ETV Bharat / bharat

ತೆಲಂಗಾಣದಲ್ಲಿ ಜೇನಿನ ದಾಳಿಗೆ ವ್ಯಕ್ತಿ ಬಲಿ: 10 ಮಂದಿಗೆ ಗಾಯ

ಜೇನುನೊಣ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಜಗ್ತಿಯಾಲದಲ್ಲಿ ನಡೆದಿದೆ.

Man Was Killed in a bee attack in Telangana  bee attack in Jagtial district  Telangana bee attack news  ತೆಲಂಗಾಣದಲ್ಲಿ ಜೇನಿನ ದಾಳಿಗೆ ವ್ಯಕ್ತಿ ಬಲಿ  ಜಗ್ತಿಯಾಲ್​ ಜಿಲ್ಲೆಯಲ್ಲಿ ಜೇನಿನ ದಾಳಿ  ತೆಲಂಗಾಣ ಜೇನು ದಾಳಿ ಸುದ್ದಿ
ತೆಲಂಗಾಣದಲ್ಲಿ ಜೇನಿನ ದಾಳಿಗೆ ವ್ಯಕ್ತಿ ಬಲಿ
author img

By

Published : Jun 22, 2022, 12:06 PM IST

ಜಗ್ತಿಯಾಲ್ (ತೆಲಂಗಾಣ): ಜೇನುನೊಣಗಳ ಹಿಂಡು ದಾಳಿಯಿಂದ ವೃದ್ಧರೊಬ್ಬರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿರುವ ಘಟನೆ ಸಾರಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೆಚಪಲ್ಲಿ ಗ್ರಾಮದ ಹೊರವಲಯದಲ್ಲಿ ನಡೆದಿದ್ದು, ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಸಾಂಪ್ರದಾಯಿಕ ಹಬ್ಬವನ್ನು ಆಚರಿಸಲು ಜಮಾಯಿಸಿದ್ದ ವೇಳೆ ಜೇನುನೊಣಗಳು ದಾಳಿ ನಡೆಸಿವೆ.

ಓದಿ: ಲೋಹದ ಹಕ್ಕಿಗಳಿಗೆ ಜೇನಿನ ''ಮುತ್ತು'': ಮುಂದೇನಾಯ್ತು..?

ಅವರು ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದಾಗ ಇದ್ದಕ್ಕಿದ್ದಂತೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ. ರೇಚಪಲ್ಲಿಯ ಜಿ ಭೀಮಯ್ಯ (80) ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜೆ ರಾಮಕೃಷ್ಣ ತಿಳಿಸಿದ್ದಾರೆ.

ಜೇನುನೊಣಗಳ ದಾಳಿಯಲ್ಲಿ ಗಾಯಗೊಂಡವರನ್ನು ಜಗ್ತಿಯಾಲ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನಿಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.