ಮೈನ್‌ಪುರಿ (ಉತ್ತರ ಪ್ರದೇಶ): ಮೈನ್‌ಪುರಿ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಗೆಲುವು ಸಾಧಿಸಿದ್ದಾರೆ. ಮೈನ್‌ಪುರಿ ಲೋಕಸಭಾ ಕ್ಷೇತ್ರದ ಜಸ್ವಂತ್‌ನಗರ ವಿಧಾನಸಭಾ ಕ್ಷೇತ್ರದ 20ನೇ ಸುತ್ತಿನ ಮತ ಎಣಿಕೆಯಲ್ಲಿ ಎಸ್‌ಪಿಯ ಡಿಂಪಲ್ ಯಾದವ್ 97892 ಮತ್ತು ಬಿಜೆಪಿಯ ರಘುರಾಜ್ ಶಾಕ್ಯಾ 34191 ಮತಗಳನ್ನು ಪಡೆದರು. ಮಧ್ಯಾಹ್ನ 2.30ಕ್ಕೆ ನಡೆದ 26ನೇ ಸುತ್ತಿನ ಮತ ಎಣಿಕೆಯಲ್ಲಿ ಡಿಂಪಲ್ ಯಾದವ್ 4,82,392 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ರಘುರಾಜ್ ಶಾಕ್ಯ 2,51,094 ಮತಗಳು ಸಿಕ್ಕಿವೆ.
ಡಿಂಪಲ್ ಯಾದವ್ 2.31 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇವರು ಗೆಲುವಿನ ದಡ ಸೇರುತ್ತಿದ್ದಂತೆಯೇ ಹಲವೆಡೆ ವಿಜಯೋತ್ಸವದ ಸಂಭ್ರಮ ಶುರುವಾಗಿದೆ. ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಮೈನ್‌ಪುರಿಯಲ್ಲಿ ಬಿಜೆಪಿ ಶೇ 33.68 ಮತ ಪಡೆದರೆ, ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಶೇ 64.84 ಮತ ಪಡೆದರು. 0.66 ರಷ್ಟು ಜನರು ನೋಟಾ ಒತ್ತಿದ್ದಾರೆ. ಡಿಸೆಂಬರ್ 5 ರಂದು ಮೈನ್‌ಪುರಿ ಲೋಕಸಭಾ ಉಪಚುನಾವಣೆಗೆ ಮತ ಚಲಾಯಿಸಲಾಗಿತ್ತು. ಶೇ 51.8 ರಷ್ಟು ಮತದಾರರು ಮತದಾನ ಮಾಡಿದ್ದರು.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ನಂತರ ಮೈನ್‌ಪುರಿ ಲೋಕಸಭಾ ಸ್ಥಾನ ತೆರವಾಗಿತ್ತು.
ಇದನ್ನೂ ಓದಿ: ಯಾದವ್ ಕುಟುಂಬದ ಸೊಸೆಯಾದರೂ ಆದರ್ಶ ಮಹಿಳೆಯರ ಸಾಲಿನಲ್ಲಿ 'ಡಿಂಪಲ್'.. ಅವರ ಬಗ್ಗೆ ನಿಮಗೆಷ್ಟು ಗೊತ್ತು!?