ಮುಲುಗು: ತೆಲಂಗಾಣದ ಮುಲುಗು ಜಿಲ್ಲೆಯ ಚಂತಿ ಎಂಬ 28 ವರ್ಷದ ವ್ಯಕ್ತಿ ತನ್ನ ಅಪ್ರಾಪ್ತೆ ಸಹೋದರ ಸಂಬಂಧಿ ಮೇಲೆ ಆರು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿಸಿದ ಘಟನೆ ನಡೆದಿದೆ. ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಇಂತಹ ಕೃತ್ಯ ಎಸೆಗಿದ್ದಾನೆ. ಪ್ರಸ್ತುತ ಈತ ಕನ್ನಾಯಿಗುಡೆಂ ವಲಯದ ಬಸಂಪಲ್ಲಿ ಎಂಬ ಗ್ರಾಮದಲ್ಲಿ ನೆಲೆಸಿದ್ದಾನೆ.
ಆರೋಪಿ ಬಾಲಕಿಗೆ ಬೆದರಿಕೆ ಹಾಕಿ ಈ ಕೃತ್ಯ ಎಸಗಿದ್ದಾನೆ. ತನ್ನ ಮಾತನ್ನು ಕೇಳದಿದ್ದರೆ ನಿನ್ನ ಹೆತ್ತವರನ್ನು ಕೊಂದು ಅವರ ಮನೆಯನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಬಾಲಕಿ ಹೇಳಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಚಂತಿಯ ಈ ಬೆದರಿಕೆಯಿಂದ ಹೆದರಿದ ಬಾಲಕಿ, ಆತನ ಕೃತ್ಯದ ಬಗ್ಗೆ ಸುಮ್ಮನಾಗಿದ್ದಾಳೆ. ಇದರ ಲಾಭ ಪಡೆದ ಆರೋಪಿ ಆರು ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೋಷಕರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ಆ ಬಳಿಕವಷ್ಟೇ ಬಾಲಕಿ ಗರ್ಭಿಣಿ ಎಂಬುದು ಕುಟುಂಬಕ್ಕೆ ಗೊತ್ತಾಗಿದೆ. ಇದರಿಂದ ಮನನೊಂದ ಪೋಷಕರು ಚಂತಿ ವಿರುದ್ಧ ಮುಳುಗು ಪೊಲೀಸರಿಗೆ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನು ಓದಿ:ಮಹಿಳಾ ವೈದ್ಯೆ ಆತ್ಮಹತ್ಯೆ: NEET ಭಯದಿಂದ ದುರಂತ ಎಂದ ಪೋಷಕರು