ. ಮದ್ಯ ಕುಡಿದಿದ್ದ ಯುವತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಗ ಬೈಕ್‌ನಲ್ಲಿ ಕೂರಿಸಲು ಯತ್ನಿಸಿದರೂ ನಶೆಯಲ್ಲಿ ತೇಲಾಡುತ್ತಿದ್ದ ಯುವತಿ ಮರಳಿ ನೆಲಕ್ಕೆ ಬಿದ್ದಿದ್ದಾಳೆ. ಯುವತಿಯ ಪ್ರಜ್ಞಾಹೀನತೆಯ ಲಾಭ ಪಡೆದು ಆರೋಪಿ ಬುಧ್ರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಅಲ್ಲೇ ಬಿಟ್ಟು ಇಬ್ಬರೂ ಪರಾರಿಯಾಗಿದ್ದರು. ಇತ್ತ, ರಾತ್ರಿಯಿಡೀ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಅದೇ ಸ್ಥಳದಲ್ಲಿ ಬಿದ್ದಿದ್ದಳು. ಮರುದಿನ ಗ್ರಾಮಸ್ಥರು ಯುವತಿಯನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯ ಶಿರಚ್ಛೇದಿಸಿ ಬರ್ಬರ ಹತ್ಯೆ: ಭುಗಿಲೆದ್ದ ಆಕ್ರೋಶ