ETV Bharat / bharat

60ರ ಸಂಭ್ರಮಾಚರಣೆಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್​.. ಚಂದಾದಾರರಿಗೆ ಧನ್ಯವಾದ

ಮಾರ್ಗದರ್ಶಿ ಚಿಟ್​ ಫಂಡ್​ನ 60 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಮುಖ್ಯಸ್ಥೆ ಶೈಲಜಾ ಕಿರಣ್ ಅವರು ಎಲ್ಲ ಚಂದಾದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

60 ವರ್ಷಗಳ ಸಂಭ್ರಮಾಚರಣೆಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್​

author img

By

Published : Oct 1, 2022, 6:28 AM IST

Updated : Oct 1, 2022, 12:56 PM IST

60 ವರ್ಷಗಳ ಹಿಂದೆ ಈನಾಡು, ಈಟಿವಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರಾಮೋಜಿ ರಾವ್ ಅವರು ಸ್ಥಾಪಿಸಿದ ಮಾರ್ಗದರ್ಶಿ ಚಿಟ್​ ಫಂಡ್​ ಇಂದು ಮನೆಮಾತಾಗಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಈ ನಾಲ್ಕು ರಾಜ್ಯಗಳಲ್ಲಿ 108 ಶಾಖೆಗಳನ್ನು ಹೊಂದಿರುವ ಮಾರ್ಗದರ್ಶಿ ಕಂಪನಿಯು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಿದೆ.

ಆರ್ಥಿಕ ಮೈಲಿಗಲ್ಲು.. 1962ರಲ್ಲಿ ಮಾರ್ಗದರ್ಶಿ ಕಾರ್ಯಾರಂಭ ಮಾಡಿದ ದಿನದಿಂದ ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಬಹುದಾದ ಅಥವಾ ಆರ್ಥಿಕ ಮೈಲಿಗಲ್ಲುಗಳನ್ನು ಪೂರೈಸುವ ಸಹಕಾರಿಯಾಗಿದೆ. ಉಳಿತಾಯ ಅಭ್ಯಾಸ ಬೆಳೆಸಲು ಹಾಗೂ ಪ್ರೋತ್ಸಾಹಿಸುವ ಮೂಲಕ ಜನರ ಜೀವನವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಮಾರ್ಗದರ್ಶಿ ಸಮರ್ಪಿಸಲಾಗಿದೆ.

60ರ ಸಂಭ್ರಮಾಚರಣೆಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್

ನಾಲ್ಕು ರಾಜ್ಯ, 60ಲಕ್ಷಕ್ಕೂ ಹೆಚ್ಚು ಚಂದಾದಾರರು.. ಹೈದರಾಬಾದ್​ನ ಹಿಮಾಯತ್‌ನಗರದ ಸಾಧಾರಣ ಕಚೇರಿಯಲ್ಲಿ ಕೇವಲ ಇಬ್ಬರು ಉದ್ಯೋಗಿಗಳಿಂದ ಪ್ರಾರಂಭವಾದದ್ದು ಮಾರ್ಗದರ್ಶಿ. ಇಂದು, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಭಾಗದ ಶಾಖೆಗಳಲ್ಲಿ 4,300 ಉದ್ಯೋಗಿಗಳು ಮತ್ತು 60 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಮಾರ್ಗದರ್ಶಿ ಚಿಟ್ ಫಂಡ್ ಮುಖ್ಯಸ್ಥೆ ಶೈಲಜಾ ಕಿರಣ್ ಅವರ ಅಸಾಧಾರಣ ನಾಯಕತ್ವದಲ್ಲಿ ಮಾರ್ಗದರ್ಶಿಯು ಪ್ರಚಂಡ ಬೆಳವಣಿಗೆಯನ್ನು ಸಾಧಿಸಿದೆ. ಚಿಟ್ ಉದ್ಯಮದಲ್ಲಿ ನಾಯಕನಾಗಿ ಮಾರ್ಗದರ್ಶಿ ತನ್ನದೇ ಛಾಪು ಮೂಡಿಸಿದೆ. ಈ ಬಗ್ಗೆ ಎಂಡಿ ಶೈಲಜಾ ಕಿರಣ್ ಮಾತನಾಡಿ, ಕೋವಿಡ್‌ನಿಂದಾಗಿ ಸಾಧಿಸದ 12 ಸಾವಿರ ಕೋಟಿ ರೂಪಾಯಿ ವಹಿವಾಟನ್ನು ಈ ವರ್ಷ ಸಾಧಿಸಲಿದೆ. ಚಿಟ್ ಫಂಡ್ ಉದ್ಯಮದ ಮೇಲೆ ಭಾರಿ ಜಿಎಸ್‌ಟಿ ಹೇರಿಕೆಯಿಂದಾಗಿ ಸದಸ್ಯರು ಸಾಂಸ್ಥಿಕ ಚಿಟ್ ಫಂಡ್‌ಗಳಿಂದ ಅಸಂಘಟಿತ ಚಿಟ್ ಫಂಡ್‌ಗಳಿಗೆ ಬದಲಾಗುವ ಅಪಾಯವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಒಮ್ಮೆ ಗಮನಹರಿಸಬೇಕೆಂದು ಮನವಿ ಮಾಡಿದರು.

