ಸೋನೆಪುರ್, ಒಡಿಶಾ: ಜಿಲ್ಲೆಯ ಸುಭಲೈ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು ತನ್ನ ಸೋದರ ಮಾವನೊಂದಿಗೆ ತನ್ನ ಗಂಡನ ಮುಂದೆ ಮದುವೆ ಮಾಡಿಕೊಂಡಿರುವ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಈ ಮದುವೆ ಭಾನುವಾರ ನಡೆದಿದೆ.
ಏನಿದು ಪ್ರಕರಣ: ಮಹಿಳೆಯನ್ನು ಅಂಗುಲ್ ಜಿಲ್ಲೆಯ ಜಿಲ್ಲಿ ಪ್ರಧಾನ್ (22) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ಸೋನೆಪುರ ಜಿಲ್ಲೆಯ ಸುಭಲೈ ಠಾಣಾ ವ್ಯಾಪ್ತಿಯ ಕಿರಾಸಿ ಗ್ರಾಮದ ಮಾಧಬ್ ಪ್ರಧಾನ್ ಅವರನ್ನು ವಿವಾಹವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮಾಧಬ್ ಅವರ ಸೋದರಸಂಬಂಧಿ ಪರಮೇಶ್ವರ್ ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಕಾಲ ಕಳೆದಂತೆ ಪರಮೇಶ್ವರ್ ಮತ್ತು ಜಿಲ್ಲಿ ಆತ್ಮೀಯರಾದರು. ಮಾಧಬ್ ಅನುಪಸ್ಥಿತಿಯಲ್ಲಿ ಅವರು ಪರಸ್ಪರ ಭೇಟಿಯಾಗುತ್ತಿದ್ದರು.
ಇನ್ನು ಇವರ ಮಧ್ಯೆ ಇದ್ದ ವಿವಾಹೇತರ ಸಂಬಂಧ ಬೆಳಕಿಗೆ ಬಂದಾಗ ಜಿಲ್ಲಿ ಮತ್ತು ಪರಮೇಶ್ವರ್ ಗುರುವಾರದಂದು ಓಡಿ ಹೋಗಿದ್ದರು. ಪತ್ನಿ ನಾಪತ್ತೆಯಾಗಿದ್ದಾರೆ ಎಂದು ಮಾಧವ್ ಪ್ರಧಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಹುಡುಕಾಟ ನಡೆಸಿದ್ದ ಪೊಲೀಸರಿಗೆ ಒಂದು ವಾರದ ನಂತರ ಈ ಜೋಡಿ ಪತ್ತೆಯಾಗಿತ್ತು. ಪತ್ತೆಯಾದ ನಂತರ, ಪೊಲೀಸ್ ಠಾಣಾಧಿಕಾರಿ ಜಿಲ್ಲಿಯನ್ನು ವಿಚಾರಿಸಿದಾಗ ತಾನು ಪರಮೇಶ್ವರ್ ಪ್ರಧಾನ್ ಜೊತೆ ಇರುವುದಾಗಿ ಮತ್ತು ಆತನನ್ನು ಮದುವೆಯಾಗುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಠಾಣಾಧಿಕಾರಿ ಜಿಲ್ಲಿ ಅವರ ಅಭಿಪ್ರಾಯವನ್ನು ಮಾಧವ ಪ್ರಧಾನ್ ಅವರಿಗೆ ವಿವರಿಸಿದರು. ಜಿಲ್ಲಿ ಮತ್ತು ಪರಮೇಶ್ವರ್ ಅವರ ಕುಟುಂಬ ಸದಸ್ಯರು ಪರಸ್ಪರ ಬೇರ್ಪಡುವಂತೆ ಮನವೊಲಿಸಲು ಪ್ರಯತ್ನಿಸಿದರು. ಅವರ ಎಲ್ಲ ಪ್ರಯತ್ನಗಳು ವ್ಯರ್ಥವಾಯಿತು. ಮದುವೆ ಮಾಡಿಸುವಂತೆ ಜೋಡಿ ಹಠ ಹಿಡಿದಿತ್ತು. ಹಲವಾರು ಜನರ ಮತ್ತು ಮಾಧವ್ ಅವರ ಒಪ್ಪಿಗೆಯೊಂದಿಗೆ ಜಿಲ್ಲಿ ಶನಿವಾರ ರಾತ್ರಿ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಸಮ್ಮುಖದಲ್ಲೇ ತನ್ನ ಪ್ರೇಮಿ ಪರಮೇಶ್ವರ ಪ್ರಧಾನ್ ಅವರೊಂದಿಗೆ ವಿವಾಹವಾದರು.
ಓದಿ: ಬಿಡುವಿಲ್ಲದೇ ಮಾಧ್ಯಮಗಳಿಗೆ ಸಂದರ್ಶನ: ಪಾಕಿಸ್ತಾನದ ಸೀಮಾ ಹೈದರ್ ಸುಸ್ತು
ಪ್ರೀತಿಸಿ ದೂರಾಗಲು ಯತ್ನಿಸಿದ ಯುವಕನೊಂದಿಗೆ ಮದುವೆ: ಪ್ರೀತಿಸಿ ಬಳಿಕ ತನ್ನಿಂದ ದೂರವಾಗಲು ಯತ್ನಿಸಿದ ಯುವಕನೊಂದಿಗೆ ಯುವತಿ ಮದುವೆಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದಿದೆ. ದಲಿತ ಸಂಘಟನೆಗಳ ಮುಖಂಡರು ಯುವಕನಿಗೆ ಬುದ್ಧಿವಾದ ಹೇಳಿ ರಾಜಿ ಸಂಧಾನ ನಡೆಸುವ ಮೂಲಕ ಇಬ್ಬರಿಗೂ ಮದುವೆ ಮಾಡಿಸಿದ ವಿಡಿಯೋ ವೈರಲ್ ಆಗಿತ್ತು.