ETV Bharat / bharat

ಮದ್ಯ ಮಾರಾಟ ಮಾಡದಂತೆ ಹೇಳಿದ ವ್ಯಕ್ತಿಗೆ ಥಳಿತ.. ಗುಪ್ತಾಂಗಕ್ಕೆ ಬರೆ ಎಳೆದು ದುಷ್ಕೃತ್ಯ! - ಚುರು ಜಿಲ್ಲಾಸ್ಪತ್ರೆಯಲ್ಲಿ ವ್ಯಕ್ತಿಗೆ ಚಿಕಿತ್ಸೆ

ಧಾರ್ಮಿಕ ಸ್ಥಳದ ಬಳಿ ಮದ್ಯ ಮಾರಾಟ ಮಾಡದಂತೆ ಹೇಳಿಕೆ ಕಾರಣಕ್ಕೆ ವ್ಯಕ್ತಿಯನ್ನು ನಿರ್ದಯವಾಗಿ ಥಳಿಸಿ, ಗುಪ್ತಾಂಗಕ್ಕೆ ಬರೆ ಎಳೆದ ದುಷ್ಕೃತ್ಯ ರಾಜಸ್ಥಾನದಲ್ಲಿ ನಡೆದಿದೆ.

man-brutally-beaten-in-churu-exceeding-the-limits-of-torture
ಮದ್ಯ ಮಾರಾಟ ಮಾಡದಂತೆ ಹೇಳಿದ ವ್ಯಕ್ತಿಗೆ ಥಳಿಸಿ ಗುಪ್ತಾಂಗಕ್ಕೆ ಬರೆ ಎಳೆದು ದುಷ್ಕೃತ್ಯ
author img

By

Published : Jul 24, 2022, 11:06 PM IST

ಚುರು (ರಾಜಸ್ಥಾನ): ರಾಜಸ್ಥಾನದ ಚುರು ಜಿಲ್ಲೆಯ ಗ್ರಾಮವೊಂದಲ್ಲಿ ಮದ್ಯ ಮಾರಾಟ ವಿಷಯವಾಗಿ 34 ವರ್ಷದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಅಮಾನುಷವಾಗಿ ಥಳಿಸಿ, ಗುಪ್ತಾಂಗಕ್ಕೆ ಬರೆ ಎಳೆದಿರುವ ಘಟನೆ ನಡೆದಿದೆ. ಸದ್ಯ ಈ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಚುರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಸಿದ್ಧಮುಖ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಧಾರ್ಮಿಕ ಸ್ಥಳದ ಬಳಿ ಕೆಲವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಅಲ್ಲಿ ಮದ್ಯ ಮಾರಾಟ ಮಾಡದಂತೆ ಹೇಳಿಕೆ ಕಾರಣಕ್ಕೆ ಈ ವ್ಯಕ್ತಿಯನ್ನು ದೂರು ಕರೆದೊಯ್ದು ನಿರ್ದಯವಾಗಿ ಥಳಿಸಿದ್ದಾರೆ. ಅಲ್ಲದೇ, ಆತನನ್ನು ವಿವಸ್ತ್ರಗೊಳಿಸಿ ಮತ್ತು ಗುಪ್ತಾಂಗಕ್ಕೆ ಬರೆ ಎಳೆದಿದ್ದಾರೆ ಎಂದು ಹೇಳಲಾಗ್ತಿದೆ.

ಇದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಯ ತುರ್ತು ವಿಭಾಗಕ್ಕೆ ಸಾಗಿಸಲಾಗಿದೆ. ಈ ಘಟನೆಯಿಂದ ಸದ್ಯ ಭಯಭೀತನಾಗಿರುವ ವ್ಯಕ್ತಿ ಕುಟುಂಬ ಸಮೇತ ದೂರ ಹೋಗುವುದಾಗಿ ಹೇಳಿದ್ದಾನೆ. ನನ್ನನ್ನು ಆರೋಪಿಗಳು ಗ್ರಾಮದಲ್ಲಿರಲು ಬಿಡುವುದಿಲ್ಲ ಎಂದೂ ಆತಂಕ ವ್ಯಕ್ತಪಡಿಸಿದ್ದಾನೆ.

ಈ ಬಗ್ಗೆ ಘಟನೆ ಕುರಿತು ಪೊಲೀಸ್​ ದಿಲೀಪ್ ಕುಮಾರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಹಲ್ಲೆಗೊಳಾಗದ ಸಂತ್ರಸ್ತನ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯತಮೆ ಜೊತೆಗೆ ಲಿವ್​ ಇನ್​, ಆಕೆಯ ತಂಗಿಯ ಮೇಲೆ ರೇಪ್​: ಲವ್ ಜಿಹಾದ್ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.