ETV Bharat / bharat

ಪ್ರಾಣವಾಯುಗಾಗಿ ಕಾಯುತ್ತಾ ಪ್ರಾಣಬಿಟ್ಟ ಗಾಯಕ

author img

By

Published : May 11, 2021, 10:35 AM IST

Updated : May 11, 2021, 12:15 PM IST

ಸುಮಾರು ಒಂದೂವರೆ ಗಂಟೆ ಕಾಲ ಆಕ್ಸಿಜನ್​ ಬೆಡ್​ಗಾಗಿ ಕಾದು ಕೊನೆಗೆ ಚಿಕಿತ್ಸೆ ವೇಳೆಯಲ್ಲಿ ರಾಜಸ್ಥಾನದ ಮಂಗನಿಯಾರ್ ಗಾಯಕ ತಾಲಿಬ್ ಖಾನ್ ಮೃತಪಟ್ಟಿದ್ದಾರೆ.

Manganiyar singer Talib khan died while treatment after waiting for oxygen on wheelchair in Jaisalmer
ಆಕ್ಸಿಜನ್​​ಗಾಗಿ ಕಾಯುತ್ತಾ ವ್ಹೀಲ್​ಚೇರ್​ನಲ್ಲೇ ಕುಳಿತು ಪ್ರಾಣಬಿಟ್ಟ ಮಂಗನಿಯಾರ್ ಗಾಯಕ

ಜೈಸಲ್ಮೇರ್‌ (ರಾಜಸ್ಥಾನ): ಸುಮಾರು ಎರಡು ತಾಸು ಸರ್ಕಾರಿ ಆಸ್ಪತ್ರೆಯ ಹೊರಗೆ ಗಾಲಿಕುರ್ಚಿಯಲ್ಲಿ ಕುಳಿತು ಆಮ್ಲಜನಕದ ಹಾಸಿಗೆಗಾಗಿ ಕಾಯುತ್ತಲೇ ಇದ್ದ 'ಮಂಗನಿಯಾರ್' ಗಾಯಕ ತಾಲಿಬ್ ಖಾನ್ ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ.

ರಾಜಸ್ಥಾನದ ಜೈಸಲ್ಮೇರ್​​ನ ಪೂನಂ ನಗರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ವಿಕಲ ಚೇತನರೂ ಆಗಿರುವ ತಾಲಿಬ್ ಖಾನ್ ಅವರು ಆಕ್ಸಿಜನ್​​ಗಾಗಿ ಕಾಯುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ವಿಚಾರ ಬೆಳಕಿಗೆ ಬಂದಿದೆ.

Manganiyar singer Talib khan died while treatment after waiting for oxygen on wheelchair in Jaisalmer
ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆದ ಫೋಟೋ

ಇದನ್ನೂ ಓದಿ: ತಿರುಪತಿಯಲ್ಲಿ ಆಕ್ಸಿಜನ್​ ಕೊರತೆ: 11 ಕೋವಿಡ್ ಸೋಂಕಿತರು ಸಾವು!

ಉಸಿರಾಟದ ಸಮಸ್ಯೆ ಎದುರಾದ ಕಾರಣ ಮೂರು ದಿನಗಳ ಹಿಂದೆ ತಾಲಿಬ್ ಖಾನ್​ರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಆಕ್ಸಿಜನ್​ ಬೆಡ್​ ಕೊರತೆಯಿದ್ದ ಕಾರಣ ಕೆಲ ಸಮಯ ಅವರು ಆಸ್ಪತ್ರೆಯ ಹೊರಗೇ ಕಾಯಬೇಕಾಯಿತು ಎಂದು ಹೇಳಲಾಗಿದೆ. ಇನ್ನು ಇವರು ಕೋವಿಡ್​ ಸೋಂಕಿಗೆ ಒಳಗಾಗಿದ್ದರೇ? ಎಂಬ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.

ಮಂಗನಿಯಾರ್, ಇದು ರಾಜಸ್ಥಾನದ ಜೈಸಲ್ಮೇರ್‌ ಹಾಗೂ ಬಾರ್ಮರ್​ ಜಿಲ್ಲೆಯಲ್ಲಿ ವಾಸಿಸುವ ಒಂದು ಜನಾಂಗವಾಗಿದೆ.

Last Updated : May 11, 2021, 12:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.