ಮುಂಬೈ : ಉನ್ನಾವೋದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. ಈ ಸಂಬಂಧ ಉತ್ತರಪ್ರದೇಶ ಸರ್ಕಾರ ಬಾಲಕಿಗೆ ವಿಮಾನಯಾನ ವ್ಯವಸ್ಥೆ ಮಾಡಿ ಮುಂಬೈಗೆ ಕಳುಹಿಸುವಂತೆ ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರೌತ್ ಯುಪಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
-
उत्तर प्रदेश के उन्नाव में दलित बेटियों के साथ हुई दुर्भाग्यपूर्ण घटना से मन आहत है। मैं उत्तर प्रदेश सरकार से निवेदन करता हूं कि बच्ची को एयरलिफ्ट करके मुंबई भेजे। हम बच्ची का सर्वोत्तम ईलाज करवाएंगे।#Save_Unnao_Ki_Beti pic.twitter.com/QmtS1PhP9l
— Dr. Nitin Raut (@NitinRaut_INC) February 19, 2021 " class="align-text-top noRightClick twitterSection" data="
">उत्तर प्रदेश के उन्नाव में दलित बेटियों के साथ हुई दुर्भाग्यपूर्ण घटना से मन आहत है। मैं उत्तर प्रदेश सरकार से निवेदन करता हूं कि बच्ची को एयरलिफ्ट करके मुंबई भेजे। हम बच्ची का सर्वोत्तम ईलाज करवाएंगे।#Save_Unnao_Ki_Beti pic.twitter.com/QmtS1PhP9l
— Dr. Nitin Raut (@NitinRaut_INC) February 19, 2021उत्तर प्रदेश के उन्नाव में दलित बेटियों के साथ हुई दुर्भाग्यपूर्ण घटना से मन आहत है। मैं उत्तर प्रदेश सरकार से निवेदन करता हूं कि बच्ची को एयरलिफ्ट करके मुंबई भेजे। हम बच्ची का सर्वोत्तम ईलाज करवाएंगे।#Save_Unnao_Ki_Beti pic.twitter.com/QmtS1PhP9l
— Dr. Nitin Raut (@NitinRaut_INC) February 19, 2021
ಉನ್ನಾವೋದಲ್ಲಿ ನಡೆದ ಘಟನೆಯಿಂದ ನನಗೆ ದುಃಖವಾಗಿದೆ. ಜಂಗಲ್ ರಾಜ್ ಹೊರತುಪಡಿಸಿ ಉತ್ತರಪ್ರದೇಶದ ಎಲ್ಲಾ ಭಾಗಗಳಲ್ಲಿ ಇಂತಹ ಪ್ರಕರಣ ನಡೆದಿವೆ. ಒಂದು ಕಡೆ ಬಿಜೆಪಿಯವರು ಬೇಟಿ ಬಚಾವೋ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನೊಂದೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶದಲ್ಲಿ ಹೆಚ್ಚುತ್ತಿವೆ ಎಂದು ಆರೋಪಿಸಿದರು.
ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಮಹಾ ಸರ್ಕಾರ ಭರಿಸಲಿದೆ: ಮಹಾರಾಷ್ಟ್ರ ಸರ್ಕಾರ ಬಾಲಕಿಯ ಚಿಕಿತ್ಸಾ ವೆಚ್ಚ ಭರಿಸಲಿದೆ. ಉನ್ನಾವೋ ಸಂತ್ರಸ್ತ ಬಾಲಕಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. ಮುಂಬೈನಲ್ಲಿ ಉತ್ತಮವಾದ ಆಸ್ಪತ್ರೆ ವ್ಯವಸ್ಥೆಗಳಿವೆ. ಹೀಗಾಗಿ, ಯುಪಿ ಸರ್ಕಾರ ಬಾಲಕಿಗೆ ವಿಮಾನ ವ್ಯವಸ್ಥೆಯ ಮೂಲಕ ಮುಂಬೈಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಓದಿ: ಹುಲ್ಲು ತರಲು ಹೋದ ಬಾಲಕಿಯರು ಕೈ-ಕಾಲುಗಳು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆ... ಇಬ್ಬರು ಸಾವು!
ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಯುಪಿ ಸರ್ಕಾರ ವಿಫಲ : ಮಹಿಳೆಯರನ್ನು ರಕ್ಷಿಸುವಲ್ಲಿ ಯೋಗಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯೋಗಿ ಆದಿತ್ಯನಾಥ್ ಆಳ್ವಿಕೆಯಲ್ಲಿ ದಲಿತರು ಮತ್ತು ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಎಂದು ಗುಡುಗಿದ್ದಾರೆ.
ಉನ್ನಾವೋ ಘಟನೆ ವಿವರ : ಮೂರು ಅಪ್ರಾಪ್ತ ಬಾಲಕಿಯರು ಬುಧವಾರ ಉನ್ನಾವೋದ ಅಶೋಹಾದ ಹೊಲವೊಂದರಲ್ಲಿ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ತೆರಳಿದ್ದರು. ಸಾಯಂಕಾಲವಾದರೂ ಮನೆಗೆ ಹಿಂದಿರುಗಿರಲಿಲ್ಲ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಾಲಕಿಯರು ಪತ್ತೆಯಾಗಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಪ್ರಸ್ತುತ ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.