ರಾಮೋಜಿ ರಾವ್​ ಅವರ ಮೌಲ್ಯಗಳ ತಳಹದಿ.. ಶ್ರೀರಾಮೋಜಿ ರಾವ್ ಅವರು ಕಂಪನಿಯ ಪ್ರಾರಂಭದ ದಿನದಲ್ಲಿ ಅಳವಡಿಸಿಕೊಂಡ ಮೌಲ್ಯಗಳಿಗೆ ನಾವು ನಮ್ಮ ಅದ್ಭುತ ಯಶಸ್ಸಿಗೆ ಋಣಿಯಾಗಿದ್ದೇವೆ. ಅಂದಿನಿಂದ ಪ್ರತಿ ಮಾರ್ಗದರ್ಶಿ ಕುಟುಂಬದ ಸದಸ್ಯರಲ್ಲಿ ಆಳವಾಗಿ ಹುದುಗಿರುವ ಸಂಪ್ರದಾಯವಾಗಿದೆ. ಆರ್ಥಿಕ ಮೌಲ್ಯಗಳನ್ನು ಒಳಗೊಂಡಿರುವ ಮೌಲ್ಯಗಳು ಶಿಸ್ತು, ವೃತ್ತಿಪರ ಸಮಗ್ರತೆ, ನೈತಿಕ ನೀತಿ ಸಂಹಿತೆ ಮತ್ತು ಉನ್ನತ ಮಟ್ಟದ ಗ್ರಾಹಕರ ಸಂತೋಷಕ್ಕೆ ಕಾರಣವಾಗುವ ವಿಶ್ವಾಸಾರ್ಹತೆ ಇಂದು ಮಾರ್ಗದರ್ಶಿಗೆ ಸಮಾನಾರ್ಥಕವಾಗಿದೆ ಎಂದು ಶೈಲಜಾ ಕಿರಣ್ ತಿಳಿಸಿದರು.

ಸಮಾಜದ ಎಲ್ಲಾ ವರ್ಗಗಳ ಜನರು ಮಾರ್ಗದರ್ಶಿ ಚಿಟ್‌ಗಳಿಗೆ ತಮ್ಮ ಚಂದಾದಾರಿಕೆಯಿಂದ ಪ್ರಯೋಜನವನ್ನು ಪಡೆದಿದ್ದಾರೆ. ಅವರ ಕನಸುಗಳು ಮತ್ತು ಗುರಿಗಳನ್ನು ಸಾಕಾರಗೊಳಿಸಿದ್ದಾರೆ. ಅದು ಸಂಬಳದ ಉದ್ಯೋಗಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಅಥವಾ ದೊಡ್ಡ ಪ್ರಮಾಣದ ವ್ಯಾಪಾರ ಮಾಲೀಕರಾಗಿರಬಹುದು. ಅವರ ಅಗತ್ಯತೆಗಳು ಬದಲಾಗಬಹುದಾದರೂ ಅವರ ಉಳಿತಾಯದ ಆಯ್ಕೆಯು ನಿಸ್ಸಂದೇಹವಾಗಿ ಮಾರ್ಗದರ್ಶಿಯಾಗಿದೆ ಶೈಲಜಾ ಹೇಳಿದರು.

ಚಂದಾದಾರರಿಗೆ ಧನ್ಯವಾದ.. ಮಾರ್ಗದರ್ಶಿ ಕನಸುಗಳು ಮತ್ತು ಗುರಿಗಳ ಸಬಲೀಕರಣದ 60 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಶೈಲಜಾ ಕಿರಣ್ ಅವರು ಸಂಸ್ಥೆಯ ನಾಯಕತ್ವ ತಂಡ ಮತ್ತು ಮಾರ್ಗದರ್ಶಿಯ ಪ್ರತಿಯೊಬ್ಬ ಸದಸ್ಯರಲ್ಲಿ ನಂಬಿಕೆ ಇಟ್ಟಿರುವ ಚಂದಾದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು.

Last Updated : Oct 1, 2022, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.