ಗ್ವಾಲಿಯರ್(ಮಧ್ಯಪ್ರದೇಶ): ತಂಬಾಕು ಖರೀದಿಸಿದ ನಂತರ ಹಣ ನೀಡಲು ನಿರಾಕರಿಸಿದ ಯುವಕನನ್ನು ಕೊಲೆ ಮಾಡಿರುವ ಘಟನೆ ಗ್ವಾಲಿಯರ್ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನಗರದ ಕೆಂಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಮೃತನನ್ನು ಸುಭಾಷ್ ಶಾಕ್ಯಾ ಎಂದು ಗುರುತಿಸಲಾಗಿದೆ.
ತಂಬಾಕಿಗೆ ಹಣ ನೀಡಲು ನಿರಾಕರಿಸಿದಾಗ ಶಾಕ್ಯಾ ಮತ್ತು ಅಂಗಡಿಯ ಮಾಲೀಕರ ನಡುವೆ ಜಗಳ ನಡೆದಿದೆ. ಅಂಗಡಿ ಮಾಲೀಕನಿಗೆ ಹಣ ನೀಡದೆ ಸುಭಾಷ್ ತಂಬಾಕು ಪ್ಯಾಕೆಟ್ನೊಂದಿಗೆ ಪರಾರಿಯಾಗಲು ಪ್ರಯತ್ನಿಸಿದರು. ಅಂಗಡಿ ಮಾಲೀಕ ಕರಣ್ ಯಾದವ್ ಮತ್ತು ಅವರ ಮಗ ಸಚಿನ್ ಯಾದವ್ ಆತನನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ.
ತೀವ್ರ ಹಲ್ಲೆ ನಡೆಸಿದ್ದರಿಂದ ಶಾಕ್ಯ ಮೃತಪಟ್ಟಿದ್ದಾರೆ. ನಂತರ ಪೊಲೀಸರು ಆರೋಪಿಗಳ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ತಂದೆ ಮತ್ತು ಮಗನನ್ನು ಬಂಧಿಸಲಾಗಿದೆ.
ಸಂತ್ರಸ್ತ ಆಗಾಗ ಸಾಲ ಪಡೆಯುತ್ತಿದ್ದು, ಇದನ್ನು ಮರಳಿ ನೀಡದ ಹಿನ್ನೆಲೆ ಈ ಪ್ರಕರಣಕ್ಕೆ ಮುಖ್ಯ ಕಾರಣ ಎಂದು ಸಿಎಸ್‌ಪಿ ವಿಜಾ ಭಡೋರಿಯಾ ಹೇಳಿದ್ದಾರೆ.
ಓದಿ: ಶಿವಮೊಗ್ಗ: ಜೈಲಿನಲ್ಲಿ ಬೀಡಿ, ಲೈಟರ್, ಹುಕ್ಕಾ ಕಂಡು ದಂಗಾದ ಪೊಲೀಸರು