ಅಮೃತಸರ(ಪಂಜಾಬ್): ಪಂಜಾಬ್ನಲ್ಲಿ ಡ್ರಗ್ಸ್ ಹಾವಳಿ ಜೋರಾಗಿದೆ. ಡ್ರಗ್ಸ್ ಮಾಫಿಯಾ ಹೆಣ್ಣುಮಕ್ಕಳನ್ನೂ ಆವರಿಸಿಕೊಂಡಿದ್ದು, ನವವಿವಾಹಿತೆಯೊಬ್ಬಳು ಕಂಠಪೂರ್ತಿ ಕುಡಿದು ನಡೆಯಲಾಗದೇ ರಸ್ತೆ ಮಧ್ಯೆಯೇ ಹೋಲಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಮೃತಸರದ ಮಕ್ಬುಲ್‌ಪುರದಲ್ಲಿ ಅಮಲೇರಿದ ಮಹಿಳೆಯ ವಿಡಿಯೋ ಬೆಳಕಿಗೆ ಬಂದಿದೆ. ನವವಿವಾಹಿತೆಯಂತೆ ಕಾಣುವ ಈಕೆ ಕೈತುಂಬಾ ಬಳೆಗಳು, ಕೆಂಪು ಬಟ್ಟೆಯನ್ನು ಧರಿಸಿದ್ದಾರೆ. ಪಾನಮತ್ತಳಾಗಿರುವ ಈಕೆ ಒಂದು ಹೆಜ್ಜೆಯೂ ಮುಂದೆ ಹಾಕಲಾಗದ ಸ್ಥಿತಿಯಲ್ಲಿ ನಿಂತಲ್ಲೇ ನಿಂತಿರುವುದು ವಿಡಿಯೋದಲ್ಲಿ ಕಾಣಬಹುದು.
ದೇಹದ ಮೇಲೆ ಪೂರ್ಣ ನಿಯಂತ್ರಣ ಕಳೆದುಕೊಂಡ ಈಕೆ ದಾರಿ ಮಧ್ಯೆಯೇ ಬಾಗಿದ ಮಾದರಿ ಕಣ್ಣು ಮುಚ್ಚಿ ನಿಂತಿದ್ದಾರೆ. ಇದನ್ನು ದಾರಿಹೋಕರು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಮದ್ಯದ ಗಮ್ಮತ್ತಲ್ಲಿ ಮುಳುಗಿದ ಮಹಿಳೆಯ ನಿಸ್ತೇಜ ಭಂಗಿಯನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಓದಿ: ಯುವಕನ ವಿರುದ್ಧ ಲವ್ ಜಿಹಾದ್ ಆರೋಪ: ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದ ಸಂಸದೆ ರಾಣಾ ವಿರುದ್ಧ ಕೇಸ್