ಶಾಮ್ಲಿ, ಉತ್ತರ ಪ್ರದೇಶ: ಓರ್ವ ವ್ಯಕ್ತಿ ತನಗೆ ಮದುವೆಯಾಗಲು ಯುವತಿಯನ್ನು ಹುಡುಕಿಕೊಡಿ ಎಂದು ಪೊಲೀಸರ ಸಹಾಯ ಕೇಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಾಮ್ಲಿ ಜಿಲ್ಲೆಯ 26 ವರ್ಷದ ಅಜೀಂ ಮನ್ಸೂರಿ ಎತ್ತರದ ಸಮಸ್ಯೆಯಿಂದ ಬಳಲುತ್ತಿದ್ದು, ಕೇವಲ 3 ಅಡಿ 2 ಇಂಚು ಎತ್ತರವಿರುವ ಕಾರಣದಿಂದ ಈವರೆಗೂ ಮದುವೆಯಾಗಲು ಯಾವ ಯುವತಿಯೂ ಮುಂದೆ ಬರಲಿಲ್ಲ. ಇದರಿಂದಾಗಿ ನೊಂದ ಯುವಕ ಸಹಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾನೆ.
6 ಮಂದಿ ಸಹೋದರರದಲ್ಲಿ ಒಬ್ಬನಾದ ಅಝೀಂ ಮೊದಲಿನಿಂದಲೂ ಗಿಡ್ಡವಾಗಿದ್ದು, ಮದುವೆಗೆ ಯಾರೂ ಮುಂದಾಗದ ಕಾರಣ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ, ಉನ್ನತಾಧಿಕಾರಿಗಳಿಗೂ ಪತ್ರ ಬರೆದಿದ್ದು, ಸಹಾಯ ಕೇಳಿದ್ದಾನೆ.
ಇದನ್ನೂ ಓದಿ: 11 ತಿಂಗಳಲ್ಲಿ 2 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಮರು ಪಾವತಿ
ಇವನ ಕತೆ ಕೇಳಿದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು, ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕೈರಾನಾದಲ್ಲಿ ಅಝೀಂ ಮನ್ಸೂರ್ ಅಂಗಡಿಯನ್ನು ಇಟ್ಟುಕೊಂಡಿದ್ದು, ಮುಂದಿನ ರಂಜಾನ್ ಒಳಗೆ ಮದುವೆಯಾಗಬೇಕೆಂಬ ಅಭಿಲಾಷೆ ಹೊಂದಿದ್ದಾನೆ. ಮದುವೆಯಾದರೆ ಪತ್ನಿಯನ್ನು ಹನಿಮೂನ್ಗೆ ಗೋವಾ, ಕುಲ್ಲು-ಮನಾಲಿ, ಶಿಮ್ಲಾಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ.