ETV Bharat / bharat

ಅತ್ಯಾಚಾರಿಗಳಿಗೆ ಎನ್‌ಕೌಂಟರ್, ಮರಣದಂಡನೆ ಶಿಕ್ಷೆ ನೀಡ್ಬೇಕು : ರಾಷ್ಟ್ರಪತಿ ಭೇಟಿಗೆ ಸೈಕಲ್‌ನಲ್ಲಿಯೇ ಹೊರಟ ವ್ಯಕ್ತಿ! - ರಾಷ್ಟ್ರಪತಿ ಭೇಟಿಗೆ ಸೈಕಲ್‌ನಲ್ಲಿಯೇ ಹೊರಟ ತೆಲಂಗಾಣದ ವ್ಯಕ್ತಿ

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಕೆಲವು ಇತ್ತೀಚಿನ ಘಟನೆಗಳು ಋಷಿಕೇಶ್ವರ್ ರಾಜು ಅವರಿಗೆ ತೀವ್ರ ಪರಿಣಾಮ ಬೀರಿ ಅವರಲ್ಲಿ ಬದಲಾವಣೆ ಉಂಟು ಮಾಡಿದೆಯಂತೆ. ಪರಿಣಾಮ ಬೈಸಿಕಲ್‌ನಲ್ಲಿ ಸುಮಾರು 2,000 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಲಿದ್ದಾರೆ..

ರಾಷ್ಟ್ರಪತಿ ಭೇಟಿಗೆ ಸೈಕಲ್‌ನಲ್ಲಿಯೇ ಹೊರಟ ವ್ಯಕ್ತಿ!

author img

By

Published : Mar 27, 2022, 7:39 PM IST

Updated : Mar 27, 2022, 11:00 PM IST

ನಾಗ್ಪುರ( ಮಹಾರಾಷ್ಟ್ರ) : ಅತ್ಯಾಚಾರಗಳು ಆಘಾತಕಾರಿ ಅಪರಾಧವಾಗಿ ಉಳಿದಿರುವ ಇಂದಿನ ಕಾಲದಲ್ಲಿ ತೆಲಂಗಾಣದ ಇಬ್ಬರು ಹೆಣ್ಣುಮಕ್ಕಳ ತಂದೆ ದೇಶದಲ್ಲಿ ನಡೆಯುತ್ತಿರುವ ಲೈಂಗಿಕ ಅಪರಾಧಗಳ ಕ್ರೌರ್ಯದ ಬಗ್ಗೆ ತಮ್ಮ ಕಳವಳವನ್ನು ಭಾರತದ ಘನತೆವೆತ್ತ ರಾಷ್ಟ್ರಪತಿಗಳಿಗೆ ತಲುಪಿಸಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ಕೆ ಅವರು ಬೈಸಿಕಲ್ ಅ​ನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲೇ ಸಂಚರಿಸಿ ರಾಷ್ಟ್ರಪತಿಗಳನ್ನು ಭೇಟಿಯಾಗುವ ಆಶಯ ಹೊಂದಿದ್ದಾರೆ. ಇವರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಕೆಲವು ಇತ್ತೀಚಿನ ಘಟನೆಗಳು ಋಷಿಕೇಶ್ವರ್ ರಾಜು ಅವರಿಗೆ ತೀವ್ರ ಪರಿಣಾಮ ಬೀರಿ ಅವರಲ್ಲಿ ಬದಲಾವಣೆ ಉಂಟು ಮಾಡಿದೆಯಂತೆ. ಅವರು ಬೈಸಿಕಲ್‌ನಲ್ಲಿ ಸುಮಾರು 2,000 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಹೊರಟಿದ್ದಾರೆ. ಇನ್ನು ಅತ್ಯಾಚಾರಿಗಳು ಮತ್ತು ಲೈಂಗಿಕ ಕಿರುಕುಳಗಾರರಿಗೆ ಕಡ್ಡಾಯ ಶಿಕ್ಷೆಯಾಗಿ ಎನ್‌ಕೌಂಟರ್ ಅಥವಾ ಮರಣದಂಡನೆ ವಿಧಿಸುವ ಕಾನೂನನ್ನು ಜಾರಿಗೆ ತರಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದಾರೆ.

ಅತ್ಯಾಚಾರಿಗಳಿಗೆ ಎನ್‌ಕೌಂಟರ್, ಮರಣದಂಡನೆ ಶಿಕ್ಷೆ ನೀಡ್ಬೇಕು

ಇದನ್ನೂ ಓದಿ: ಮದುವೆ ಆಮಂತ್ರಣ ನೀಡಲು ಹೋದವನ ಮೇಲೆ ಬಿದ್ದ ತೆಂಗಿನ ಮರ: ವ್ಯಕ್ತಿ ಸ್ಥಳದಲ್ಲೇ ಸಾವು

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲ್‌ಗುಡಾದಿಂದ ಇವರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಎಲ್ಲವೂ ಯೋಜಿಸಿದಂತೆ ನಡೆದರೆ ಏಪ್ರಿಲ್ 5ರಂದು ದೆಹಲಿಯಲ್ಲಿ ರಾಷ್ಟ್ರಪತಿಯನ್ನು ಭೇಟಿಯಾಗಲಿದ್ದಾರೆ. ಆರಂಭದಿಂದಲೂ ಅವರು ಪ್ರತಿದಿನ 70 ರಿಂದ 80 ಕಿಲೋಮೀಟರ್ ಸೈಕ್ಲಿಂಗ್ ಮಾಡುತ್ತಿದ್ದಾರೆ. ಈವರೆಗೆ 14 ದಿನಗಳಲ್ಲಿ ಸುಮಾರು 700 ಕಿ.ಮೀ ದೂರವನ್ನು ಕ್ರಮಿಸಿರುವ ಅವರು, ಇನ್ನು 1200 ಕಿ.ಮೀ ಇರುವ ದೆಹಲಿ ಕಡೆ ಮುಖ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಇಂತಹ ಅಪರಾಧಗಳ ಸುತ್ತಲಿನ ಕಾನೂನುಗಳನ್ನು ಬಲಪಡಿಸಿದ್ದರೂ ಸಹ ನಿರ್ಭಯಾ ಪ್ರಕರಣ ಬೆಳಕಿಗೆ ಬಂದಾಗಿನಿಂದ ಅಪರಾಧಗಳು ಕಡಿಮೆಯಾಗುವ ಬದಲು ಹೆಚ್ಚುತ್ತಿವೆ. ಹೆಚ್ಚುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯದ ಘಟನೆಗಳು ಸಮಾಜವನ್ನು ಪಾರ್ಶ್ವವಾಯುವಿಗೆ ತಳ್ಳಿವೆ.

ಡಾ ಪ್ರಿಯಾಂಕಾ ರೆಡ್ಡಿ ಪ್ರಕರಣದ ನಂತರ ದಿಶಾ ಕಾಯಿದೆಯು ಕಳೆದ ವರ್ಷ ಅಸ್ತಿತ್ವಕ್ಕೆ ಬಂದಿತು. ಆದರೆ, ಅದು ಸ್ವಲ್ಪ ಮಟ್ಟಿಗೆ ಮಾತ್ರ ಪರಿಣಾಮಕಾರಿಯಾಗಿದೆ. ಇವುಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಭಯವನ್ನು ಸೃಷ್ಟಿಸಲು ಒಂದೇ ಒಂದು ಮಾರ್ಗವಿದೆ. ಅದೇನೆಂದರೆ ಎನ್ಕೌಂಟರ್​​ ಎಂದು ಹೇಳಿದ್ದಾರೆ.

Last Updated : Mar 27, 2022, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.