ETV Bharat / bharat

ಮಹಾರಾಷ್ಟ್ರದಲ್ಲಿ ಒಂದೇ ದಿನ 31 ಸಾವಿರ ಕೊರೊನಾ ಸೋಂಕಿತರು ಪತ್ತೆ - ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರು

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಜೊತೆಗೆ ಕೇರಳ ಮತ್ತು ಪಂಜಾಬ್​ನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

Maharashtra reports 31,855 new COVID19 cases today
ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ: ಒಂದೇ ದಿನದಲ್ಲಿ 31 ಸಾವಿರ ಕೇಸ್​​
author img

By

Published : Mar 24, 2021, 10:07 PM IST

ನವದೆಹಲಿ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚೆತ್ತಿದೆ. ಒಂದೇ ದಿನದಲ್ಲಿ ಸುಮಾರು 31,855 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.

ಕೊರೊನಾ ಸೋಂಕಿನ ಕಾರಣಕ್ಕೆ ಸುಮಾರು 95 ಮಂದಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 25,64,881 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 22,62,593ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದೂ ಕೊರೊನಾ ಅಬ್ಬರ: 2,298 ಜನರಲ್ಲಿ ಸೋಂಕು ಪತ್ತೆ

ಈವರೆಗೆ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ 53 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸದ್ಯಕ್ಕೆ 2,47,299 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೇರಳ ಮತ್ತು ಪಂಜಾಬ್​ನಲ್ಲಿ ಕೊರೊನಾ ಏರಿಕೆ

ಕೇರಳದಲ್ಲಿ 2,456 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 2060 ಮಂದಿಯಲ್ಲಿ ನೆಗೆಟಿವ್ ವರದಿ ಕಂಡುಬಂದಿದೆ. ರಾಜ್ಯದಲ್ಲಿ 24,268 ಮಂದಿ ಸಕ್ರಿಯ ಸೋಂಕಿತರಿದ್ದು, ಈವರೆಗೆ 10,80,803 ಮಂದಿಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

  • #Kerala - ഇന്ന് 2456 പേര്‍ക്ക് #COVID19

    കോഴിക്കോട് 333
    തിരുവനന്തപുരം 300
    കണ്ണൂര്‍ 295
    എറണാകുളം 245
    തൃശൂര്‍ 195
    കോട്ടയം 191
    മലപ്പുറം 173
    കൊല്ലം 153
    പത്തനംതിട്ട 117
    കാസര്‍ഗോഡ് 103
    പാലക്കാട് 101
    ആലപ്പുഴ 94
    ഇടുക്കി 86
    വയനാട് 70 #PIBKochi @COVIDNewsByMIB pic.twitter.com/d8D6AkHJVN

    — PIB in KERALA (@PIBTvpm) March 24, 2021 " class="align-text-top noRightClick twitterSection" data=" ">

ಪಂಜಾಬ್​ನಲ್ಲಿ ಹೊಸದಾಗಿ 2634 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಂದೇ ದಿನದಲ್ಲಿ 1,455 ಮಂದಿ ಗುಣಮುಖರಾಗಿದ್ದು, 39 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಲಕ್ಷದ 20 ಸಾವಿರಕ್ಕೆ ಏರಿಕೆಯಾಗಿದೆ.

ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2,20,276ಕ್ಕೆ ಏರಿಕೆಯಾಗಿದ್ದು, 1,93,280 ಮಂದಿ ಗುಣಮುಖರಾಗಿದ್ದಾರೆ.ಈವರೆಗಿನ ಮಾಹಿತಿಯಂತೆ 6,474 ಮಂದಿ ಮೃತಪಟ್ಟಿದ್ದು, 20,522 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.