ETV Bharat / bharat

ಮಲಯಾಳಂ ಸಿನಿಮಾ ನಿರ್ದೇಶಕ ಶ್ರೀಕುಮಾರ್​ ಮೆನನ್​ ಬಂಧನ

ಹಣ ವಂಚಿಸಿದ್ದಾರೆ ಎಂದು ಆರೋಪಿಸಿ ಶ್ರೀವತ್ಸಂ ಗ್ರೂಪ್​ ನೀಡಿದ ದೂರಿನ ಮೇರೆಗೆ ಮಲಯಾಳಂ ಸಿನಿಮಾ ನಿರ್ದೇಶಕ ಶ್ರೀಕುಮಾರ್ ಮೆನನ್ ಅವರನ್ನು ಬಂಧಿಸಲಾಗಿದೆ.

Sreekumar Menon
ಶ್ರೀಕುಮಾರ್​ ಮೆನನ್​ ಬಂಧನ
author img

By

Published : May 7, 2021, 1:49 PM IST

ಅಲಪ್ಪುಳ (ಕೇರಳ): ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರ್ಥಿಕ ವಂಚನೆ ಮಾಡಿದ ಆರೋಪದಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕ ಶ್ರೀಕುಮಾರ್ ಮೆನನ್ ಅವರನ್ನು ಬಂಧಿಸಲಾಗಿದೆ.

ಶ್ರೀವತ್ಸಂ ಗ್ರೂಪ್​ ನೀಡಿದ ದೂರಿನ ಮೇರೆಗೆ ಅಲಪ್ಪುಳ ದಕ್ಷಿಣ ಪೊಲೀಸರು ಶ್ರೀಕುಮಾರ್​ನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಶ್ರೀಕುಮಾರ್ ಮೆನನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ಸಹ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಾಹಿತಿ ಹೊರಬರಬೇಕಿದೆ.

ಸಿನಿಮಾ ನಿರ್ಮಿಸಲು ಶ್ರೀವತ್ಸಂ ಗ್ರೂಪ್​ನಿಂದ ಹಣ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ಈ ಬಳಿಕ ಗ್ರೂಪ್​ನಿಂದ ಹಲವಾರು ಬಾರಿ ಸಂಪರ್ಕಿಸಿದರೂ, ಚಿತ್ರದ ನಿರ್ಮಾಣದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರೂಪ್​ನವರು ಶ್ರೀಕುಮಾರ್ ಮೆನನ್ ವಿರುದ್ಧ ಕೇಸು ದಾಖಲಿಸಿದ್ದಾರೆ.

ಶ್ರೀಕುಮಾರ್ ಮೆನನ್ ಕೇರಳದ ಜನಪ್ರಿಯ ಜಾಹೀರಾತು-ಚಲನಚಿತ್ರ ತಯಾರಕ. ಈ ಹಿಂದೆ ಅನೇಕ ಪ್ರಮುಖ ಕಂಪನಿಗಳಿಗೆ ಜಾಹೀರಾತುಗಳನ್ನು ರಚಿಸಿದ್ದಾರೆ. ಇದಲ್ಲದೆ ಮೋಹನ್ ಲಾಲ್ ಮತ್ತು ಮಂಜು ವಾರಿಯರ್ ನಟಿಸಿರುವ 'ಒಡಿಯನ್' ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಈ ಹಿಂದೆ ನಟಿ ಮಂಜು ವಾರಿಯರ್ ಅವರನ್ನು ಸೋಷಿಯಲ್ ಮೀಡಿಯಾದ ಮೂಲಕ ನಿಂದಿಸಿದ್ದಾರೆ ಎಂದು ಆರೋಪಿಸಿ 2019ರಲ್ಲಿ ಶ್ರೀಕುಮಾರ್ ಅವರನ್ನು ಬಂಧಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.