ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಅಲೆ ಈಗಾಗಲೇ ಕ್ಷಿಪ್ರವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 60 ಸಾವಿರ ಕೋವಿಡ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಇದೇ ಮೊದಲ ಬಾರಿ ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 59,907 ಕೋವಿಡ್ ಕೇಸ್ ದಾಖಲಾಗಿದ್ದು, 322 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಸದ್ಯ ರಾಜ್ಯದಲ್ಲಿ 31,73,261 ಕೋವಿಡ್ ಪ್ರಕರಣಗಳಿದ್ದು, ಸದ್ಯ 5,01,559 ಸಕ್ರಿಯ ಪ್ರಕರಣಗಳಿವೆ. ಜತೆಗೆ 56,652 ಜನರು ಇಲ್ಲಿಯವರೆಗೆ ಡೆಡ್ಲಿ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ರಾಜ್ಯದಲ್ಲಿಂದು 30,296 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
-
Maharashtra reports 59,907 new COVID cases, 30,296 recoveries, and 322 deaths in the last 24 hours
— ANI (@ANI) April 7, 2021 " class="align-text-top noRightClick twitterSection" data="
Total cases: 31,73,261
Active cases: 5,01,559
Total recoveries: 26,13,627
Death toll: 56,652 pic.twitter.com/eWsr5P17CT
">Maharashtra reports 59,907 new COVID cases, 30,296 recoveries, and 322 deaths in the last 24 hours
— ANI (@ANI) April 7, 2021
Total cases: 31,73,261
Active cases: 5,01,559
Total recoveries: 26,13,627
Death toll: 56,652 pic.twitter.com/eWsr5P17CTMaharashtra reports 59,907 new COVID cases, 30,296 recoveries, and 322 deaths in the last 24 hours
— ANI (@ANI) April 7, 2021
Total cases: 31,73,261
Active cases: 5,01,559
Total recoveries: 26,13,627
Death toll: 56,652 pic.twitter.com/eWsr5P17CT
ಉಳಿದಂತೆ ಪುಣೆಯಲ್ಲಿ 11,023 ಕೋವಿಡ್ ಪ್ರಕರಣ, ಮುಂಬೈನಲ್ಲಿ 10,428 ಕೇಸ್, ನಾಗ್ಪುರ್ದಲ್ಲಿ 5,721 ಕೇಸ್ ಹಾಗೂ ಥಾಣೆಯಲ್ಲಿ 3,108 ಹಾಗೂ ಔರಂಗಾಬಾದ್ನಲ್ಲಿ 1,765 ಕೋವಿಡ್ ಕೇಸ್ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಖಾಲಿಯಾಗಿದ್ದು, ಮುಂದಿನ ಮೂರು ದಿನಗಳಿಗೆ ಮಾತ್ರ ಆಗುವಷ್ಟು ವ್ಯಾಕ್ಸಿನ್ ಇದೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ ತಕ್ಷಣವೇ ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ: ಪರೀಕ್ಷೆಯಲ್ಲಿ ವಿಫಲವಾದರೆ, ಅದು ಜೀವನದ ಸೋಲು ಅಲ್ಲ: ವಿದ್ಯಾರ್ಥಿಗಳಿಗೆ ನಮೋ ಕಿವಿ ಮಾತು!
ಉಳಿದಂತೆ ಪಂಜಾಬ್ನಲ್ಲಿ 2,997 ಕೋವಿಡ್ ಕೇಸ್, ಉತ್ತರ ಪ್ರದೇಶದಲ್ಲಿ 6023, ಗುಜರಾತ್ನಲ್ಲಿ 3,575, ಕರ್ನಾಟಕದಲ್ಲಿ 6,976, ಮಧ್ಯಪ್ರದೇಶದಲ್ಲಿ 4,043, ಜಮ್ಮು-ಕಾಶ್ಮೀರದಲ್ಲಿ 812, ಉತ್ತರಾಖಂಡ್ನಲ್ಲಿ 1109, ದೆಹಲಿಯಲ್ಲಿ 5506 ಪ್ರಕರಣಗಳು ದಾಖಲಾಗಿವೆ.
ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳು ಪಾಸ್
ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಮಹಾರಾಷ್ಟ್ರದಲ್ಲಿ 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೇ ಮುಂದಿನ ವರ್ಗಕ್ಕೆ ತೇರ್ಗಡೆಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಶಿಕ್ಷಣ ಸಚಿವ ವರ್ಷಾ ಗಾಯ್ಕವಾಡ್ ತಿಳಿಸಿದ್ದಾರೆ. ಈಗಾಗಲೇ 1ರಿಂದ 8ನೇ ತರಗತಿಗಳಿಗೆ ಪರೀಕ್ಷೆ ಇಲ್ಲದೇ ಮುಂದಿನ ವರ್ಗಕ್ಕೆ ತೇರ್ಗಡೆ ಮಾಡಿ ಆದೇಶ ನೀಡಲಾಗಿತ್ತು.