ಇಂಫಾಲ (ಮಣಿಪುರ): ಅಬ್ಬಬ್ಬಾ ಅಂದ್ರೆ ಒಂದು ನಿಮಿಷದಲ್ಲಿ ಒಬ್ಬ ವ್ಯಕ್ತಿ 50 ರಿಂದ 60 ಪುಶ್-ಅಪ್ ಮಾಡಬಹುದು. ಆದ್ರೆ ಇಲ್ಲೋರ್ವ ಯುವಕ ಕೇವಲ ಒಂದೇ ಒಂದು ನಿಮಿಷದ ಅವಧಿಯಲ್ಲಿ ಬರೋಬ್ಬರಿ 109 ಪುಶ್-ಅಪ್ ಹೊಡೆದು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾನೆ.
ಹೌದು, 24 ವರ್ಷದ ಮಣಿಪುರದ ತೌನೋಜಮ್ ನಿರಂಜೋಯ್ ಸಿಂಗ್ ಎಂಬ ಯುವಕ ಹೊಸ ದಾಖಲೆ ನಿರ್ಮಿಸಿದ್ದಾನೆ. ಈ ಹಿಂದೆ ಎರಡು ಬಾರಿ ಗಿನ್ನೆಸ್ ದಾಖಲೆ ಬರೆದಿದ್ದ ನಿರಂಜೋಯ್ ಸಿಂಗ್, ಒಂದು ನಿಮಿಷದಲ್ಲಿ 109 ಪುಶ್-ಅಪ್‌ಗಳನ್ನು ಮಾಡುವ ಮೂಲಕ ಒಂದೇ ನಿಮಿಷದಲ್ಲಿ 105 ಪುಶ್-ಅಪ್ ಮಾಡಿದ್ದ ದಾಖಲೆಯನ್ನು ಮುರಿದಿದ್ದಾನೆ. ಮಣಿಪುರ ಅಜ್ಟೆಕ್ಸ್ ಸ್ಪೋರ್ಟ್ಸ್ ಸಂಸ್ಥೆ, ಇಂಫಾಲ್‌ನ ಅಜ್ಟೆಕ್ಸ್ ಫೈಟ್ ಸ್ಟುಡಿಯೋದಲ್ಲಿ ಆಯೋಜಿಸಿದ್ದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಪರ್ಧೆಯಲ್ಲಿ ಯುವಕ ಈ ಸಾಧನೆ ಮಾಡಿದ್ದಾನೆ.
-
Amazing to see unbelievable power of Manipuri youth T. Niranjoy Singh who broke the Guinness Book of World Records for most push-ups (finger tips) in one minute 💪
— Kiren Rijiju (@KirenRijiju) January 22, 2022 " class="align-text-top noRightClick twitterSection" data="
I'm so proud of his achievement !! pic.twitter.com/r1yT0ePn3f
">Amazing to see unbelievable power of Manipuri youth T. Niranjoy Singh who broke the Guinness Book of World Records for most push-ups (finger tips) in one minute 💪
— Kiren Rijiju (@KirenRijiju) January 22, 2022
I'm so proud of his achievement !! pic.twitter.com/r1yT0ePn3fAmazing to see unbelievable power of Manipuri youth T. Niranjoy Singh who broke the Guinness Book of World Records for most push-ups (finger tips) in one minute 💪
— Kiren Rijiju (@KirenRijiju) January 22, 2022
I'm so proud of his achievement !! pic.twitter.com/r1yT0ePn3f
ಒಂದೇ ನಿಮಿಷದಲ್ಲಿ ಅತೀ ಹೆಚ್ಚು ಪುಶ್-ಅಪ್‌ಗಳನ್ನು ಹೊಡೆದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗಳನ್ನು ಮುರಿದ ಮಣಿಪುರದ ನಿರಂಜೋಯ್ ಸಿಂಗ್ ನಂಬಲಾಗದ ಶಕ್ತಿಯನ್ನು ನೋಡಲು ಅದ್ಭುತವಾಗಿದೆ. ಈತನ ಸಾಧನೆ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