ETV Bharat / bharat

ಆಟೋ ಮತ್ತು ಬೈಕ್​ಗೆ ಡಿಕ್ಕಿ ಹೊಡೆದ ಕಾರು.. ಸಹೋದರಿಯರ ಜೊತೆ ತಾಯಿ ಸೇರಿ ಆರು ಜನ ಸಾವು - ಒಂದೇ ಕುಟುಂಬದ ಮೂವರು ಮೃತ

ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.

Many killed in road accident in Gujarat  road accident in Gujarat  car rammed into an auto rickshaw at Anand district  relative of Congress MLA Poonambhai Parmar  ಆಟೋ ಮತ್ತು ಬೈಕ್​ಗೆ ಡಿಕ್ಕಿ ಹೊಡೆದ ಕಾರು  ಸಹೋದರಿಯರ ಜೊತೆ ತಾಯಿ ಸೇರಿ ಆರು ಜನ ಸಾವು  ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ  ನಿನ್ನೆ ಸಂಜೆ ಭೀಕರ ರಸ್ತೆ ಅಪಘಾತ  ಒಂದೇ ಕುಟುಂಬದ ಮೂವರು ಮೃತ  ಆಟೋ ರಿಕ್ಷಾ ಚಾಲಕ ಮತ್ತು ಬೈಕ್ ಸವಾರ ಸ್ಥಳದಲ್ಲೇ ಮೃತ
ಆಟೋ ಮತ್ತು ಬೈಕ್​ಗೆ ಡಿಕ್ಕಿ ಹೊಡೆದ ಕಾರು
author img

By

Published : Aug 12, 2022, 7:42 AM IST

ಆನಂದ್(ಗುಜರಾತ್​): ಜಿಲ್ಲೆಯಲ್ಲಿ ನಿನ್ನೆ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರೊಂದು ಆಟೋ ರಿಕ್ಷಾ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಗಾಯಗೊಂಡವರು ಸೋಜಿತ್ರಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಇಬ್ಬರು ಸಹೋದರಿಯರು ಹಾಗೂ ಅವರ ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಸೋಜಿತ್ರಾ ತಾಲೂಕಿನ ದಾಲಿ ಗ್ರಾಮದ ಬಳಿ ಕಾರೊಂದು ಆಟೋ ರಿಕ್ಷಾ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋ ರಿಕ್ಷಾ ಚಾಲಕ ಮತ್ತು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಆಟೋ ರಿಕ್ಷಾದಲ್ಲಿ ಸವಾರಿ ಮಾಡುತ್ತಿದ್ದ ಒಂದೇ ಕುಟುಂಬದ ಮೂವರು ಮತ್ತು ಬೈಕ್‌ನಲ್ಲಿದ್ದ ಮತ್ತೊಬ್ಬ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಶಾಸಕಿ ಪೂನಂಭಾಯಿ ಪರ್ಮಾರ್ ಅವರ ಸಂಬಂಧಿ ಕೇತನ್ ಪಾಧಿಯಾರ್ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: ಬ್ರೇಕ್​ ಫೇಲ್​ ಆಗಿ ವಾಹನಗಳ ಮೇಲೆ ಹರಿದು ತಡೆಗೋಡೆಗೆ ಗುದ್ದಿದ ಬಸ್​: ಭಯಾನಕ ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.