ETV Bharat / bharat

Manipur conflict: 'ಪೂರ್ವಯೋಜಿತ ಕೃತ್ಯದಂತೆ ಕಾಣುತ್ತಿದೆ..': ಮಣಿಪುರ ಹಿಂಸಾಚಾರಕ್ಕೆ ವಿದೇಶಿ ಕೈವಾಡದ ಸುಳಿವು ನೀಡಿದ ಸಿಎಂ ಬಿರೇನ್ ಸಿಂಗ್

ಮಣಿಪುರದಲ್ಲಿ ಕಳೆದೆರಡು ತಿಂಗಳಿನಿಂದ ಕುಕಿ ಮತ್ತು ಮೈಥೇಯಿ ಬುಡಕಟ್ಟು ಸಮುದಾಯಗಳ ಮಧ್ಯೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಇದೆ.

ಸಿಎಂ ಬಿರೇನ್​ ಸಿಂಗ್​
ಸಿಎಂ ಬಿರೇನ್​ ಸಿಂಗ್​
author img

By

Published : Jul 2, 2023, 9:43 AM IST

ಇಂಫಾಲ (ಮಣಿಪುರ): ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಹಿಂದೆ ಬಾಹ್ಯ ಶಕ್ತಿಗಳು ಅಥವಾ ವಿದೇಶಿ ಕೈವಾಡವಿರುವ ಸುಳಿವನ್ನು ಸಿಎಂ ಬಿರೇನ್‌ ಸಿಂಗ್ ವ್ಯಕ್ತಪಡಿಸಿದ್ದಾರೆ. ಶನಿವಾರ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, "ಮಣಿಪುರ ರಾಜ್ಯ ಮ್ಯಾನ್ಮಾರ್‌ ಜೊತೆ ಗಡಿ ಹಂಚಿಕೊಳ್ಳುತ್ತದೆ. ಚೀನಾ ಕೂಡಾ ಸಮೀಪದಲ್ಲೇ ಇದೆ. ಅಂದಾಜು ನಮ್ಮ 398 ಕಿ.ಮೀ ಗಡಿಭಾಗದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲ. ನಮ್ಮ ಭದ್ರತಾ ಸಿಬ್ಬಂದಿ ನಮ್ಮ ಗಡಿಭಾಗದಲ್ಲಿ ಇದ್ದರೂ ಅಷ್ಟು ದೊಡ್ಡ ಪ್ರದೇಶದಲ್ಲಿ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಹಾಗಾಗಿ, ಇಂಥ ಘಟನಾವಳಿಗಳಲ್ಲಿ ವಿದೇಶಿ ಶಕ್ತಿಗಳ ಕೈವಾಡವನ್ನು ಅಲ್ಲಗಳೆಯುವಂತಿಲ್ಲ. ಇದೊಂದು ರೀತಿಯಲ್ಲಿ ಪೂರ್ವಯೋಜಿತ ಕೃತ್ಯವಾಗಿರುವ ಸಾಧ್ಯತೆ ಇದೆ" ಎಂದು ಹೇಳಿದರು.

ಇದೇ ವೇಳೆ, "ಜನಾಂಗೀಯ ಸಂಘರ್ಷಕ್ಕೀಡಾಗಿರುವ ಮಣಿಪುರದಲ್ಲಿ ಮೈಥೇಯಿ, ಕುಕಿ, ನಾಗಾಗಳು ಸೇರಿದಂತೆ 34 ಬುಡಕಟ್ಟು ಜನಾಂಗಗಳಿವೆ. ಎಲ್ಲರೂ ಒಟ್ಟಾಗಿ ಸಹಬಾಳ್ವೆಯಿಂದ ಜೀವಿಸಬೇಕಾಗಿದೆ. ಯಾರನ್ನೂ ಕಡೆಗಣಿಸುವ ಉದ್ದೇಶವಿಲ್ಲ" ಎಂದು ಬಿರೇನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

