ETV Bharat / bharat

ಶಶಿ ತರೂರ್​ ಜೊತೆ ಸಂಸದೆ ಮಹುವಾ ಮೊಯಿತ್ರಾ: ಏನೋ ನಡೀತಿದೆ ಎಂದು ಕಾಲೆಳೆದ ನೆಟ್ಟಿಗರು! - ಕಾಂಗ್ರೆಸ್​ ನಾಯಕ ಶಶಿ ತರೂರ್

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಿಗರೇಟ್​ ಸೇದುವ, ಶಾಂಪೇನ್​ ಕುಡಿಯುತ್ತಿರುವ ಚಿತ್ರಗಳಿವೆ.

ಸಂಸದೆ ಮಹುವಾ ಮೊಯಿತ್ರಾ
ಸಂಸದೆ ಮಹುವಾ ಮೊಯಿತ್ರಾ
author img

By ETV Bharat Karnataka Team

Published : Oct 15, 2023, 10:11 PM IST

ಹೈದರಾಬಾದ್: ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆಯಲ್ಲಿ ತಮ್ಮ ಹರಿತ ಮಾತುಗಳ ಮೂಲಕ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪರಿಯಿಂದಾಗಿ ಅವರಿಗೆ 'ಫೈರ್‌ಬ್ರಾಂಡ್' ಎಂಬ ಪದನಾಮ ನೀಡಲಾಗಿದೆ. ಅಂತಹ ಸಂಸದೆ ಕಾಂಗ್ರೆಸ್​ ನಾಯಕ ಶಶಿ ತರೂರ್​ ಅವರ ಜೊತೆ ಖಾಸಗಿಯಾಗಿ ಕಾಣಿಸಿಕೊಂಡಿದ್ದು, ಅದರ ಚಿತ್ರಗಳು ವೈರಲ್​ ಆಗಿ ಟ್ರೋಲ್​ಗೆ ಗುರಿಯಾಗಿದ್ದಾರೆ.

  • Most amused to see some personal photos of me being circulated on social media by @BJP4India ‘s troll sena.

    I like green dress better on me than white blouse. And why bother cropping - show rest of the folks at dinner as well.
    Bengal’s women live a life. Not a lie.

    — Mahua Moitra (@MahuaMoitra) October 15, 2023 " class="align-text-top noRightClick twitterSection" data=" ">

ಮಹುವಾ ಮೊಯಿತ್ರಾ ಅವರು ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತಿತರರು ರೆಸ್ಟೋರೆಂಟ್‌ವೊಂದರಲ್ಲಿ ಭೋಜನ ಮಾಡುತ್ತಿರುವುದನ್ನು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ತರೂರ್​ ಅವರ ಜೊತೆ ಆತ್ಮೀಯವಾಗಿರುವ ಚಿತ್ರವೂ ಇದರಲ್ಲಿದ್ದು, ನೆಟ್ಟಿಗರ ಕಾಮೆಂಟ್​ಗೆ ಆಹಾರವಾಗಿದೆ. ಮಹುವಾ ಅವರನ್ನು ಗೇಲಿ ಮಾಡಿರುವ ನೆಟಿಜನ್‌ಗಳು ಶಶಿ ತರೂರ್ ಮತ್ತು ಮಹುವಾ ಮೊಯಿತ್ರಾ ನಡುವೆ ಏನೋ 'ಏನೋ ಆಹಾರ ಸಿದ್ಧವಾಗುತ್ತಿದೆ' ಎಂದು ಕಿಚಾಯಿಸಿದ್ದಾರೆ.

