ಹೈದರಾಬಾದ್ : ಆನ್‌ಲೈನ್‌ನಲ್ಲಿ ಫೋನ್ ಆರ್ಡರ್ ಮಾಡಿದ್ರೆ ಪಾರ್ಸೆಲ್ ಬಾಕ್ಸ್‌ನಲ್ಲಿ ಕಲ್ಲು ಬಂದಿರುವುದನ್ನ ನೋಡಿದ್ದೇವೆ. ಶೂಗಳನ್ನು ಖರೀದಿಸಿದ್ರೆ ಸೋಪ್ ಬಾಕ್ಸ್‌ಗಳು ಬಂದಿರುವುದನ್ನೂ ಕಂಡಿದ್ದೇವೆ. ಇಂತಹ ಘಟನೆಗಳಿಂದ ಗ್ರಾಹಕರು ಆನ್‌ಲೈನ್‌ನಲ್ಲಿ ಏನಾದರೂ ಆರ್ಡರ್ ಮಾಡಿದರೆ, ಪಾರ್ಸೆಲ್ ಬಂದಾಗ ಅದನ್ನು ಮೊದಲು ವಿಡಿಯೋ ರೆಕಾರ್ಡ್ ಮಾಡುವುದು ಸರ್ವೆ ಸಾಮಾನ್ಯವಾಗಿದೆ.
ವಿಡಿಯೋ ಪುರಾವೆ ತೋರಿಸಿ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಬೇರೆ ಪಾರ್ಸೆಲ್ ಬಂದಿರುವುದನ್ನು ಆಲ್‌ಲೈನ್ ಶಾಪಿಂಗ್ ಕಂಪನಿಗಳ ವಿರುದ್ಧ ದೂರು ನೀಡಲು ನೆರವಾಗುತ್ತದೆ. ಇಂತಹ ಘಟನೆಗಳು ದಿನನಿತ್ಯ ಸಾಕಷ್ಟು ನಡೆಯುತ್ತಿವೆ. ಇತ್ತೀಚೆಗಷ್ಟೇ ತೆಲಂಗಾಣದ ಹೈದರಾಬಾದಿನಲ್ಲೂ ಇಂತಹದ್ದೇ ಘಟನೆ ನಡೆದಿದೆ.
ಕೂಕಟ್‌ಪಲ್ಲಿಯ ಯುವಕ ಯಶವಂತ್ ಎಂಬುವರು ಇತ್ತೀಚೆಗೆ ಅಮೆಜಾನ್ ವೆಬ್‌ಸೈಟ್ ಮೂಲಕ 1 ಲಕ್ಷ 5 ಸಾವಿರ ರೂಪಾಯಿ ಪಾವತಿಸಿ ಆ್ಯಪಲ್ ಕಂಪನಿಯ ಮ್ಯಾಕ್‌ಬುಕ್ ಆರ್ಡರ್ ಮಾಡಿದ್ದಾರೆ. ಮಂಗಳವಾರ ಅಮೆಜಾನ್‌ನಿಂದ ಪಾರ್ಸೆಲ್ ಕೂಡ ಪಡೆದಿದ್ದಾರೆ. ಇ-ಕಾಮರ್ಸ್ ಸೈಟ್‌ಗಳಲ್ಲಿ ಒಂದನ್ನು ಬುಕ್ ಮಾಡಿ ಮತ್ಯಾವುದೋ ವಸ್ತು ಪಡೆಯುವ ಬಗ್ಗೆ ಹಲವು ಬಾರಿ ಕೇಳಿದ್ದ ಈತ, ಪಾರ್ಸೆಲ್ ತೆರೆಯುವಾಗ ಅಲರ್ಟ್ ಆಗಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಆತ ನಿರೀಕ್ಷಿಸಿದಂತೆಯೇ ಪಾರ್ಸೆಲ್‌ನಲ್ಲಿ ಆರ್ಡರ್ ಮಾಡಿದ ಮ್ಯಾಕ್‌ಬುಕ್ ಬದಲಾಗಿ ಪೇಪರ್‌ಗಳ ಬಂಡಲ್ ಬಂದಿದೆ. ಅದನ್ನು ನೋಡಿ ಬೆಚ್ಚಿಬಿದ್ದ ಯಶವಂತ್, ವಿಡಿಯೋ ಸಮೇತ ಅಮೆಜಾನ್ ಸಿಇಒ ಹಾಗೂ ಕಂಪನಿಯ ಪ್ರತಿನಿಧಿಗಳಿಗೆ ಇ-ಮೇಲ್ ಮಾಡಿ ಆಗಿರುವ ಎಡವಟ್ಟನ್ನು ಗಮನಕ್ಕೆ ತಂದಿದ್ದಾರೆ. ಅಮೆಜಾನ್‌ನಿಂದ ಯಶವಂತ್‌ಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕವರ್ ಆರ್ಡರ್ ಮಾಡಿದ್ರೆ ಒರಿಜಿನಲ್ ಪಾಸ್‌ಪೋರ್ಟ್ ಡೆಲಿವರಿ: ತಬ್ಬಿಬ್ಬಾದ ಗ್ರಾಹಕ