ಕೋಲ್ಕತ್ತಾ: ವಿದೇಶ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪೇನ್ ನೆಲದಲ್ಲಿ ಪಿಯಾನೋದಲ್ಲಿ ರವೀಂದ್ರ ಸಂಗೀತದ ಹಾಡು ನುಡಿಸುವ ಮೂಲಕ ಕುತೂಹಲ ಮೂಡಿಸಿದರು. ಸಂಗೀತ ವಾದ್ಯ ವಾದಕಿ ಎಂದು ಗುರುತಿಸಿಕೊಂಡಿರುವ ಮಮತಾ ಬ್ಯಾನರ್ಜಿ ಶುಕ್ರವಾರ ಮ್ಯಾಡ್ರಿಡ್ನಲ್ಲಿ ಠಾಗೋರರ ಪ್ರಸಿದ್ಧ ಹಾಡು 'ಫುಲೆ ಫುಲೆ ಢೋಲೆ ಢೋಲೆ' ಹಾಡನ್ನು ಪಿಯಾನೋದಲ್ಲಿ ನುಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹೂಡಿಕೆಯ ಅಭಿವೃದ್ಧಿಗಾಗಿ ದುಬೈ ಹಾಗೂ ಸ್ಪೇನ್ ದೇಶಗಳಿಗೆ 12 ದಿನಗಳ ಪ್ರವಾಸದಲ್ಲಿರುವ ಮಮತಾ ಬ್ಯಾನರ್ಜಿ, ಸ್ಪೇನ್ನ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜೊತೆಗೆ ಸ್ಪೇನ್ನಲ್ಲಿ ಲಾ ಲಿಗಾ ಅಧಿಕಾರಿಗಳನ್ನು ಭೇಟಿ ಮಾಡಿರುವ ಬ್ಯಾನರ್ಜಿ, ಲಾ ಲಿಗಾದೊಂದಿಗೆ ಎಂಒಯುಗೆ ಸಹಿ ಹಾಕಿದರು. ಈ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಬ್ಯಾನರ್ಜಿ ಅವರು ಪಿಯಾನೋದಲ್ಲಿ ರವೀಂದ್ರ ಸಂಗೀತ ನುಡಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
-
Mamata Banerjee, the Pied Piper for perpetrators of violence and injustice in Bengal, is playing the accordion to her heart's delight on her foreign trip when she is supposed to be ensuring foreign investments in WB !! ...@MamataOfficial pic.twitter.com/Yt5oNVmEwk
— Dr. Sukanta Majumdar (@DrSukantaBJP) September 14, 2023 " class="align-text-top noRightClick twitterSection" data="
">Mamata Banerjee, the Pied Piper for perpetrators of violence and injustice in Bengal, is playing the accordion to her heart's delight on her foreign trip when she is supposed to be ensuring foreign investments in WB !! ...@MamataOfficial pic.twitter.com/Yt5oNVmEwk
— Dr. Sukanta Majumdar (@DrSukantaBJP) September 14, 2023Mamata Banerjee, the Pied Piper for perpetrators of violence and injustice in Bengal, is playing the accordion to her heart's delight on her foreign trip when she is supposed to be ensuring foreign investments in WB !! ...@MamataOfficial pic.twitter.com/Yt5oNVmEwk
— Dr. Sukanta Majumdar (@DrSukantaBJP) September 14, 2023
ಇದಕ್ಕೂ ಮೊದಲು ಸ್ಪೇನ್ನಲ್ಲಿ ಬೆಳಗ್ಗಿನ ವಾಕ್ನಲ್ಲಿದ್ದಾಗ ಬೀದಿಯಲ್ಲಿದ್ದ ಸಂಗೀತಗಾರರಿಂದ ಅಕಾರ್ಡಿಯನ್ (Accordion) ತೆಗೆದುಕೊಂಡು 'ಹಮ್ ಹೋಂಗೆ ಕಾಮ್ಯಾಬ್' ಎನ್ನುವ ದೇಶಭಕ್ತಿ ಗೀತೆ ನುಡಿಸುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಮಮತಾ ಬ್ಯಾನರ್ಜಿ ಹಂಚಿಕೊಂಡಿದ್ದರು. ವಿಡಿಯೋ ಜೊತೆಗೆ, "ಸಂಗೀತ ಯಾವತ್ತೂ ಶಾಶ್ವತ. ಸಂಗೀತದ ಜೊತೆಗೇ ಬೆಳೆಯಬೇಕು, ಪ್ರಬುದ್ಧವಾಗಿರಬೇಕು. ನೀವು ಸಾಯುವವರೆಗೂ ನಿಮ್ಮ ಜೊತೆಗೇ ಸಂಗೀತ ಇರಬೇಕು" ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದರು.
ನಿನ್ನೆ ಸ್ಪೇನ್ನಲ್ಲಿ ನಡೆದ ಮ್ಯಾಡ್ರಿಡ್ ಬುಕ್ ಫೇರ್ ಸಂಘಟನಾ ಸಮಿತಿಯ ಸಭೆಯಲ್ಲಿ ರವೀಂದ್ರ ಸಂಗೀತದ ಚರ್ಚೆಯೂ ಆಗಿತ್ತು. ಸ್ಪೇನ್ ಜನರ ಬಗ್ಗೆ ರವೀಂದ್ರನಾಥ್ ಠೋಗೋರ್ ಅವರು ವಿಶೇಷ ಒಲವು ಹೊಂದಿದ್ದರು. ಹಾಗಾಗಿ ಬುಕ್ ಫೇರ್ ಸಂಘಟನಾ ಸಮಿತಿ ಠಾಗೋರ್ ಅವರ ಪುಸ್ತಕಗಳನ್ನು ಸ್ಪ್ಯಾನಿಶ್ ಭಾಷೆಗೆ ಭಾಷಾಂತರ ಮಾಡುವ ಇಂಗಿತ ವ್ಯಕ್ತಪಡಿಸಿದೆ ಎಂದು ಬ್ಯಾನರ್ಜಿ ತಿಳಿಸಿದರು.
ಎರಡು ದಿನಗಳ ಹಿಂದಷ್ಟೆ ಮ್ಯಾಡ್ರಿಡ್ ತಲುಪಿರುವ ಮಮತಾ ಬ್ಯಾನರ್ಜಿ ಸ್ಪೇನ್ನಲ್ಲಿ ಹಲವಾರು ವ್ಯಾಪಾರ ಶೃಂಗಸಭೆಗಳು ಹಾಗೂ ಇತರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಮ್ಯಾಡ್ರಿಡ್ನಿಂದ ಬಾರ್ಸಿಲೋನಾಗೆ ತೆರಳಲಿರುವ ಮಮತಾ, ದುಬೈಗೆ ಹಿಂತಿರುಗುವ ಮೊದಲು ಬಾರ್ಸಿಲೋನಾದಲ್ಲಿ ಮೂರು ದಿನಗಳ ಕಾಲ ವಿವಿಧ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 23ರಂದು ಕೋಲ್ಕತ್ತಾಗೆ ಹಿಂತಿರುಗುವರು.
ಇದನ್ನೂ ಓದಿ: ಸ್ಪೇನ್ನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಜಾಗಿಂಗ್! ವೀಡಿಯೊ ನೋಡಿ