ETV Bharat / bharat

ತ್ರಿಪುರಾದ ವ್ಯಕ್ತಿಗೆ ಪಶ್ಚಿಮ ಬಂಗಾಳದಲ್ಲಿ ಯಶಸ್ವಿ ಹೃದಯ ಕಸಿ - ಅಂಗಾಂಗ ದಾನದಿಂದ ಬಂದ ಹೃದಯ ಬಳಕೆ

ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಆತನ ಹೃದಯವನ್ನು ಬೇರೊಬ್ಬನಿಗೆ ಕಸಿ ಮಾಡಲಾಗಿದೆ. ತ್ರಿಪುರಾದ ವ್ಯಕ್ತಿಗೆ ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು.

heart-transplant
ತ್ರಿಪುರಾದ ವ್ಯಕ್ತಿಗೆ ಪಶ್ಚಿಮ ಬಂಗಾಳದಲ್ಲಿ ಯಶಸ್ವಿ ಹೃದಯ ಕಸಿ
author img

By

Published : Jan 8, 2023, 2:23 PM IST

ಕೋಲ್ಕತಾ: ತ್ರಿಪುರಾ ವ್ಯಕ್ತಿಯೊಬ್ಬರಿಗೆ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಕಸಿಯನ್ನು ಯಶಸ್ವಿಯಾಗಿ ವೈದ್ಯರು ನಡೆಸಿದ್ದಾರೆ. ಇದು ವೈದ್ಯ ಲೋಕಕ್ಕೊಂದು ಗರಿಮೆ ತಂದುಕೊಟ್ಟಿದೆ. ಡಿಸೆಂಬರ್ 30 ರಂದು ​ಪಶ್ಚಿಮ ಬಂಗಾಳದ ರಂಗಭೂಮಿ ಕಲಾವಿದ ಹಿರಣ್ಮೊಯ್ ಘೋಷಾಲ್ ಎಂಬವರು ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದರು. ಅವರ ಸಂಬಂಧಿಕರು ಘೋಷಾಲ್ ಅವರ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದರು. ಅದರಂತೆ ಅವರ ಹೃದಯವನ್ನು ತ್ರಿಪುರಾದ ರಂಜಿತ್ ರಾಯ್​ ಎಂಬುವರಿಗೆ ವರ್ಗಾಯಿಸಲಾಗಿದೆ. ಇದೀಗ ರಂಜಿತ್​ ಅವರಿಗೆ ಜೀವನದ ಎರಡನೇ ಅವಕಾಶ ದೊರೆತಿದೆ.

ತ್ರಿಪುರಾದ ನಿವಾಸಿ ರಂಜಿತ್ ರಾಯ್ ಅವರು ಬಹಳ ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಿಗೆ 44 ವರ್ಷ ಪ್ರಾಯವಾಗಿದ್ದು, ಜೀವನೋಪಾಯಕ್ಕಾಗಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ತ್ರಿಪುರಾದ ಒಂದು ಶಿಬಿರದಲ್ಲಿ ಹೃದಯ ತಜ್ಞ ಕುನಾಲ್ ಸರ್ಕಾರ್ ಅವರನ್ನು ಭೇಟಿಯಾಗಿ ಹೃದಯ ಕಸಿ ಮಾಡುವಂತೆ ಕೇಳಿಕೊಂಡಿದ್ದರು.

ಸೂಕ್ತ ದಾನಿ ಸಿಗದೇ ರಾಯ್​ ಅವರು ಬಹಳ ದಿನಗಳವರೆಗೆ ಕಾಯಬೇಕಾಗಿತ್ತು. ತ್ರಿಪುರಾದಲ್ಲಿ ಈ ರೀತಿಯ ಚಿಕಿತ್ಸೆಗೆ ಯಾವುದೇ ಸೌಲಭ್ಯವಿಲ್ಲದ ಕಾರಣ ಅವರು ಕೋಲ್ಕತ್ತಾಗೆ ಹೋಗಬೇಕಿತ್ತು. ಅಲ್ಲದೇ ಬಿ-ಪಾಸಿಟಿವ್ ರಕ್ತದಾನಿಗಳನ್ನು ಪಡೆಯುವುದು ಕೂಡ ಸಮಸ್ಯೆಯಾಗಿತ್ತು. ಇವೆರಡರಿಂದಾಗಿ ಅವರಿಗೆ ಹೃದಯ ಕಸಿ ಮಾಡಿಸಲು ಎರಡು ಬಾರಿ ಅಡಚಣೆಯಾಗಿದೆ.

ಆದರೆ, ಕಳೆದ ತಿಂಗಳು 30 ರಂದು ವೈದ್ಯರು ರಾಯ್‌ ಅವರಿಗೆ ಕರೆ ಮಾಡಿ ಶಸ್ತ್ರಚಿಕಿತ್ಸೆಗೆ ಹೃದಯದ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದರು. ಅದರಂತೆ ಡಿಸೆಂಬರ್​ 31 ರಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ತಮ್ಮ ಅನಾರೋಗ್ಯದ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ರಾಯ್​, 'ನನಗೆ ನಡೆಯುವಾಗ ಮತ್ತು ಕೆಲವೊಮ್ಮೆ ಮಾತನಾಡುವಾಗ ಸಮಸ್ಯೆಯಾಗುತ್ತಿತ್ತು. ಇದಕ್ಕಾಗಿಯೇ ನಾನು ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ, ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ನನ್ನ ಹಿರಿಯ ಸೋದರ ಸಂಬಂಧಿಯೊಬ್ಬರು ವೈದ್ಯ ಕುನಾಲ್ ಸರ್ಕಾರ್ ಅವರ ಹೆಸರನ್ನು ಪ್ರಸ್ತಾಪಿಸಿದರು. ಅವರನ್ನು ನನ್ನ ಮಗ ಸಂಪರ್ಕಿಸಿದ್ದು, 10 ದಿನಗಳ ಕಾಯುವಿಕೆಯ ನಂತರ ನನಗೆ ಅಪಾಯಿಂಟ್ಮೆಂಟ್ ಸಿಕ್ಕಿತು. ಕೊನೆಗೆ ವೈದ್ಯರು ಹೃದಯ ಕಸಿ ಮಾಡುವಂತೆ ಸೂಚಿಸಿದರು. ಅದರಂತೆ ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಿದರು. ಪ್ರಸ್ತುತ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ' ಎಂದರು.

ಇದನ್ನೂ ಓದಿ: 'ಹುಲಿಗಳ ರಾಜ್ಯ' ಹೆಗ್ಗಳಿಕೆ ಈ ಬಾರಿ ಕರ್ನಾಟಕದ ಮುಡಿಗೆ?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.