ETV Bharat / bharat

ಮನ್ಸುಖ್​ ಹಿರೇನ್ ಡೆತ್​ ಕೇಸ್​: ತನಿಖೆ ಹೊಣೆ ರಾಷ್ಟ್ರೀಯ ತನಿಖಾ ದಳದ ಹೆಗಲಿಗೆ - ಮುಖೇಶ್​​ ಅಂಬಾನಿ

ಮನ್ಸುಖ್​ ಹಿರೇನ್ ಸಾವಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ ಹೆಗಲಿಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

Mansukh Hiren death case handed over to NIA
ಮನ್ಸುಖ್​ ಹಿರೇನ್ ಡೆತ್​ ಕೇಸ್​ ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ
author img

By

Published : Mar 20, 2021, 2:42 PM IST

ಮುಂಬೈ (ಮಹಾರಾಷ್ಟ್ರ): ಉದ್ಯಮಿ ಮನ್ಸುಖ್​ ಹಿರೇನ್ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಕ್ಕೆ ಹಸ್ತಾಂತರ ಮಾಡಲಾಗಿದೆ.

ಈವರೆಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಈ ಪ್ರಕರಣದ ತನಿಖೆ ನಡೆಸುತ್ತಿತ್ತು. ಇದೀಗ ಈ ಜವಾಬ್ದಾರಿಯನ್ನು ಎನ್​ಐಎ ಹೆಗಲಿಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಪ್ರಕರಣ ಹಿನ್ನೆಲೆ

ಫೆ. 18ರಂದು ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್​ ಇರಿಸಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಮುಂಬೈ ಮೂಲದ ಮನ್ಸುಖ್​ ಹಿರೇನ್ ಸ್ಕಾರ್ಪಿಯೋ ಕಾರು ಮಾಲೀಕ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಮನ್ಸುಖ್​ ಹಿರೇನ್ ಮೃತಪಟ್ಟಿದ್ದ ಸ್ಥಳದಲ್ಲೇ ಮತ್ತೊಂದು ಮೃತದೇಹ ಪತ್ತೆ..!

ಆದರೆ, ಮಾರ್ಚ್ 5ರಂದು ಥಾಣೆ ಜಿಲ್ಲೆಯ ಮುಂಬ್ರಾದ ರೇತಿ ಬಂದರ್ ಪ್ರದೇಶದಲ್ಲಿರುವ ನದಿಯೊಂದರಲ್ಲಿ ಮನ್ಸುಖ್​ ಹಿರೇನ್ ಮೃತದೇಹ ಪತ್ತೆಯಾಗಿತ್ತು. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ. ಆದರೆ ಆ ಸ್ಕಾರ್ಪಿಯೋ ಕಾರು ಮಾಲೀಕ ಮನ್ಸುಖ್​ ಹಿರೇನ್ ಅಲ್ಲ, ಥಾಣೆ ಮೂಲದ ಸ್ಯಾಮ್ ನ್ಯೂಟನ್​​ ಎಂಬ ವಿಚಾರ ಕೂಡ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಹಿರೇನ್ ಸಾವಿನ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿ ಸಚಿನ್​ ವಾಝೆ ಅವರನ್ನು ಕೂಡ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇಂದು ಹಿರೇನ್ ಸಾವನ್ನಪ್ಪಿದ್ದ ಸ್ಥಳದಲ್ಲೇ ರೇತಿ ಬಂದರ್​​ನ ನಿವಾಸಿ ಶೇಖ್ ಸಲೀಮ್ ಅಬ್ದುಲ್ (48) ಎಂಬ ವ್ಯಕ್ತಿಯ ಶವ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.