"ಮಣಿಪುರ ಚಿಕ್ಕ ರಾಜ್ಯ. ಇಲ್ಲಿ ಎಲ್ಲ ಬುಡಕಟ್ಟು ಜನಾಂಗದವರು ಒಟ್ಟಿಗೆ ವಾಸಿಸಬೇಕು. ಹೊರಗಿನವರು ಇಲ್ಲಿಗೆ ವಲಸೆ ಬಂದು ಶಾಂತಿ ಮತ್ತು ಜನಸಂಖ್ಯೆಗೆ ಸಮಸ್ಯೆ ಉಂಟು ಮಾಡಬಾರದು. ಹೊರಗಿನವರ ಬಗ್ಗೆ ಎಚ್ಚರಿಕೆ ವಹಿಸಬೇಕು" ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

"ಕಳೆದೆರಡು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ರಕ್ತಸಿಕ್ತ ಹಿಂಸಾಚಾರದಿಂದ ಜನರು ದೂರ ಇರಬೇಕು ಎಂದು ಮನವಿ ಮಾಡಲು ಸಮುದಾಯಗಳ ಅವರು ಜನರನ್ನು ಭೇಟಿ ಮಾಡಿದರು. ಇದೇ ವೇಳೆ ಶಾಂತಿ, ಸಹಬಾಳ್ವೆ ಬಗ್ಗೆ ಮಾತನಾಡಿ, ಕೆಲ ಸಮುದಾಯಗಳು ಬಹಳ ಹಿಂದೆಯೇ ಇಲ್ಲಿ ಬಂದು ನೆಲೆಸಿದ್ದಾರೆ. ಕೆಲವರು ನಂತರದಲ್ಲಿ ಬಂದಿದ್ದಾರೆ. ಜನಸಂಖ್ಯಾ ಅಸಮತೋಲನತೆ ಉಂಟಾಗದಿರಲು ಹೊರಗಿನ ಜನರ ಬಗ್ಗೆ ನಾವು ಜಾಗರೂಕರಾಗಿರಬೇಕು" ಎಂದು ಮನವಿ ಮಾಡಿದರು.

ರಾಜ್ಯ ವಿಭಜನೆ ಆಗಲು ಬಿಡಲ್ಲ: "ನಾನು ಮುಖ್ಯಮಂತ್ರಿಯಾಗಿ ಇರುವವರೆಗೂ ಮಣಿಪುರವನ್ನು ವಿಭಜನೆ ಅಥವಾ ಪ್ರತ್ಯೇಕ ಆಡಳಿತಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ಸಮಗ್ರತೆಯನ್ನು ಕಾಪಾಡಲು ಯಾವ ತ್ಯಾಗಕ್ಕೂ ಸಿದ್ಧ" ಎಂದು ಹೇಳಿದರು. "ಹಿಂಸಾಚಾರದ ಹೆಸರಿನಲ್ಲಿ ಬಿಜೆಪಿ ಕಚೇರಿಯ ಮೇಲೆ ದಾಳಿ ನಡೆಸಿರುವುದು ರಾಜಕೀಯ ಕೈವಾಡ ಎಂಬುದು ಸ್ಪಷ್ಟ. ಈ ದಾಳಿಗಳನ್ನು ಸಾರ್ವಜನಿಕರು ಮಾಡಿಲ್ಲ. ರಾಜಕೀಯ ಉದ್ದೇಶದಿಂದ ಬೇರೆಯವರು ಮಾಡಿದ್ದಾರೆ. ಬಿಕ್ಕಟ್ಟಿನ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವವರನ್ನು ದೇವರು ಎಂದಿಗೂ ಕ್ಷಮಿಸುವುದಿಲ್ಲ. ಮನುಷ್ಯರ ಪ್ರಾಣದ ಮೇಲೆ ಯಾರೂ ರಾಜಕೀಯ ಮಾಡಬಾರದು" ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್​ ವಿರುದ್ಧ ಟೀಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಎರಡು ದಿನಗಳ ರಾಜ್ಯ ಭೇಟಿಯನ್ನು ಟೀಕಿಸಿದ ಮುಖ್ಯಮಂತ್ರಿ, "ಕಾಂಗ್ರೆಸ್​ ನಾಯಕರು ರಾಜಕೀಯ ಮಾಡುವ ಬದಲು ರಾಜ್ಯದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಪ್ರಯತ್ನಿಸಬೇಕು. ಅವರು ಇಲ್ಲಿಗೆ ಭೇಟಿ ನೀಡುತ್ತಿರುವ ಸಮಯ ಸರಿಯಾಗಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮುದಾಯಗಳ ಮಧ್ಯೆ ನಡೆಯುತ್ತಿರುವ ಕದನವನ್ನು ನಿಲ್ಲಿಸಲು ಶತಪ್ರಯತ್ನ ಮಾಡುತ್ತಿವೆ. ಇದನ್ನೇ ಕಾಂಗ್ರೆಸ್​ ರಾಜಕೀಯಕರಣಗೊಳಿಸಬಾರದು" ಎಂದು ಟೀಕಿಸಿದರು.

