ETV Bharat / bharat

ಎರಡು ಡೋಸ್​ ವ್ಯಾಕ್ಸಿನ್​ ಪಡೆದಿದ್ದ ವೈದ್ಯನೂ ಕೊರೊನಾಗೆ ಬಲಿ.. 80 ಸಿಬ್ಬಂದಿಗೂ ಕೋವಿಡ್​ ದೃಢ! - delhi

ದೆಹಲಿಯ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 80 ಜನ ಸಿಬ್ಬಂದಿಗೆ ಕೊರೊನಾ ತಗುಲಿದೆ. ಓರ್ವ ವೈದ್ಯ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ವೈದ್ಯ ಈಗಾಗಲೇ ಎರಡು ಡೋಸ್​ ವ್ಯಾಕ್ಸಿನ್​ ಸಹ ಪಡೆದಿದ್ದರು ಎಂದು ತಿಳಿದುಬಂದಿದೆ.

delhi
ದೆಹಲಿ ಸರೋಜ್​ ಆಸ್ಪತ್ರೆ
author img

By

Published : May 10, 2021, 11:54 AM IST

ನವದೆಹಲಿ: ಕೊರೊನಾ ಮಹಾಮಾರಿಗೆ ದೇಶದೆಲ್ಲೆಡೆ ಸಾವು-ನೋವು ಸಂಭವಿಸುತ್ತಿದೆ. ದೆಹಲಿಯ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 80 ಸಿಬ್ಬಂದಿ ಮತ್ತು ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಓರ್ವ ವೈದ್ಯ ಎರಡು ಡೋಸ್​ ವ್ಯಾಕ್ಸಿನ್​ ತೆಗೆದುಕೊಂಡ ಬಳಿಕವೂ ಮೃತಪಟ್ಟಿದ್ದಾರೆ.

ದೆಹಲಿಯ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಪಿ.ಕೆ. ಭಾರದ್ವಾಜ್ ಮಾತನಾಡಿ, ಆಸ್ಪತ್ರೆಯ ಹಿರಿಯ ವೈದ್ಯ ಎ.ಕೆ. ರಾವತ್ ಅವರು ಶನಿವಾರ ತಡರಾತ್ರಿ ಕೊರೊನಾದಿಂದ ನಿಧನರಾಗಿದ್ದಾರೆ. ಅವರು ಈ ಹಿಂದೆ ಎರಡು ಕೊರೊನಾ ವ್ಯಾಕ್ಸಿನ್ ಡೋಸ್​ಗಳನ್ನು ಪಡೆದುಕೊಂಡಿದ್ದರು. ಆದರೂ ಅವರು ಸಾವನ್ನಪ್ಪಿದ್ದಾರೆ ಎಂದರು.

ಸಂಸ್ಥೆಯಲ್ಲಿ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಾವತ್ ಅವರ ನಿಧನಕ್ಕೆ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.