ETV Bharat / bharat

ಹೈದರಾಬಾದ್​: ಮಾರ್ಗದರ್ಶಿ ಚಿಟ್ ಫಂಡ್ಸ್​​ನ 111ನೇ ಶಾಖೆ ಉದ್ಘಾಟನೆ

Margadarshi Chit Funds 111th Branch: ಹೈದರಾಬಾದ್‌ನ ಉಪ್ಪಲ್ ಪೀರ್ಜಾಡಿಗುಡಾದಲ್ಲಿ ಇಂದು ಮಾರ್ಗದರ್ಶಿ ಚಿಟ್ ಫಂಡ್ಸ್​​ನ 111ನೇ ಶಾಖೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ಉದ್ಘಾಟಿಸಿದರು.

author img

By ETV Bharat Karnataka Team

Published : Dec 15, 2023, 7:36 PM IST

Updated : Dec 15, 2023, 9:20 PM IST

Margadarshi 111th Branch in Peerjadiguda-Hyderabad, Inaugurated by MD Sailaja Kiran
ಹೈದರಾಬಾದ್​: ಉಪ್ಪಲ್​ನಲ್ಲಿ ಮಾರ್ಗದರ್ಶಿ ಚಿಟ್ ಫಂಡ್ಸ್​​ನ 111ನೇ ಶಾಖೆ ಉದ್ಘಾಟಿಸಿದ ಎಂಡಿ ಶೈಲಜಾ ಕಿರಣ್
ಹೈದರಾಬಾದ್​: ಮಾರ್ಗದರ್ಶಿ ಚಿಟ್ ಫಂಡ್ಸ್​​ನ 111ನೇ ಶಾಖೆ ಉದ್ಘಾಟನೆ

ಹೈದರಾಬಾದ್(ತೆಲಂಗಾಣ): ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಉಳಿತಾಯ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಾರ್ಗದರ್ಶಿ ಸಂಸ್ಥೆಯು ತನ್ನ ಚಂದಾದಾರರಿಗೆ ಗುಣಮಟ್ಟ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಮುಂದುವರೆಸಿಕೊಂಡು ಹೋಗಲು ಬದ್ಧವಾಗಿದೆ ಎಂದು ಮಾರ್ಗದರ್ಶಿ ಚಿಟ್ ಫಂಡ್ಸ್ ಪ್ರೈವೇಟ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ತಿಳಿಸಿದರು.

ಹೈದರಾಬಾದ್‌ನ ಉಪ್ಪಲ್ ಪೀರ್ಜಾಡಿಗುಡಾದಲ್ಲಿ ಇಂದು ಮಾರ್ಗದರ್ಶಿ ಚಿಟ್ ಫಂಡ್ಸ್​​ನ 111ನೇ ಶಾಖೆ ಉದ್ಘಾಟನಾ ಸಮಾರಂಭ ನಡೆಯಿತು. ನೂತನ ಶಾಖೆಗೆ ಚಾಲನೆ ನೀಡಿದ ಶೈಲಜಾ ಕಿರಣ್, ಜ್ಯೋತಿ ಬೆಳಗಿಸಿ, ವೇದ ವಿದ್ವಾಂಸರ ಮಂತ್ರಘೋಷಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ 'ಈನಾಡು' ವ್ಯವಸ್ಥಾಪಕ ನಿರ್ದೇಶಕರಾದ ಕಿರಣ್ ಮತ್ತು 'ಈಟಿವಿ ಭಾರತ' ವ್ಯವಸ್ಥಾಪಕ ನಿರ್ದೇಶಕಿ ಬೃಹತಿ ಉಪಸ್ಥಿತರಿದ್ದರು.

ಮಾರ್ಗದರ್ಶಿಯ ಹೊಸ ಶಾಖೆ ಉದ್ಘಾಟಿಸಿ ಮಾತನಾಡಿದ ಎಂಡಿ ಶೈಲಜಾ ಕಿರಣ್, ಯುವಕರು ತಮ್ಮ ಭವಿಷ್ಯ ಬಗ್ಗೆ ದೂರದೃಷ್ಟಿಯಿಂದ ಮಾರ್ಗದರ್ಶಿಯಂತಹ ಸಂಘಟಿತ ಸಂಸ್ಥೆಗಳಲ್ಲಿ ಉಳಿತಾಯ ಮಾಡಿದರೆ, ತಮ್ಮೆಲ್ಲ ಆಸೆಗಳನ್ನು ಈಡೇರಿಸಿಕೊಳ್ಳಬಹುದು. ಪ್ರತಿಯೊಬ್ಬರೂ ಜೀವನದಲ್ಲಿ ಉಳಿತಾಯದ ಹವ್ಯಾಸ ರೂಢಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅವಕಾಶವಿದೆ ಎಂದು ಸಲಹೆ ನೀಡಿದರು. ಮಾರ್ಗದರ್ಶಿ ಸಂಸ್ಥೆಯು ಇನ್ನೂ ನೂರಾರು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಯುತ್ತಾ, ಜನಸೇವೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಎಸ್.ವೆಂಕಟಸ್ವಾಮಿ, ಉಪಾಧ್ಯಕ್ಷರಾದ ಪಿ.ರಾಜಾಜಿ, ಸಾಂಬಮೂರ್ತಿ, ಜಿ.ಬಲರಾಮಕೃಷ್ಣ, ಮುಖ್ಯ ವ್ಯವಸ್ಥಾಪಕ ಸಿ.ವಿ.ಎಂ.ಶರ್ಮಾ, ಶಾಖಾ ವ್ಯವಸ್ಥಾಪಕ ಎಸ್.ತಿರುಪತಿ, ಸಂಸ್ಥೆಯ ನೌಕರರು, ಸಿಬ್ಬಂದಿ ಹಾಗು ಏಜೆಂಟರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಮಾರ್ಗದರ್ಶಿ ಚಿಟ್ ಫಂಡ್ಸ್ ಕಂಪನಿಯು 1962ರ ಅಕ್ಟೋಬರ್​ನಲ್ಲಿ ಕೇವಲ ಇಬ್ಬರು ಉದ್ಯೋಗಿಗಳೊಂದಿಗೆ ಪ್ರಾರಂಭವಾಗಿತ್ತು. ಇಂದು ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ 5,000ಕ್ಕೇರಿಕೆಯಾಗಿ ಹೆಮ್ಮರವಾಗಿ ಬೆಳೆದಿದೆ. ರಾಮೋಜಿ ಗ್ರೂಪ್‌ ಅಧ್ಯಕ್ಷ ರಾಮೋಜಿ ರಾವ್ ಸ್ಥಾಪಿಸಿದ ಈ ಕಂಪನಿಯು ಗ್ರಾಹಕರೇ ದೇವರು ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ಆರು ದಶಕಗಳಿಂದ ಸುಮಾರು 60 ಲಕ್ಷ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಮಾರ್ಗದರ್ಶಿ 111 ಶಾಖೆಗಳನ್ನು ಹೊಂದಿರುವ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ. ತೆಲಂಗಾಣ, ಆಂಧ್ರ ಪ್ರದೇಶ ಮಾತ್ರವಲ್ಲದೇ ತಮಿಳುನಾಡು, ಕರ್ನಾಟಕದಲ್ಲೂ ಮಾರ್ಗದರ್ಶಿ ಚಿಟ್ ಫಂಡ್ಸ್ ತನ್ನ ಛಾಪು ಮೂಡಿಸಿದೆ.

ಇದನ್ನೂ ಓದಿ: Margadarsi 110th Branch: ಹಾವೇರಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಆರಂಭ

Last Updated : Dec 15, 2023, 9:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.