ETV Bharat / bharat

ಗೆಳೆಯನ ಭೇಟಿಗೆ ಹೋದ ವಿವಾಹಿತ ಮಹಿಳೆ: ಕಾಂಪೌಂಡ್​​ಗೆ ಕಟ್ಟಿ ತಾಲಿಬಾನ್ ರೀತಿ ಶಿಕ್ಷೆ ನೀಡಿದ ಗ್ರಾಮಸ್ಥರು - ವಿವಾಹಿತ ಮಹಿಳೆ

ವಿವಾಹಿತ ಮಹಿಳೆಗೆ ತಾಲಿಬಾನ್​ ರೀತಿ ಶಿಕ್ಷೆ ನೀಡಿದ ಗ್ರಾಮಸ್ಥರು- ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ಘಟನೆ- ಗೆಳೆಯನ ಭೇಟಿಯಾಗಲು ತೆರಳಿದ್ದ ವೇಳೆ ರೆಡ್​ಹ್ಯಾಡ್​ ಆಗಿ ಸಿಕ್ಕಿಬಿದ್ದ ಮಹಿಳೆ

Etv BharatGirlfriend was beaten in UP
Etv BharatGirlfriend was beaten in UP
author img

By

Published : Aug 6, 2022, 6:15 PM IST

ಸಿದ್ಧಾರ್ಥನಗರ(ಉತ್ತರ ಪ್ರದೇಶ): ಗೆಳೆಯನನ್ನು ಭೇಟಿಯಾಗಲು ಹೋಗಿದ್ದ ವಿವಾಹಿತ ಮಹಿಳೆಯೋರ್ವಳನ್ನು ಕಾಂಪೌಂಡ್​​ಗೆ ಕಟ್ಟಿ ಹಾಕಿರುವ ಗ್ರಾಮಸ್ಥರು ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ. ತಾಲಿಬಾನ್ ರೀತಿಯಲ್ಲಿ ಶಿಕ್ಷೆ ನೀಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಉತ್ತರ ಪ್ರದೇಶದ ಶೋಹರತ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಧ್ವಪುರದ ಮಹಿಳೆ ಶಿಕ್ಷೆಗೊಳಗಾಗಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್​ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಗೆಳೆಯನನ್ನು ಭೇಟಿ ಮಾಡುವ ಉದ್ದೇಶದಿಂದ ವಿವಾಹಿತ ಮಹಿಳೆ ಮನೆ ಬಿಟ್ಟು ತೆರಳಿದ್ದಳು. ಈ ವೇಳೆ ಆಕೆಯನ್ನು ಹಿಡಿದಿರುವ ಗ್ರಾಮಸ್ಥರು ದೇವಸ್ಥಾನದ ಕಾಂಪೌಂಡ್​ಗೆ ಕಟ್ಟಿಹಾಕಿ, ಥಳಿಸಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದಂತೆ ಎಸ್ಪಿ ಅಮಿತ್ ಕುಮಾರ್ ಮಾತನಾಡಿದ್ದು, ಕಳೆದ ಏಳು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಪ್ರಕರಣದ ತನಿಖೆ ನಡೆಸಲು ಈಗಾಗಲೇ ತನಿಖಾ ಸಮಿತಿ ರಚನೆ ಮಾಡಲಾಗಿದೆ ಎಂದಿದ್ದಾರೆ.

ಮಹಿಳೆ ಮೇಲೆ ಅಮಾನವೀಯ ರೀತಿ ಹಲ್ಲೆ ನಡೆಸಿದ ಗ್ರಾಮಸ್ಥರು

ಇದನ್ನೂ ಓದಿರಿ: Delhi Gang rape​.. ಸ್ಪಾನಲ್ಲಿ ಯುವತಿ ಮೇಲೆ ಮಾಲೀಕ, ಗ್ರಾಹಕನಿಂದ ಅತ್ಯಾಚಾರ

ಅದೇ ಗ್ರಾಮದಲ್ಲಿ ವಾಸವಾಗಿದ್ದ ತನ್ನ ಪ್ರಿಯಕರನ ಭೇಟಿಯಾಗಲು ವಿವಾಹಿತ ಮಹಿಳೆ ತೆರಳಿದ್ದಳು, ಇದನ್ನ ನೋಡಿರುವ ಗ್ರಾಮಸ್ಥರು, ಅವರನ್ನ ರೆಡ್​ಹ್ಯಾಡ್​​ ಆಗಿ ಹಿಡಿದು, ಈ ರೀತಿಯಾಗಿ ಶಿಕ್ಷೆ ನೀಡಿದ್ದಾರೆ. ಮಹಿಳೆಯ ಎರಡು ಕೈgಳನ್ನು ಕಬ್ಬಿಣದ ಕಾಂಪೌಂಡ್​ಗೆ ಹಗ್ಗದಿಂದ ಕಟ್ಟಿಹಾಕಿ ಕೋಲುಗಳಿಂದ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ವಿಡಿಯೋ ವೈರಲ್​ ಆಗ್ತಿದ್ದಂತೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಪತಿ ಕೆಲಸದ ನಿಮಿತ್ತ ರಾಜಸ್ಥಾನದಲ್ಲಿ ವಾಸವಾಗಿದ್ದಾನೆಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.