ETV Bharat / bharat

ಭ್ರಷ್ಟಾಚಾರ ಆರೋಪ: ರಾಜೀನಾಮೆ ನೀಡಿದ ಮಹಾರಾಷ್ಟ್ರ ಗೃಹ ಸಚಿವ ದೇಶಮುಖ್​ - ಅನಿಲ್ ದೇಶಮುಖ್ ರಾಜೀನಾಮೆ

Anil Deshmukh
Anil Deshmukh
author img

By

Published : Apr 5, 2021, 2:58 PM IST

Updated : Apr 5, 2021, 4:20 PM IST

14:55 April 05

ಹಫ್ತಾ ವಸೂಲಿ ಆರೋಪಕ್ಕೆ ಗೃಹ ಸಚಿವ ದೇಶಮುಖ್ ತಲೆದಂಡ

Anil Deshmukh
ದೇಶಮುಖ್​ ರಾಜೀನಾಮೆ ಪತ್ರ

ಮುಂಬೈ: ಪ್ರತಿ ತಿಂಗಳು 100 ಕೋಟಿ ರೂ. ಹಫ್ತಾ ಸಂಗ್ರಹಿಸುವಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಅಲ್ಲಿನ ಗೃಹ ಸಚಿವ ಅನಿಲ್ ದೇಶಮುಖ್ ಸೂಚಿಸಿದ್ದರು ಎಂದು ಐಪಿಎಸ್ ಅಧಿಕಾರಿ ಪರಮ್ ವೀರ್ ಸಿಂಗ್ ಆರೋಪಿಸಿದ್ದರು. ಇದರ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್​​ ಸಿಬಿಐ ತನಿಖೆಗೆ ಆದೇಶ ನೀಡಿರುವ ಬೆನ್ನಲ್ಲೇ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  

ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದು, ಅಂಗೀಕಾರವಾಗಿದೆ ಎಂದು ಎನ್​​ಸಿಪಿ ಮುಖಂಡ ನವಾಬ್​ ಮಲಿಕ್ ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನವಾಬ್ ಮಲಿಕ್​, ಹೈಕೋರ್ಟ್ ಆದೇಶ ನೀಡುತ್ತಿದ್ದಂತೆ ಗೃಹ ಸಚಿವ ಅನಿಲ್ ದೇಶಮುಖ್ ಪಕ್ಷದ ಮುಖ್ಯಸ್ಥರಾಗಿರುವ​​ ಶರದ್​ ಪವಾರ್​ ಜೀ, ಹಾಗೂ ಇತರೆ ಮುಖಂಡರನ್ನ ಭೇಟಿಯಾಗಿ ತಾವು ಈ ಹುದ್ದೆಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾಗಿ ಮಾಹಿತಿ ನೀಡಿದ್ದಾರೆ.  

ಇದನ್ನೂ ಓದಿ: ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ವಾಜೆ ಮೇಲೆ ಅನಿಲ್​ ದೇಶಮುಖ್​ ಒತ್ತಡ: ಪರಮ್​ ಬೀರ್​ ಸಿಂಗ್

ಏನಿದು ಪ್ರಕರಣ?: ಶಿವಸೇನೆ-ಎನ್​ಸಿಪಿ ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಅನಿಲ್​ ದೇಶಮುಖ್​​ ಅವರು ಪೊಲೀಸ್ ಅಧಿಕಾರಿ ಸಚಿನ್​ ವಾಜೆ ಅವರನ್ನ ಬಳಸಿಕೊಂಡು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಪ್ರತಿ ತಿಂಗಳು 100 ಕೋಟಿ ರೂ. ಹಫ್ತಾ ವಸೂಲಿ ಮಾಡುವಂತೆ ಸೂಚನೆ ನೀಡಿದ್ದರು ಎಂದು ಐಪಿಎಸ್​ ಅಧಿಕಾರಿ ಪರಮ್​ ವೀರ್​ ಸಿಂಗ್​ ಆರೋಪಿಸಿದ್ದರು.  

ಪ್ರಮುಖವಾಗಿ ಬಾರ್​​ ಆ್ಯಂಡ್ ರೆಸ್ಟೋರೆಂಟ್​ಗಳಿಂದ 100 ಕೋಟಿ ರೂ. ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದಿದ್ದ ಅವರು, ಸುಮಾರು 1,750 ಬಾರ್​​ ಹಾಗೂ ರೆಸ್ಟೋರೆಂಟ್​​ಗಳ ಮೇಲೆ ಟಾರ್ಗೆಟ್ ಮಾಡುವಂತೆ ಹೇಳಿದ್ದರು. ಜತೆಗೆ ಪ್ರತಿಯೊಬ್ಬರಿಂದ 2ರಿಂದ 3 ಲಕ್ಷ ಹಣ ಸಂಗ್ರಹಿಸಿದರೆ ಅದು 40-50 ಕೋಟಿ ಆಗಲಿದ್ದು, ಉಳಿದ ಹಣ ಬೇರೆ ಮೂಲಗಳಿಂದ ಸಂಗ್ರಹಿಸುವಂತೆ ಮಾಡುವಂತೆ ಸೂಚನೆ ನೀಡಿದ್ದರು ಎಂದು ತಿಳಿಸಿದ್ದರು. ಇದು ಮಹಾರಾಷ್ಟ್ರದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಪ್ರತಿಪಕ್ಷ ಬಿಜೆಪಿ ದೇಶಮುಖ್​ ಅವರ ರಾಜೀನಾಮೆಗೆ ಒತ್ತಾಯಿಸಿತ್ತು.   

ಪ್ರಕರಣವನ್ನ ಸಿಬಿಐಗೆ ನೀಡುವಂತೆ ಕೋರಿ ಪರಮ್ ವೀರ್​​ ಸಿಂಗ್​ ಬಾಂಬೆ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಜತೆಗೆ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಪತ್ರ ಸಹ ಬರೆದಿದ್ದರು. ಇದರ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್​​​ 15 ದಿನದೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ದೇಶಮುಖ್ ತಮ್ಮ ಸ್ಥಾನಕ್ಕೆ​ ರಾಜೀನಾಮೆ ನೀಡಿದ್ದಾರೆ.  

ದೇಶಮುಖ್ ಹೇಳಿದ್ದೇನು!? : ಬಾಂಬೆ ಹೈಕೋರ್ಟ್​​ ಆದೇಶದ ನಂತರ ಗೃಹ ಸಚಿವರಾಗಿ ಮುಂದುವರಿಯುವುದಕ್ಕೆ ತಮಗೆ ನೈತಿಕತೆ ಇಲ್ಲವೆಂದು ಮಹಾರಾಷ್ಟ್ರ ಸಿಎಂಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ದೇಶಮುಖ್ ಉಲ್ಲೇಖಿಸಿದ್ದಾರೆ. 

Last Updated : Apr 5, 2021, 4:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.