ಜಲ್ಪೈಗುರಿ (ಪಶ್ಚಿಮ ಬಂಗಾಳ) : ಇಂದಿನ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಸಾಧ್ಯ. ಇದಕ್ಕೆ ಪೂರಕ ಎಂಬ ರೀತಿಯಲ್ಲಿ ಬರೋಬ್ಬರಿ 54 ವರ್ಷಗಳ ನಂತರ ವ್ಯಕ್ತಿಯೊಬ್ಬರು ಬಲಗಣ್ಣಿನ ದೃಷ್ಟಿ ವಾಪಸ್ ಪಡೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಜುಲ್ಪೈಗುರಿಯಲ್ಲಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ನಡೆಸಿ, ವೈದ್ಯರು ಅದರಲ್ಲಿ ಯಶಸ್ವಿಯಾಗಿದ್ದಾರೆ. ದೇಶಾದ್ಯಂತ ಹಲವಾರು ವೈದ್ಯರ ಸಂಪರ್ಕ ಮಾಡಿದ ಬಳಿಕ ವ್ಯಕ್ತಿ, ಕ್ವಾಜಿ ಆಲಂ ನಾಯರ್ ಎಂಬ ವೈದ್ಯರನ್ನ ಸಂಪರ್ಕಿಸಿ, ಇದೀಗ ದೃಷ್ಟಿ ಪಡೆದುಕೊಂಡಿದ್ದಾರೆ.
ಭಟ್ಟಾಚಾರ್ಯ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಿನಿಂದ ಈ ಸಮಸ್ಯೆ ಎದುರಿಸಿದ್ದಾರೆ. ಬಲಗಣ್ಣಿನಲ್ಲಿ ಸಮಸ್ಯೆ ಇರುವುದನ್ನ ಶಿಕ್ಷಕರು ಗಮನಿಸಿದ್ದರು. ಈ ವೇಳೆ, ಪೋಷಕರೊಂದಿಗೆ ಮಾತನಾಡಿದ್ದ ವೈದ್ಯರ ಬಳಿ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದರು. ವೈದ್ಯರ ಪರೀಕ್ಷೆ ವೇಳೆ ಬಲಗಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು.
![ಚಿಕ್ಕವನಾಗಿದ್ದಾಗಿನಿಂದಲೂ ದೋಷ...](https://etvbharatimages.akamaized.net/etvbharat/prod-images/wb-jal-02-eye-treatment-7203427_31052022130139_3105f_1653982299_975_3105newsroom_1654001803_1002.jpg)
ಇದನ್ನೂ ಓದಿ: ನಿಮಗಾಗಿಯೇ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ.. ನಾನು 130 ಕೋಟಿ ಜನರ ಪ್ರಧಾನ ಸೇವಕ: ನರೇಂದ್ರ ಮೋದಿ
ಬಾಲ್ಯದಲ್ಲಿ ಕಡು ಬಡವರಾಗಿದ್ದ ಕಾರಣ ಮನೆಯಲ್ಲಿ ಕರೆಂಟ್ ಇರುತ್ತಿರಲಿಲ್ಲ. ಹೀಗಾಗಿ, ದೀಪದ ಸಹಾಯದಿಂದ ಓದುತ್ತಿದ್ದೆವು. ಹುಟ್ಟಿನಿಂದಲೇ ದೃಷ್ಟಿ ಸಮಸ್ಯೆ ಹಾಗೂ ಕಡಿಮೆ ಬೆಳಕಿನಲ್ಲಿ ಓದಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಸಮಸ್ಯೆ ಬಗ್ಗೆ ಗೊತ್ತಾಗುತ್ತಿದ್ದಂತೆ ದೇಶಾದ್ಯಂತ ಅನೇಕ ವೈದ್ಯರನ್ನ ಸಂಪರ್ಕಿಸಿದ್ದು ಇದರಲ್ಲಿ ಯಶಸ್ವಿಯಾಗಿಲ್ಲವಂತೆ.
ಆದರೆ, ಮೇ 5ರಂದು ಸಿಲಿಗುರಿಯ ಗ್ರೇಟರ್ ಲಯನ್ಸ್ ಆಸ್ಪತ್ರೆಗೆ ಹೋಗಿ ನೇತ್ರ ತಜ್ಞ ಕ್ವಾಜಿ ಆಲಂ ನಾಯರ್ ಅವರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಅವರಿಗೆ ಕಣ್ಣಿನ ಪೊರೆ ಸಮಸ್ಯೆ ಬಗ್ಗೆ ಅವರು ತಿಳಿಸಿದ್ದಾರೆ. ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಇದೀಗ ಎರಡು ಕಣ್ಣಿನಿಂದ ನೋಡುವ ಸಾಮರ್ಥ್ಯ ಪಡೆದುಕೊಂಡಿದ್ದಾರೆ.
![Man gets back his vision after 54 years](https://etvbharatimages.akamaized.net/etvbharat/prod-images/wb-jal-02-eye-treatment-7203427_31052022130139_3105f_1653982299_285_3105newsroom_1654001803_471.jpg)
ಇದರ ಬಗ್ಗೆ 'ಈಟಿವಿ ಭಾರತ' ಜೊತೆ ಮಾತನಾಡಿ, ನನ್ನ ಬಲಗಣ್ಣಿನಲ್ಲಿ ಸಮಸ್ಯೆ ಇತ್ತು. ಚಿಕ್ಕವನಾಗಿದಾಗಿನಿಂದಲೂ ಈ ಸಮಸ್ಯೆ ನನ್ನಲ್ಲಿತ್ತು. ಕಡಿಮೆ ಬೆಳಕಿನಲ್ಲಿ ಓದಿರುವುದು ನನಗೆ ಮತ್ತಷ್ಟು ತೊಂದರೆ ಮಾಡಿತು. ಆದರೆ, ಇದೀಗ ಶಸ್ತ್ರಚಕಿತ್ಸೆಗೊಳಗಾಗಿ, ಎರಡು ಕಣ್ಣುಗಳಿಂದ ನೋಡುವ ಸಾಮರ್ಥ್ಯ ಹೊಂದಿದ್ದೇನೆ ಎಂದರು.