ETV Bharat / bharat

Manipur Violence: ಮಣಿಪುರದಲ್ಲಿ 12 ಮಂದಿ ಬಂಧಿತ ಉಗ್ರರನ್ನು ಸೇನೆಯಿಂದ ಬಿಡಿಸಿಕೊಂಡ 1,500 ಮಹಿಳೆಯರಿದ್ದ ಬೃಹತ್‌ ಬಂಡುಕೋರರ ಗುಂಪು!

ಮಹಿಳೆಯರ ನೇತೃತ್ವದ ದೊಡ್ಡ ಗುಂಪೊಂದು ಮಣಿಪುರ ನಿಷೇಧಿತ ಉಗ್ರಗಾಮಿ ಗುಂಪು KYKLಗೆ ಸೇರಿದ 12 ಮಂದಿ ಬಂಧಿತ ಉಗ್ರರನ್ನು ಭದ್ರತಾ ಪಡೆಯಿಂದ ಬಿಡಿಸಿಕೊಂಡಿದೆ.

author img

By

Published : Jun 25, 2023, 10:43 AM IST

Manipur Violence
ಮಣಿಪುರ

ಇಂಫಾಲ್ (ಮಣಿಪುರ) : ಇಲ್ಲಿನ ಫಾಲದ ಪೂರ್ವ ಜಿಲ್ಲೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿ 12 ಕಂಗ್ಲೇಯಿ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಉಗ್ರರನ್ನು ಬಂಧಿಸಿದ್ದವು. ಆದರೆ, 1,500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳಾ ಬಂಡುಕೋರರ ಗುಂಪು ಸೇನೆ ಟಾರ್ಗೆಟ್ ಮಾಡಿದ​ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ಮುಂದುವರಿಸದಂತೆ ತಡೆದಿದ್ದಾರೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ 12 ಮಂದಿ ಬಂಧಿತ ಉಗ್ರರನ್ನು ಬಿಡುಗಡೆ ಮಾಡಲಾಯಿತು ಎಂದು ಸೇನೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 24ರಂದು (ನಿನ್ನೆ) ಬೆಳಗ್ಗೆ ಇಂಫಾಲದ ಪೂರ್ವ ಜಿಲ್ಲೆಯ ಇಥಮ್ (ಪೂರ್ವ ಆಂಡ್ರೋದಿಂದ 6 ಕಿ.ಮೀ ದೂರದಲ್ಲಿ) ಗ್ರಾಮದಲ್ಲಿ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. ಈ ವೇಳೆ ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದವು.

ಇದನ್ನೂ ಓದಿ : ಮಣಿಪುರದಲ್ಲಿ 30 ಭಯೋತ್ಪಾದಕರ ಹತ್ಯೆ : ಸಿಎಂ ಎನ್.ಬಿರೇನ್ ಸಿಂಗ್ ಮಾಹಿತಿ

"ಸ್ಥಳೀಯರಿಗೆ ಯಾವುದೇ ಅನಾಹುತ ಆಗಬಾರದೆಂಬ ಕಾರಣಕ್ಕೆ ಕಾರ್ಯಾಚರಣೆ ಪ್ರಾರಂಭಿಸುವ ಮೊದಲು ಈ ಸೂಕ್ಷ್ಮ ಪ್ರದೇಶವನ್ನು ಸುತ್ತುವರಿಯಲಾಯಿತು. ಕಾರ್ಯಾಚರಣೆಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಸೇರಿದಂತೆ 12 ಮಂದಿ KYKL ಉಗ್ರರನ್ನು ಸೆರೆಹಿಡಿಯಲಾಯಿತು. ಆದರೆ, ಮಹಿಳೆಯರು ಮತ್ತು ಸ್ಥಳೀಯ ನಾಯಕರ ನೇತೃತ್ವದಲ್ಲಿ ಸುಮಾರು 1200- 1500ಕ್ಕೂ ಹೆಚ್ಚು ಜನರ ಗುಂಪು ತಕ್ಷಣವೇ ಸೂಕ್ಷ್ಮ ಪ್ರದೇಶವನ್ನು ಸುತ್ತುವರೆದರು. ಕಾನೂನಿನ ಪ್ರಕಾರ, ಆಕ್ರಮಣಕಾರಿ ಜನಸಮೂಹಕ್ಕೆ ಪದೇ ಪದೇ ಮನವಿ ಮಾಡಿದರೂ ಕಾರ್ಯಾಚರಣೆಯನ್ನು ಮುಂದುವರಿಸದಂತೆ ಭದ್ರತಾ ಪಡೆಗಳಿಗೆ ಅಡ್ಡಿಪಡಿಸಿದರು. ಆ ಬಳಿಕ ವಶಕ್ಕೆ ಪಡೆದ ಎಲ್ಲ 12 ಉಗ್ರರನ್ನು ಸ್ಥಳೀಯ ನಾಯಕನಿಗೆ ಹಸ್ತಾಂತರಿಸಲಾಯಿತು" ಎಂದು ಸೇನೆ ತಿಳಿಸಿದೆ.

