ರಂಗಾರೆಡ್ಡಿ(ತೆಲಂಗಾಣ): ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪೋಷಕರು ಎಂತಹ ತ್ಯಾಗಕ್ಕಾದ್ರೂ ಸಿದ್ಧರಾಗುತ್ತಾರೆ. ಆದರೆ, ತೆಲಂಗಾಣದಲ್ಲಿ ವಿಚಿತ್ರ ಘಟನೆವೊಂದು ನಡೆದಿದೆ. ಬರ್ತಡೇ ಪಾರ್ಟಿ ಎಂದು ಹೇಳಿ 12 ವರ್ಷದ ಮಗಳಿಗೆ 35 ವರ್ಷದ ವ್ಯಕ್ತಿ ಜೊತೆ ಮದುವೆ ಮಾಡಿಸಿದ್ದಾರೆ. ಈ ಮೂಲಕ ತಮ್ಮ ಮಗಳ ಬಾಳಿನಲ್ಲಿ ವಿಲನ್ ಆಗಿದ್ದಾರೆ. ತೆಲಂಗಾಣದ ರಂಗಾರೆಡ್ಡಿ, ಜಿಲ್ಲೆಯ ಕೇಶಂಪೇಟ ಮಂಡಲದ ಪಾಪಿರೆಡ್ಡಿಗುಡ್ಡದಲ್ಲಿ ಈ ಘಟನೆ ನಡೆದಿದೆ.
ಮಗಳಿಗೆ ಹುಟ್ಟುಹಬ್ಬದ ಸಂಭ್ರಮ ಎಂದು ಹೇಳಿ, 12 ವರ್ಷದ ಮಗಳಿಗೆ 35 ವರ್ಷದ ವ್ಯಕ್ತಿ ಜೊತೆ ಮದುವೆ ಮಾಡಿಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ದಂಪತಿಗಳು ಬೇರೆ ಬೇರೆ ಸ್ಥಳಗಳಿಗೆ ಹೋಗಿ, ಕೆಲಸ ಮಾಡ್ತಿದ್ದಾರೆ. ಈ ಮೂಲಕ ತಮ್ಮ ಕುಟುಂಬ ನಿರ್ವಹಿಸುತ್ತಿದ್ದಾರೆ. ಅವರಿಗೆ 12 ವರ್ಷದ ಹೆಣ್ಣು ಮಗುವಿದೆ. ತಮ್ಮ ಮಗಳನ್ನ ಫಾರೂಕ್ ನಗರದಲ್ಲಿ ವಾಸವಾಗಿರುವ 35 ವರ್ಷದ ವ್ಯಕ್ತಿ ಜೊತೆ ಮದುವೆ ಮಾಡಿಸಿದ್ದಾರೆ.
ಇದನ್ನೂ ಓದಿ: ಜನರ ಸೇವೆ ಮಾಡಲು ಗ್ರಾಂಪಂ ಖಾತೆಯಲ್ಲಿ ಇಲ್ಲ ಹಣ.. ಹಣ್ಣು, ತರಕಾರಿ ಮಾರುತ್ತಿರುವ ಸರಪಂಚ್!
ಮದುವೆ ಮಾಡಿಕೊಂಡ ಬಳಿಕ ಐಸಿಡಿಎಸ್(ಸಮಗ್ರ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ) ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ಇದರ ಬೆನ್ನಲ್ಲೇ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಈ ವೇಳೆ, ಪೋಷಕರು ಅಲ್ಲಿಗೆ ತೆರಳಿ, ಸಂಬಂಧಿಕರೊಂದಿಗೆ ವಾಗ್ವಾದ ನಡೆಸಿ, ಆಕೆಯನ್ನ ಕರೆದುಕೊಂಡು ಹೋಗಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ಐಸಿಡಿಎಸ್ ಅಧಿಕಾರಿಗಳು ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಬಾಲಕಿ ವಾಸವಾಗಿದ್ದ ಸ್ಥಳಕ್ಕೆ ತೆರಳಿ, ಬಾಲಕಿಯ ರಕ್ಷಣೆ ಮಾಡಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.