ಕಾನ್ಪುರ(ಉತ್ತರ ಪ್ರದೇಶ): ಕೊರೊನಾ ಸೋಂಕು ದೇಶಾದ್ಯಂತ ಕಂಡು ಕೇಳರಿಯದ ಹಾನಿಯನ್ನುಂಟು ಮಾಡುತ್ತಿದೆ. ದಾಖಲೆಯ ಸೋಂಕು ಪ್ರಕರಣಗಳು ಮತ್ತು ಸಾವುಗಳಿಂದ ದೇಶ ನಲುಗಿ ಹೋಗಿದೆ. ಕೋವಿಡ್ ಮಹಾಮಾರಿಯಿಂದ ಉತ್ತರ ಪ್ರದೇಶದ ಸ್ಥಿತಿಯೂ ಭಿನ್ನವಾಗಿಲ್ಲ. ಕಾನ್ಪುರದಲ್ಲಿ ಕೊರೊನಾ ಮರಣ ಮೃದಂಗ ಇನ್ನೂ ನಿಂತಿಲ್ಲ. ಇಲ್ಲಿನ ಸ್ಮಶಾನ ಮತ್ತು ವಿದ್ಯುತ್ ಶವಾಗಾರ ಕೇಂದ್ರದಲ್ಲಿ ಶವ ಸಂಸ್ಕಾರಕ್ಕೆ ಸ್ಥಳ ಸಿಗದ ದುಸ್ಥಿತಿ ಇದೆ.
ಇಲ್ಲಿನ ಶಿವರಾಜ್‌ಪುರ ಖೇರೇಶ್ವರ ಘಾಟ್‌ನಲ್ಲಿ ನೂರಾರು ಮೃತದೇಹಗಳನ್ನು ಸಮಾಧಿ ಮಾಡಲಾಗಿದೆ. ಮರದ ಕೊರತೆ ಮತ್ತು ಕಟ್ಟಿಗೆ ದುಬಾರಿಯಾದ ಕಾರಣ ಗ್ರಾಮಸ್ಥರು ಮೃತದೇಹಗಳನ್ನು ಇಲ್ಲಿ ಸಮಾಧಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವರಾಜ್‌ಪುರದ ಖೇರೇಶ್ವರ ಘಾಟ್‌ನಲ್ಲಿ ಕೆಲವು ಶವಗಳನ್ನು ಹೂಳಲಾಗಿದ್ದು, ಮಳೆಯಿಂದಾಗಿ ಮೃತದೇಹಗಳ ಮೇಲಿನ ಮರಳು ಕೊಚ್ಚಿಕೊಂಡು ಹೋಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಪಡೆದ ನಂತರ, ಮೃತದೇಹಗಳನ್ನು ಮತ್ತೆ ಸರಿಯಾಗಿ ಮುಚ್ಚಲಾಗಿದೆ.
ಇದನ್ನೂ ಓದಿ: ಬಿಹಾರದ ಬಳಿಕ ಉತ್ತರ ಪ್ರದೇಶದಲ್ಲೂ ನದಿಯಲ್ಲಿ ತೇಲಿ ಬರುತ್ತಿವೆ ಮೃತದೇಹಗಳು!