ಇದರೊಂದಿಗೆ ಟಿಎಂಸಿ ಸಂಸದೆ ಸಿಗರೇಟ್ ಸೇದುವ, ಮದ್ಯಪಾನ ಮಾಡುತ್ತಿರುವ ಚಿತ್ರಗಳೂ ಹರಿದಾಡುತ್ತಿವೆ. ಯಾವ ರೆಸ್ಟೋರೆಂಟ್​ನಲ್ಲಿ ಇವರಿಬ್ಬರು ಭೋಜನಕೂಟ ನಡೆಸಿದರು ಎಂಬುದು ತಿಳಿದುಬಂದಿಲ್ಲ. ಸದನದಲ್ಲಿ ಮಾತುಗಳಿಂದಲೇ ಕಿಚ್ಚು ಹೊತ್ತಿಸುವ ಸಂಸದೆಯ ಫೋಟೋಗಳು ವೈರಲ್​ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹತ್ತಿಕೊಂಡಿದೆ.

  • I don’t smoke. Am severely allergic to cigarettes. I was just posing for a joke with a friend’s cigar.

ಇದು ಬಿಜೆಪಿಯ ಕೈವಾಡ- ಆರೋಪ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳು ತಮ್ಮವಲ್ಲ. ಫೋಟೋಗಳನ್ನು ಕಟ್​ ಮಾಡಿ ಬೇಕಂತಲೇ ಹಂಚಿಕೊಳ್ಳಲಾಗಿದೆ. ಇದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಐಟಿ ಸೆಲ್​ನಿಂದ ಈ ಚಿತ್ರಗಳು ಬಂದಿವೆ ಎಂದೂ ದೂಷಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಸ್ಪಷ್ಟನೆ ನೀಡಿರುವ ಸಂಸದೆ, ಸಿಗರೇಟ್​ ಸೇದುತ್ತಿರುವ ಮತ್ತು ಶಾಂಪೇನ್ ಕುಡಿಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ತನಗೆ ಧೂಮಪಾನ ಮಾಡುವುದು ಅಲರ್ಜಿ. ಸ್ನೇಹಿತ ಜೊತೆ ಇದ್ದಾಗ ಸಿಗಾರ್​ ಅನ್ನು ತಮಾಷೆಯಾಗಿ ಹಿಡಿದುಕೊಂಡು ಪೋಸ್​ ನೀಡಿದ್ದೇನೆ. ಉಳಿದವರು ಕೂಡ ಅಲ್ಲಿ ಇದ್ದರು. ಅದನ್ನು ಮಾತ್ರ ಬಿಜೆಪಿ ಹಂಚಿಕೊಂಡಿಲ್ಲ. ಔತಣಕೂಟದಲ್ಲಿ ಹಾಜರಿದ್ದ ಇತರರನ್ನೂ ತೋರಿಸಲು ಬಿಜೆಪಿಯನ್ನು ಒತ್ತಾಯಿಸಿದರು.

ಬಿಜೆಪಿಯ ಟ್ರೋಲ್​ ಪಡೆ ನನ್ನ ಕೆಲವು ವೈಯಕ್ತಿಕ ಫೋಟೋಗಳನ್ನು ಹಂಚಿಕೊಂಡು ಖುಷಿಪಟ್ಟಿದೆ. ನನಗೆ ಬಿಳಿಗಿಂತ ಹಸಿರು ಬಣ್ಣದ ಉಡುಪು ಇಷ್ಟ. ಬಂಗಾಳದ ಮಹಿಳೆಯರು ಗೌರವಯುತ ಜೀವನ ನಡೆಸುತ್ತಾರೆ. ನಾನು ಧೂಮಪಾನ ಮಾಡುವುದಿಲ್ಲ. ನಾನು ಸಿಗರೇಟ್‌ನಿಂದ ಅಲರ್ಜಿಯನ್ನು ಹೊಂದಿದ್ದೇನೆ ಎಂದೆಲ್ಲಾ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಉದ್ಯಮಿಯಿಂದ ಹಣ ಪಡೆದು ಸದನದಲ್ಲಿ ಪ್ರಶ್ನೆ ಕೇಳಿದ ಆರೋಪ: ಟಿಎಂಸಿ ಸಂಸದೆ ವಿರುದ್ಧ ಸ್ಪೀಕರ್​ಗೆ ಬಿಜೆಪಿ ದೂರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.