ಇದನ್ನೂ ಓದಿ : ಸೇನೆ - ಪೊಲೀಸರ ಭರ್ಜರಿ ಕಾರ್ಯಾಚರಣೆ.. ಶಸ್ತ್ರಾಸ್ತ್ರ ಸಹಿತ ZUF ಸಂಘಟನೆಯ ನಾಲ್ವರ ಬಂಧನ

  • 𝗝𝗼𝗶𝗻𝘁 𝗖𝗼𝗺𝗯𝗶𝗻𝗴 𝗢𝗽𝗲𝗿𝗮𝘁𝗶𝗼𝗻𝘀 𝗗𝗮𝘆 𝟰 #Manipur
    Operations, in presence of magistrates where applicable, continue across the state with due diligence to avoid unnecessary hardships to locals. 22 weapons, mostly automatics, recovered in past 24 hours.@adgpi pic.twitter.com/Z901ByPJsi

    — SpearCorps.IndianArmy (@Spearcorps) June 10, 2023 " class="align-text-top noRightClick twitterSection" data=" ">

ಶಾಂತಿ, ಸ್ಥಿರತೆ ಹಾಗು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಭದ್ರತಾ ಪಡೆಗಳಿಗೆ ಸಹಾಯ ಮಾಡುವಂತೆ ಭಾರತೀಯ ಸೇನೆಯು ಮಣಿಪುರದ ಜನರಿಗೆ ಮನವಿ ಮಾಡಿದೆ.

ಇದನ್ನೂ ಓದಿ : Manipur violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಎರಡು ಮನೆಗಳಿಗೆ ಬೆಂಕಿ ಹಚ್ಚಿದ ಉದ್ರಿಕ್ತರ ಗುಂಪು

ಕಳೆದ ಶುಕ್ರವಾರ (ಜೂನ್​ 23) ರಾತ್ರಿ ಇಂಫಾಲ ಪೂರ್ವ ಜಿಲ್ಲೆಯ ಚಿಂಗಾರೆಲ್‌ನಲ್ಲಿ ಸಚಿವ ಎಲ್. ಸುಸಿಂದ್ರೋ ಮೈತೆಯ್ ಅವರ ಖಾಸಗಿ ಗೋಡೌನ್​ಗೆ ಜನಸಮೂಹ ಬೆಂಕಿ ಹಚ್ಚಿತ್ತು. ಪರಿಣಾಮ ಸುಮಾರು 120 ಕೋಟಿ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ಪೈಪ್‌ಗಳು ಸುಟ್ಟು ಹೋಗಿದ್ದವು. ಇದಾದ ನಂತರ ಅದೇ ಗುಂಪು ಇಂಫಾಲ ಪೂರ್ವ ಜಿಲ್ಲೆಯ ಖುರೈನಲ್ಲಿರುವ ಸಚಿವರ ನಿವಾಸದ ಮೇಲೂ ದಾಳಿ ಮಾಡಲು ಪ್ರಯತ್ನಿಸಿದ್ದು, ಭದ್ರತಾ ಪಡೆಗಳ ಸಮಯೋಚಿತ ಮಧ್ಯಪ್ರವೇಶದಿಂದಾಗಿ ದಾಳಿಯನ್ನು ತಡೆಯಲಾಗಿತ್ತು.

ಇದನ್ನೂ ಓದಿ : Mann ki Baat : ಮಣಿಪುರ ಹಿಂಸಾಚಾರ ಬಗ್ಗೆ ಪ್ರಧಾನಿ ಮೌನ ಪ್ರಶ್ನಿಸಿದ ಪ್ರತಿಪಕ್ಷಗಳು.. ರೇಡಿಯೋ ಒಡೆದು ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.