ಮುಂಬೈ(ಮಹಾರಾಷ್ಟ್ರ): ಕಳೆದ ಐದು ತಿಂಗಳಲ್ಲಿ ರಾಜ್ಯದಲ್ಲಿ 1,076 ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಮಹಾರಾಷ್ಟ್ರ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ವಡೆತ್ತಿವಾರ್ ಸದನದಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಶ್ನೋತ್ತರ ವೇಳೆ ಉತ್ತರ ನೀಡಿರುವ ಸಚಿವರು, 2021ರ ಜೂನ್ನಿಂದ ಅಕ್ಟೋಬರ್ ತಿಂಗಳಲ್ಲಿ ಇಷ್ಟೊಂದು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವರ ಪೈಕಿ 491 ಪ್ರಕರಣಗಳು ಆಯಾ ಜಿಲ್ಲಾ ಮಟ್ಟದ ಸಮಿತಿಗಳ ಮೂಲಕ ರಾಜ್ಯ ಸರ್ಕಾರದ ಮಹಾತ್ಮ ಜ್ಯೋತಿರಾವ್ ಫುಲೆ ಸಾಲ ಮನ್ನಾ ಯೋಜನೆಯಡಿ ಲಾಭ ಪಡೆದುಕೊಳ್ಳಲು ಅರ್ಹರೆಂದು ಘೋಷಣೆ ಮಾಡಿದ್ದು, ಈ ರೈತರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಇದನ್ನೂ ಓದಿರಿ: ನಿಟ್ಟುಸಿರು ಬಿಟ್ಟ ಕರೀನಾ.. ನಟಿಯ ಒಮಿಕ್ರಾನ್ ವರದಿ ನೆಗೆಟಿವ್
ಹೆಚ್ಚಿನ ಸಾಲದ ಹೊರೆ, ಸಾಲ ಮರುಪಾವತಿ ಮಾಡಲು ಆಗದಿರುವುದು, ಪ್ರಕೃತಿ ವಿಕೋಪ ಸೇರಿದಂತೆ ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದ 1,076 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಸಚಿವರು ಮಾಹಿತಿ ನೀಡಿದ್ದಾರೆ. ಮೃತ ರೈತರ ಕುಟುಂಬಕ್ಕೆ 1 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದಿದ್ದಾರೆ.
ಮೃತರ ಪೈಕಿ 213 ರೈತರು ರಾಜ್ಯ ಸರ್ಕಾರದ ಯೋಜನೆ ಪಡೆದುಕೊಳ್ಳಲು ಅರ್ಹರಲ್ಲ ಎಂದಿರುವ ರಾಜ್ಯ ಸರ್ಕಾರ 372 ರೈತರ ಅರ್ಜಿಗಳು ಜಿಲ್ಲಾ ವಲಯದಲ್ಲಿ ಪರೀಕ್ಷೆಗೊಳಪಟ್ಟಿವೆ ಎಂದಿದ್ದಾರೆ.