"ಕುಕಿ ಸಮುದಾಯದೊಂದಿಗೆ ಮಾತುಕತೆ ನಡೆಸಿದ್ದೇನೆ. ನಾವು ಈ ಹಿಂದಿನಂತೆಯೇ ಇರೋಣ. ಎಲ್ಲವನ್ನೂ ಕ್ಷಮಿಸೋಣ, ಮರೆತುಬಿಡೋಣ. ಒಟ್ಟಿಗೆ ಬದುಕುವ ಕಡೆಗೆ ಗಮನ ಕೊಡೋಣ. ಮ್ಯಾನ್ಮಾರ್‌ನಲ್ಲಿನ ಬಿಕ್ಕಟ್ಟಿನಿಂದಾಗಿ ಜನರು ಇಲ್ಲಿಗೆ ಬರುತ್ತಿದ್ದು, ಅಂಥವರನ್ನು ಗುರುತಿಸಲು ಸರ್ಕಾರ ಪ್ರಯತ್ನಿಸುತ್ತದೆ. ಪರಿಸ್ಥಿತಿ ಸುಧಾರಿಸಿದ ನಂತರ ವಾಪಸ್​ ಅವರನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ" ಎಂದು ಮುಖ್ಯಮಂತ್ರಿ ಸಿಂಗ್​ ಹೇಳಿದರು.

ಜನರ ಒತ್ತಾಯದಿಂದ ರಾಜೀನಾಮೆ ಹಿಂತೆಗೆತ: ಸಿಎಂ ಬಿರೇನ್ ಸಿಂಗ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳಿಂದ ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ತಿಳಿದು ಬಂದಿತ್ತುಯ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿಂಗ್ ಪ್ರಯತ್ನಿಸಿದ್ದರು. ಬಳಿಕ ಅವರು ನಿರ್ಧಾರವನ್ನು ಹಿಂಪಡೆದಿದ್ದರು.

"ರಾಜ್ಯದಲ್ಲಿನ ಹಿಂಸಾಚಾರದ ಹಿನ್ನೆಲೆಯಲ್ಲಿ ಕೆಲವರ ಹೇಳಿಕೆಗಳು ತನಗೆ ನೋವುಂಟು ಮಾಡಿವೆ. ರಾಜೀನಾಮೆ ನೀಡಲು ಇದು ಪ್ರೇರೇಪಿಸಿತ್ತು. ಆದರೆ ಜನರು ರಾಜೀನಾಮೆ ನೀಡಬಾರದು ಎಂದು ಮನವಿ ಮಾಡಿದ ಬಳಿಕ ನನ್ನ ನಿರ್ಧಾರ ಬದಲಿಸಿದೆ. ಜನರ ವಿಶ್ವಾಸವಿಲ್ಲದೆ ಒಬ್ಬ ವ್ಯಕ್ತಿ ನಾಯಕನಾಗಲು ಸಾಧ್ಯವಿಲ್ಲ. ಸಾವಿರಾರು ಜನರು ಕಣ್ಣೀರಿಡುತ್ತಾ ರಾಜೀನಾಮೆ ನೀಡಬೇಡಿ" ಎಂದು ಮನವಿ ಮಾಡಿದರು. "ಈಗಲೂ ರಾಜೀನಾಮೆ ಕೊಡಿ ಎಂದು ಹೇಳಿದರೆ ನಾನೇ ರಾಜೀನಾಮೆ ಕೊಡುತ್ತೇನೆ. ಅವರು ಬೇಡವೆಂದ ಮಾಡುವುದಿಲ್ಲ" ಎಂದು ಸಿಎಂ ಸಿಂಗ್​ ಹೇಳಿದರು.

ಇದನ್ನೂ ಓದಿ: ಮಣಿಪುರ ಸಂಘರ್ಷಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.