ಮುಂಬೈ(ಮಹಾರಾಷ್ಟ್ರ): ಮಹಾತ್ಮಾ ಗಾಂಧಿಯವರ ಮೊಮ್ಮಗ, ಲೇಖಕ ಅರುಣ್ ಗಾಂಧಿ (89 ) ಅನಾರೋಗ್ಯದಿಂದ ಇಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತದೇಹದ ಅಂತ್ಯಕ್ರಿಯೆ ಇಂದು ಕೊಲ್ಲಾಪುರದಲ್ಲಿ ನಡೆಯಲಿದೆ ಎಂದು ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ.
-
Bereaved. Lost my father this morning🙏🏽
— Tushar बेदखल (@TusharG) May 2, 2023 " class="align-text-top noRightClick twitterSection" data="
">Bereaved. Lost my father this morning🙏🏽
— Tushar बेदखल (@TusharG) May 2, 2023Bereaved. Lost my father this morning🙏🏽
— Tushar बेदखल (@TusharG) May 2, 2023
ಲೇಖಕ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತರಾದ ಅರುಣ್ ಗಾಂಧಿ ಏಪ್ರಿಲ್ 14, 1934 ರಂದು ಡರ್ಬನ್‌ನಲ್ಲಿ ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ದಂಪತಿಗೆ ಮಗನಾಗಿ ಜನಿಸಿದರು. ಸಾಮಾಜಿಕ ಕಾರ್ಯಕರ್ತನಾಗಿ ತಮ್ಮ ಅಜ್ಜ(ಮಹಾತ್ಮಾ ಗಾಂಧಿ)ನ ಹಾದಿಯಲ್ಲಿ ಸಾಗಿದವರು. ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ, 'ದಿ ಗಿಫ್ಟ್ ಆಫ್ ಆಂಗರ್: ಅಂಡ್ ಅದರ್ ಲೆಸನ್ಸ್ ಫ್ರಂ ಮೈ ಗ್ರ್ಯಾಂಡ್ ಫಾದರ್ ಮಹಾತ್ಮ ಗಾಂಧಿ' ಅವರ ಪ್ರಮುಖವಾಗಿದೆ. ಅರುಣ್ ಗಾಂಧಿ 1987ರಲ್ಲಿ ಕುಟುಂಬ ಸಮೇತ ಅಮೆರಿಕದಲ್ಲಿ ನೆಲೆಸಿದ್ದರು. ಅಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ವಿಶ್ವವಿದ್ಯಾಲಯದಲ್ಲಿ ಅಹಿಂಸೆಗೆ ಸಂಬಂಧಿಸಿದ ಸಂಸ್ಥೆ ಸ್ಥಾಪಿಸಿದ್ದರು.
ಮೃತರ ಅಂತ್ಯಕ್ರಿಯೆ ಸಂಜೆ 05:00 ರಿಂದ 06:30 ರವರೆಗೆ ಕೊಲ್ಲಾಪುರ ಜಿಲ್ಲೆಯ ಕರ್ವೀರ್, ನಂದವಾಲ್ ರಸ್ತೆಯಲ್ಲಿರುವ ಗಾಂಧಿ ಫೌಂಡೇಶನ್ ಆವರಣದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಲಾವಿದರಿಗೆ ಸಾವಿಲ್ಲ: ಅಭಿಮಾನಿ, ಸಿನಿಗಣ್ಯರ ನೆನಪುಗಳಲ್ಲಿ ವಾಸಿಸುತ್ತಿರುವ ಇರ್ಫಾನ್ ಖಾನ್