ನವದೆಹಲಿ/ಗಾಜಿಯಾಬಾದ್: ಗಾಜಿಯಾಬಾದ್ನಲ್ಲಿ ಯುವಕನೊಬ್ಬ ತನ್ನ ಮನೆ ಮುಂದೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಮತ್ತೊಬ್ಬ ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಯುವಕನೊಬ್ಬ ಬೈಕ್ ನಲ್ಲಿ ಎಲ್ಲಿಗೋ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಆತನ ಮೊಬೈಲ್ಗೆ ಕರೆ ಬಂದಿತ್ತು. ಯುವಕ ಬೈಕ್ ಅನ್ನು ರಸ್ತೆ ಬದಿ ಇಟ್ಟು ಮಾತನಾಡತೊಡಗಿದ. ಈ ವಿಚಾರವಾಗಿ ಯುವಕ ಬೈಕ್ ನಿಲ್ಲಿಸಿದ ಎದುರುಗಡೆ ಇದ್ದ ಮನೆ ಮಾಲೀಕ ಖ್ಯಾತೆ ತೆಗೆದಿದ್ದಾನೆ.
ಇಲ್ಲಿ ನಿಂತುಕೊಂಡು ಮಾತನಾಡದಂತೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ವಾರ್ನಿಂಗ್ ಮಾಡಿದ್ದಾನೆ. ಆದರೆ ಯುವಕ ಮಾತು ಮುಂದುವರೆಸಿದ್ದಾನೆ. ಇದರಿಂದ ಕೋಪಗೊಂಡ ಮನೆ ಮಾಲೀಕ ಯುವಕನ ಮೇಲೆ ಗುಂಡು ಹಾರಿಸಿದ್ದಾನೆ.
ಗಾಜಿಯಾಬಾದ್ನ ಸಿಹಾನಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾಟಿಯಾ ಮೋರ್ ಪ್ರದೇಶದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಮನೆ ಮಾಲೀಕನಿಂದ ಗುಂಡೇಟು ತಿಂದ ಯುವಕನನ್ನು ನಿರ್ದೇಶನ ಶರ್ಮಾ ಎಂದು ಗುರುತಿಸಲಾಗಿದೆ. ಇನ್ನು ಗುಂಡು ಹಾರಿಸಿದಾತನನ್ನು ಅಮಿತ್ ಎಂದು ಗುರುತಿಸಲಾಗಿದೆ. ಗುಂಡು ನಿರ್ದೇಶನ ಭುಜಕ್ಕೆ ತಗುಲಿ ರಕ್ತಸ್ರಾವವಾಗಿ ಅಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ.
ಈ ಸಂಬಂಧ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಆರಂಭಿಸಿದ್ದಾರೆ. ಇನ್ನು ಆರೋಪಿ ತಲೆ ಮರೆಸಿಕೊಂಡಿದ್ದು, ಶೋಧ ನಡೆಸುತ್ತಿದ್ದಾರೆ. ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಎಸ್‌ಪಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ನವಜಾತ ಶಿಶು ಆಸ್ಪತ್ರೆಯಿಂದ ಕದ್ದೊಯ್ದ ಯುವಕ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